ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ಸಂಘಟಕ ಗಜೇಂದ್ರ ಆಚಾರ್ ಕೋಣಿ ಸಂಯೋಜನೆಯ ಯಕ್ಷರಾತ್ರಿ ಈ ಬಾರಿ 12 ನೇ ವರ್ಷದ ಅದ್ಧೂರಿ ಕಾರ್ಯಕ್ರಮ ಕೋಣಿ ಮೂರೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಿಸೆಂಬರ್ 12 ಶನಿವಾರ ರಂದು ಶ್ರೀ ಪೆರ್ಡೂರು ಮೇಳದ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯಕ್ಷರಾತ್ರಿ ಸಾಧಕ ಪುರಸ್ಕಾರವನ್ನು ಹಿರಿಯ ಪತ್ರಕರ್ತ, ಶಿವರಾಮ ಕಾರಂತ್ ವಿಶೇಷ ಪುರಸ್ಕಾರ ಪುರಸ್ಕೃತ ಜಾನ್ ಡಿ ಸೋಜ ಕೋಣಿ ಹಾಗೂ ಹಿರಿಯ ಕೃಷಿಕ, ನಾಟಿ ವೈದ್ಯ ಸಿದ್ದಯ್ಯ ಶೆಟ್ಟಿ ಕಟ್ಕೇರಿ ಅವರಿಗೆ ನೀಡಲಾಗುತ್ತಿದೆ. ಪ್ರತಿಭಾ ಪುರಸ್ಕಾರವಾಗಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2025ನೇ ಸಾಲಿನ ಅಂತಿಮ ಪದವಿ ಪರಿಕ್ಷೆಯಲ್ಲಿ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ 3ನೇ ರ್ಯಾಂಕ್ ಪಡೆದ ಸುಹಾನಿ (ಶಂಕರ ಮೊಗವೀರ ಹಾಗೂ ಶಾಂತ ದಂಪತಿಗಳ ಪುತ್ರಿ), ಹಾಗೂ 8ನೇ ರ್ಯಾಂಕ್ ಪಡೆದ ಶ್ರದ್ದಾ ( ರಮೇಶ ಮೊಗವೀರ ಹಾಗೂ ವನಜ ದಂಪತಿಗಳ ಪುತ್ರಿ), 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಪರಿಕ್ಷೆಯಲ್ಲಿ ಶೇಕಡಾ 90% ಅಂಕ ಪಡೆದ ಸ್ಪೂರ್ತಿ ವಿ ಪೂಜಾರಿ ( ವಾಸುದೇವ ಪೂಜಾರಿ ಹಾಗೂ ಶಾಂತಾ ಪೂಜಾರಿ ಕೋಣಿ ಇವರ ಪುತ್ರಿ), ಕೋಣಿ ಜಗನಾಥ ರಾವ್ ಸರಕಾರಿ ಪ್ರೌಢ ಶಾಲೆಯ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕು ಶ್ರೇಯಾ (571) ( ದಿ ಶಶಿಧರ ಪೂಜಾರಿ ದಿ. ಜ್ಯೋತಿ ಇವರ ಸುಪುತ್ರಿ), ಪಂಚಮಿ (563) (ಸುರೇಶ ಮೊಗವೀರ ಸವಿತಾ ದಂಪತಿಗಳ ಪುತ್ರಿ) ಇವರಿಗೆ ನೀಡಲಾಗುತ್ತದೆ.
ಕ್ರೀಡಾ ಪುರಸ್ಕಾರ ವಾಗಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದ ಕು. ಆಕಾಂಕ್ಷ ಜೋಗಿ ( ಗುರುರಾಜ ಜೋಗಿ ಪ್ರಮೀಳಾ ದಂಪತಿಗಳ ಪುತ್ರಿ), ಜಿಲ್ಲಾಮಟ್ಟದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ *ಅನ್ವಿತ್ ಪೂಜಾರಿ ( ಅಶೋಕ ಪೂಜಾರಿ ಸುಜಾತ ದಂಪತಿಗಳ ಪುತ್ರ ) ಇವರಿಗೆ ಹಾಗೂ
ವಿಶೇಷವಾಗಿ ಕಲಾ ಗೌರವವಾಗಿಪೆರ್ಡೂರು ಮೇಳದ ಪ್ರಧಾನ ಮದ್ದಳೆ ವಾದಕ ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಗುತ್ತದೆ ಬಳಿಕ ಶ್ರೀ ಪೆರ್ಡೂರು ಮೇಳ ಹಾಗೂ ಅತಿಥಿಗಳ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷರಾತ್ರಿ ನಡೆಯಲಿದೆ ಎಂದು ಸಂಘಟಕರಾದ ಗಜೇಂದ್ರ ಆಚಾರ್ ಕೋಣಿ ತಿಳಿಸಿದ್ದಾರೆ












