ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಚರ್ಮ ಕುಶಲಕರ್ಮಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಡಿ ಸ್ವಾವಲಂಬಿ / ಸಂಚಾರಿ ಮಾರಾಟ ಮಳಿಗೆ, ನೇರಸಾಲ ಯೋಜನೆ, ಚರ್ಮಶಿಲ್ಪ ಯೋಜನೆ, ಮಹಿಳಾ ಕುಶಲಕರ್ಮಿಗಳಿಗೆ ಕಾಯಕಸ್ಪೂರ್ತಿ ಯೋಜನೆ, ಪಾದುಕೆ ಕುಟೀರ ಹಾಗೂ ಮಾರುಕಟ್ಟೆ ಸಹಾಯ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಯೋಜನೆಯ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳು ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು ಮೊ.ನಂ: 9980431954 ಹಾಗೂ 6362891017, ಕಲ್ಯಾಣಮಿತ್ರ ಸಹಾಯವಾಣಿ ಸಂಖ್ಯೆ: 9482300400 ಅಥವಾ ನಿಗಮದ ವೆಬ್ಸೈಟ್ http://lidkar.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ಸಂಯೋಕರ ಕಚೇರಿ ಪ್ರಕಟಣೆ ತಿಳಿಸಿದೆ.












