ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆ ಆಗಿರುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಸರಕಾರದಿಂದ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ಉಚಿತವಾಗಿ ಪೂರೈಸಲು ಕ್ರಮವಹಿಸಲಾಗುತ್ತಿದೆ.
ಜಿಲ್ಲೆಗೆ 2,814 ಮೇವಿನ ಬಿತ್ತನೆ ಬೀಜಗಳ ಕಿರುಪೊಟ್ಟಣಗಳು ಪೂರೈಕೆಯಾಗಲಿದ್ದು, ಜಮೀನು ಮತ್ತು ನೀರಿನ ಮೂಲ ಹೊಂದಿರುವ ಹಾಗೂ ಜಾನುವಾರು ಸಾಕಣೆ ಮಾಡುತ್ತಿರುವ ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಗಳಾದ ಉಡುಪಿ ಮೊ.ನಂ: 9448134852, ಕಾಪು ಮೊ.ನಂ: 8217389838, ಬ್ರಹ್ಮಾವರ ಮೊ.ನಂ: 9448623690, ಕುಂದಾಪುರ ಮೊ.ನಂ: 9448163237, ಬೈಂದೂರು ಮೊ.ನಂ: 9741993045, ಕಾರ್ಕಳ ಮೊ.ನಂ: 9845753062 ಹಾಗೂ ಹೆಬ್ರಿ ಮೊ.ನಂ: 9986764615 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.











