ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಾರಿಕಾ ಪಿ.ವಿ. ಅವರ ಕೆನರಾ ಬ್ಯಾಂಕಿನ ಸಾಲಪತ್ರದಿಂದ (ಕ್ರೆಡಿಟ್ ಕಾರ್ಡ್) ಸೈಬರ್ ವಂಚಕರು 1,64,666 ರೂ. ಹಣ ಎಗರಿಸಿದ ಘಟನೆ ನಡೆದಿದೆ.
ಸಾರಿಕಾ ಅವರು ಅ.7 ರಂದು ಬ್ಯಾಂಕ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಹೊರಡುವ ವೇಳೆ ಸುಮಾರು 7.30ರ ವೇಳೆಗೆ ಮೊಬೈಲ್‌ನ ಒಳಪೆಟ್ಟಿಗೆಗೆ (ಇನ್ಬಾಕ್ಸ್) ಸಾಲಪತ್ರದಿಂದ 32,933.22ರ ನಂತೆ 5 ಬಾರಿ ಒಟ್ಟು 1.64 ಲಕ್ಷ ರೂ. ಕಡಿತ ಆಗಿರುವ ಸಂದೇಶ ಬಂದಿದೆ.
ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಕಡಿತಗೊಂಡಿರುವುದು ದೃಢಪಟ್ಟಿದೆ. ಸಾರಿಕಾ ಅವರು ಮೊಬೈಲ್‌ನಲ್ಲಿ ಯಾವುದೇ ರೀತಿಯ ರಹಸ್ಯ ಸಂಖ್ಯೆಯಾಗಲಿ (ಒಟಿಪಿ), ಕಾರ್ಡ್ ದೃಢೀಕರಣ ಸಂಕೇತವನ್ನಾಗಲಿ (ವೇರಿಫಿಕೇಶನ್ ಕೋಡ್) ಕೇಳದೆಯೇ ಕೆನರಾ ಬ್ಯಾಂಕ್ ಸಾಲಪತ್ರದ ಸಂಖ್ಯೆಯಿಂದ ಯಾರೋ ಸೈಬರ್ ಕಳ್ಳರು ಈ ರೀತಿ ಹಣವನ್ನು ಎಗರಿಸಿರುವುದಾಗಿದೆ.
ಈ ಬಗ್ಗೆ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















