Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟ: ರಬ್ಬರ್ ಪ್ಲಾಂಟ್ ವ್ಯವಹಾರದ ವಿಚಾರದಲ್ಲಿ ಗಲಾಟೆ – ಏರ್‌ ಗನ್‌ನಿಂದ ಗುಂಡೇಟು
    ಊರ್ಮನೆ ಸಮಾಚಾರ

    ಕೋಟ: ರಬ್ಬರ್ ಪ್ಲಾಂಟ್ ವ್ಯವಹಾರದ ವಿಚಾರದಲ್ಲಿ ಗಲಾಟೆ – ಏರ್‌ ಗನ್‌ನಿಂದ ಗುಂಡೇಟು

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ರಬ್ಬರ್ ಪ್ಲಾಂಟ್ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಉಂಟಾದ ವೈಮನಸ್ಸು ಹಿಂಸಾತ್ಮಕ ಘಟನೆಗೆ ತಿರುಗಿದ್ದು, ವ್ಯಕ್ತಿಯೊಬ್ಬರ ಮೇಲೆ ಏರ್‌ ಗನ್‌ನಿಂದ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆ ಸಮೀಪ ನಡೆದಿದೆ.

    Click Here

    Click Here

    Call us

    Click Here

    ಗಾಯಗೊಂಡ ವ್ಯಕ್ತಿಯನ್ನು ಕೇರಳ ಮೂಲದ, ಬಿಲ್ಲಾಡಿ ಗ್ರಾಮದ ನಿವಾಸಿ ಬಿಬಿನ್ ಮ್ಯಾಥ್ಯ ಎಂದು ಗುರುತಿಸಲಾಗಿದೆ. ಇವರು ಕಳೆದ ಸುಮಾರು 18 ವರ್ಷಗಳಿಂದ ಬಿಲ್ಲಾಡಿಯಲ್ಲಿ ವಾಸವಾಗಿದ್ದು, ರಬ್ಬರ್ ಪ್ಲಾಂಟ್ ವ್ಯವಹಾರ ನಡೆಸುತ್ತಿದ್ದಾರೆ.

    ಬಿಬಿನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಜೋಸ್ ಮತ್ತು ಸುರೇಶ್ ಎಂಬವರು ಸರಿಯಾಗಿ ಕೆಲಸ ಮಾಡದೆ ಪದೇ ಪದೇ ಹಣ ಕೇಳುತ್ತಿದ್ದ ಕಾರಣ ಕೆಲಸ ಬಿಟ್ಟು, ಬಿಲ್ಲಾಡಿಯಲ್ಲಿ ರಬ್ಬರ್ ಪ್ಲಾಂಟ್ ಹೊಂದಿರುವ ಸಂತೋಷ್ ಎಂಬವರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೇ ವಿಚಾರದಲ್ಲಿ ಆರೋಪಿಗಳ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

    ನವೆಂಬರ್ 5ರಂದು ರಾತ್ರಿ ಸುಮಾರು 10.10ರ ವೇಳೆಗೆ ಬಿಬಿನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಅಜಯ್ ಎಂಬಾತ ಕರೆ ಮಾಡಿ, ಜಾನುವಾರುಕಟ್ಟೆಯ ನಿಸರ್ಗ ಫಾರ್ಮ್ ಸಮೀಪ ಜೋಸ್ ಮತ್ತು ಸುರೇಶ್ ಸ್ಕೂಟಿಯಲ್ಲಿ ಬಂದು ಓಮ್ಮಿ ವಾಹನಕ್ಕೆ ಅಡ್ಡಹಾಕಿ ಕತ್ತಿಯಿಂದ ಹಲ್ಲೆ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಬಿಬಿನ್ ಅವರನ್ನು ಕಂಡ ಸಂತೋಷ್, ನಿನ್ನನ್ನು ಈಗಲೇ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

    ಬಳಿಕ ಸಂತೋಷ್ ತನ್ನೊಂದಿಗಿದ್ದ ವ್ಯಕ್ತಿಗೆ ಏರ್‌ಗನ್‌ನಿಂದ ಗುಂಡು ಹಾರಿಸುವಂತೆ ಸೂಚಿಸಿದ್ದು ಅದರಂತೆ ಆತ ಬಿಬಿನ್ ಅವರ ಬಲಕಾಲಿಗೆ ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಬಿಬಿನ್ ಅವರ ಬಲ ತೊಡೆ ಮತ್ತು ಬಲ ಸೊಂಟದ ಭಾಗಕ್ಕೆ ಪೆಲ್ಲೆಟ್ ತಾಗಿ ರಕ್ತಗಾಯವಾಗಿದೆ.

    Click here

    Click here

    Click here

    Call us

    Call us

    ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಈಜು ಸ್ಪರ್ಧೆ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರೋಶನಿ ರಾಜ್ಯ ಮಟ್ಟಕ್ಕೆ ಆಯ್ಕೆ

    07/11/2026

    ತ್ರಾಸಿ-ಮುಳ್ಳಿಕಟ್ಟೆ ಫ್ಲೈಓವರಲ್ಲಿ ಮೀನು ಸಾಗಾಟದ ವಾಹನ ಪಲ್ಟಿ: ಚಾಲಕ ಪಾರು

    07/11/2026

    ಕುಂದಾಪುರ: ಪಾರ್ಟ್‌ ಟೈಮ್ ಉದ್ಯೋಗದ ಹೆಸರಿನಲ್ಲಿ ಮಹಿಳೆಗೆ 1.86 ಲಕ್ಷ ರೂ. ವಂಚನೆ – ಪ್ರಕರಣ ದಾಖಲು

    07/11/2026
    Leave A Reply Cancel Reply

    four × three =

    Call us

    Click Here

    Call us

    Call us

    Call us
    Highest Viewed Recently
    • ಕೋಟ: ರಬ್ಬರ್ ಪ್ಲಾಂಟ್ ವ್ಯವಹಾರದ ವಿಚಾರದಲ್ಲಿ ಗಲಾಟೆ – ಏರ್‌ ಗನ್‌ನಿಂದ ಗುಂಡೇಟು
    • ಈಜು ಸ್ಪರ್ಧೆ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರೋಶನಿ ರಾಜ್ಯ ಮಟ್ಟಕ್ಕೆ ಆಯ್ಕೆ
    • ತ್ರಾಸಿ-ಮುಳ್ಳಿಕಟ್ಟೆ ಫ್ಲೈಓವರಲ್ಲಿ ಮೀನು ಸಾಗಾಟದ ವಾಹನ ಪಲ್ಟಿ: ಚಾಲಕ ಪಾರು
    • ಕುಂದಾಪುರ: ಪಾರ್ಟ್‌ ಟೈಮ್ ಉದ್ಯೋಗದ ಹೆಸರಿನಲ್ಲಿ ಮಹಿಳೆಗೆ 1.86 ಲಕ್ಷ ರೂ. ವಂಚನೆ – ಪ್ರಕರಣ ದಾಖಲು
    • ಸಿ.ಎ. ಫೌಂಡೇಶನ್ ಫಲಿತಾಂಶ: ಆಳ್ವಾಸ್‌ನ 20 ವಿದ್ಯಾರ್ಥಿಗಳು ಉತ್ತೀರ್ಣ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.