Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಯಕ್ಷೋತ್ಸವ, ಯಕ್ಷಗವಿಷ್ಟ ಎರಡರಲ್ಲೂ ಆಳ್ವಾಸ್ ಧೀಂಕಿಟದ ವಿಜಯ ಪತಾಕೆ
    alvas nudisiri

    ಯಕ್ಷೋತ್ಸವ, ಯಕ್ಷಗವಿಷ್ಟ ಎರಡರಲ್ಲೂ ಆಳ್ವಾಸ್ ಧೀಂಕಿಟದ ವಿಜಯ ಪತಾಕೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ
    : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ 35ನೇ ವರ್ಷದ ಯಕ್ಷೋತ್ಸವ2026 ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಕ್ಷಗವಿಷ್ಟ2026-27 ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಪ್ರಥಮ ಬಹುಮಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ.

    Click Here

    Click Here

    Call us

    Click Here

    ಎಸ್‌ಡಿಎಂ ಕಾಲೇಜು ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕಾಲೇಜುಗಳ ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದು 15,000 ನಗದು ಬಹುಮಾನದೊಂದಿಗೆ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಅಮೃತ್ ಮತ್ತು ಹಸ್ತಾ ಬಹುಮಾನ ಪಡೆದರು.

    ನಿಟ್ಟೆ ವಿದ್ಯಾಸಂಸ್ಥೆ ಆಯೋಜಿಸಿದ ಯಕ್ಷಗವಿಷ್ಟ ಸ್ಪರ್ಧೆಯಲ್ಲಿ ಆಯ್ದ ಐದು ತಂಡಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಆಳ್ವಾಸ್ ತಂಡವು ಪ್ರಥಮ ಬಹುಮಾನ ಹಾಗೂ 20,000 ನಗದು ಬಹುಮಾನ ಗಳಿಸಿತು. ಈ ಸ್ಪರ್ಧೆಯಲ್ಲಿಯೂ ಪರ್ಯಾಯ ಫಲಕ ಆಳ್ವಾಸ್ ತಂಡದ ಪಾಲಾಯಿತು. ವೈಯಕ್ತಿಕ ವಿಭಾಗದಲ್ಲಿ ಅಮೃತ್, ಶ್ರೀನಿಧಿ, ನಿಹಾಲ್ ಮತ್ತು ಹಸ್ತಾ ಬಹುಮಾನ ಗಳಿಸಿದರು.

    ವಿಧಿ ವಿಪರ್ಯಾಸ’ಕ್ಕೆ ಎರಡು ವೇದಿಕೆಗಳಲ್ಲಿ ವಿಜಯದ ಮುದ್ರೆ:
    ರಾಮಾಯಣದ ದಂಡಕಾರಣ್ಯದ ಸೃಷ್ಟಿಯ ಕಥಾವಸ್ತುವನ್ನು ಒಳಗೊಂಡ ವಿಧಿ ವಿಪರ್ಯಾಸ ಪ್ರಸಂಗವನ್ನು ಎರಡೂ ಸ್ಪರ್ಧೆಗಳಲ್ಲಿ ಆಳ್ವಾಸ್ ತಂಡವು ಪ್ರದರ್ಶಿಸಿತು. ಆದಿತ್ಯ ಅಂಬಲಪಾಡಿ ಮತ್ತು ಮಯೂರ ನಾಯ್ಗರವರ ನಿರ್ದೇಶನದಲ್ಲಿ ಮೂಡಿಬಂದ ಈ ಯಕ್ಷಗಾನ ಪ್ರದರ್ಶನವು ಎರಡೂ ವೇದಿಕೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಂಡದ ಕಥಾನಕದ ಪರಿಣಾಮಕಾರಿ ನಿರೂಪಣೆ, ಪಾತ್ರಾಭಿನಯ, ಮಾತುಗಾರಿಕೆ, ನೃತ್ಯ, ಹಿಮ್ಮೇಳದ ಹೊಂದಾಣಿಕೆ ಮತ್ತು ರಂಗಪ್ರಸ್ತುತಿಯ ಸಮಗ್ರತೆ ಎಲ್ಲರ ಮೆಚ್ಚುಗೆ ಪಡೆಯಿತು.

    ತಂಡದ ಈ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ. 

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟ: ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ

    26/10/2026

    ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ: ಅಥ್ಲೆಟಿಕ್ಸ್‌ನಲ್ಲಿ ಮುಂದುವರೆದ ಜನತಾ ಜೈತ್ರಯಾತ್ರೆ

    26/10/2026

    ಖೋ-ಖೋ ಪಂದ್ಯಾಟ – ಆಳ್ವಾಸ್‌ ಪ.ಪೂ ಕಾಲೇಜಿಗೆ ಸತತ 19ನೇ ಬಾರಿ ಅವಳಿ ಪ್ರಶಸ್ತಿ

    25/10/2026
    Leave A Reply Cancel Reply

    12 − 7 =

    Call us

    Click Here

    Call us

    Call us

    Call us
    Highest Viewed Recently
    • ಯಕ್ಷೋತ್ಸವ, ಯಕ್ಷಗವಿಷ್ಟ ಎರಡರಲ್ಲೂ ಆಳ್ವಾಸ್ ಧೀಂಕಿಟದ ವಿಜಯ ಪತಾಕೆ
    • ಬ್ರಹ್ಮಾವರ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್: ಅಶಕ್ತರಿಗೆ ಸಹಾಯಧನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
    • ಕೋಟದಲ್ಲಿ ಭೀಕರ ಅಪಘಾತ – ಕಾರು ಡಿಕ್ಕಿಗೆ ಆರ್‌ಎಸ್‌ಎಸ್‌ ಮುಖಂಡ ಗುರುದಾಸ್ ಶೆಣೈ ಸ್ಥಳದಲ್ಲೇ ಸಾವು
    • ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯಲ್ಲಿ ಯಕ್ಷಗಾನ ಮೇಕಪ್ ಕಾರ್ಯಾಗಾರ
    • ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟ: ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.