ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಬಿ.ಬಿ. ಹೆಗ್ದೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಸಂಸ್ಥೆಗಳ ಆವರಣದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೆಸರಲ್ಲೊಂದಿನ ಕಾರ್ಯಕ್ರಮವನ್ನು ತಂತ್ರಾಡಿಯ ಶ್ರೀ ಚಿಕ್ಕು ಅಮ್ಮ ದೇವಸ್ಥಾನದ ಎದುರುಗಡೆ ಇರುವ ಕೆಸರುಗದ್ದೆಯಲ್ಲಿ ನಡೆಸಲಾಯಿತು. ಎನ್. ಎಸ್. ಎಸ್ ಸ್ವಯಂ ಸೇವಕರು ವಿಶಾಲಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಗ್ರಾಮಸ್ಥರ ಮನಗೆದ್ದರು.
ಮಂದಾರ್ತಿ ದೇವಾ ಸಹಕಾರಿ ಸಂಘ, ಮಂದಾರ್ತಿ ಇದರ ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಚಾವಡಿಮನೆ ಉದ್ಘಾಟಿಸಿದರು. ಶ್ರೀ ದುರ್ಗಾಪರಮೇಶ್ವರಿ ದೇವಳದ ಪದವಿಪೂರ್ವ ಕಾಲೇಜು ಮಂದಾರ್ತಿ ಇದರ ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಯುವ ಯಕ್ಷಗಾನ ಪ್ರಸಂಗಕರ್ತ ನಂದೀಶ್ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾl ಕೆ. ಉಮೇಶ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪದವಿ ಪೂರ್ವ ಕಾಲೇಜು ಮಂದಾರ್ತಿ ಕಚೇರಿ ಅಧೀಕ್ಷಕ ನಾಗರಾಜ್ ಶೆಟ್ಟಿ ಕಾಲೇಜಿನ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಎಂ.ಜಿ.ಎಂ ಕಾಲೇಜಿನ ಉಪನ್ಯಾಸಕ ಗಿರೀಶ್ ರಾವ್, ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ, ಶಿಬಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಹಾಗೂ ಪೂಜಾ ಕುಂದರ್, ತಂತ್ರಾಡಿಯ ಗ್ರಾಮಸ್ಥರಾದ ನವೀನ ಭಟ್, ಪ್ರಕಾಶ ನಾಯ್ಕ, ಸುರೇಶ್ ನಾಯ್ಕ, ಕಾಲೇಜಿನ ಸಿಬ್ಬಂದಿಗಳಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಹರೀಶ್ ಕಾಂಚನ್, ರೇವತಿ ದಿವಾಕರ್, ಸ್ವಾತಿ ಜಿ. ರಾವ್, ಶಿವಾನಿ ಅಡಿಗ, ಮೇಘ, ಅಣ್ಣಪ್ಪ ಶೆಟ್ಟಿ, ಮಹೇಶ್ ಪೂಜಾರಿ, ರೋಹಿತ್ ಶೆಟ್ಟಿ, ಸಚಿನ್, ಮಂಜುನಾಥ, ರಕ್ಷಿತ್ ಕಾಂಚನ್, ಸತೀಶ್ ಶೆಟ್ಟಿ, ರಮೇಶ್ ಮೊಗವೀರ ಉಪಸ್ಥಿತರಿದ್ದರು.
ಎನ್ಎಸ್ಎಸ್ ಸ್ವಯಂಸೇವಕರಾದ ಅಶ್ವಿತಾ ನಿರೂಪಿಸಿ, ರಶ್ಮಿತಾ ಸ್ವಾಗತಿಸಿ, ಅನುಶ್ರೀ ವಂದಿಸಿದರು.

















