ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಉಪ್ಪುಂದ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ ದೇವಾಡಿಗ ಕೋಟೆಬೆಟ್ಟು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಎಲ್. ಮೇಲ್ಮನೆ ಅವರನ್ನು ಉಪ್ಪುಂದ ರಥಬೀದಿಯ ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶಿವರಾಜ ಬೆಮ್ಮಣ್ಣನಮನೆ, ಗೌರವಾಧ್ಯಕ್ಷರಾಗಿ ಮಂಜು ದೇವಾಡಿಗ ಅರೆಹಾಡಿ, ಜೊತೆ ಕಾರ್ಯದರ್ಶಿಯಾಗಿ ಅರುಣ್ ರಾಯರಡಿ, ಪ್ರಚಾರ ಸದಸ್ಯರಾಗಿ ಸೂರಜ್ ಮತ್ತು ಸಂಜಯ, ಕೋಶಾಧಿಕಾರಿಯಾಗಿ ಸುಧೀರ್ ಬಾಕಿಮನೆ , ಕ್ರೀಡಾ ಸಂಚಾಲಕರಾಗಿ ಭರತ ಕೋಟೆಬೆಟ್ಟು ಮತ್ತು ರಮೇಶ ಮಣ್ಣಿಮನೆ, ನಂದೀಶ್ ಮಣ್ಣಿಮನೆ, ನಾಗೇಂದ್ರ ಕೋಟೆಬೆಟ್ಟು ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ ಮೇಲ್ಮನೆ, ಸುಧಾಕರ ಹೊಳೆಬಾಗಿಲು, ಓಂಕಾರ ಡಿ ಉಪ್ಪುಂದ, ಭಾರ್ಗವ ಪುರಾಣಿಕ, ಸಂಘಟನಾ ಕಾರ್ಯದರ್ಶಿಯಾಗಿ ಕೇಶವ ಬಾಕಿಮನೆ, ಪ್ರಭಾಕರ ರಾಯರಡಿ, ಮಂಜುನಾಥ ರಥಬೀದಿ, ಮಂಜುನಾಥ ರಾಯರಡಿ, ವೆಂಕಟೇಶ ಕೋಟೆಬೆಟ್ಟು, ರಾಘವೇಂದ್ರ ಜೋಯಿಸರಹಿತ್ಲು ಅವರನ್ನು ಆಯ್ಕೆ ಮಾಡಲಾಯಿತು..












