ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ ಇದರ ರಜತ ಮಹೋತ್ಸವದ ಅಂಗವಾಗಿ ನೂತನ ಲಾಂಛನ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ಕೋಟದ ಶ್ರೀ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಜರಗಿತು.
ಅಮೃತೇಶ್ವರೀ ದೇವಸ್ಥಾನದ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಹಾಗೂ ಧಾರ್ಮಿಕ ಚಿಂತ ಡಾ. ವಿದ್ವಾನ್ ವಿಜಯ ಮಂಜರು ಜೊತೆಯಾಗಿ ಲಾಂಛನ ಬಿಡುಗಡೆಗೊಳಿಸಿದರು.
ಬರುವ ಡಿಸೆಂಬರ್ 26ಕ್ಕೆ ನಡೆಯುವ ರಜತ ಮಹೋತ್ಸವವು ನಿರ್ವಿಘ್ನವಾಗಿ ನಡೆಯುವಂತೆ ಶ್ರೀ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ನರೇಂದ್ರ ಕುಮಾರ್ ಕೋಟ, ಪಂಚಶಕ್ತಿ ಸಂಘದ ಅಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ, ಉಪಾಧ್ಯಕ್ಷ ವಿಕೇಶ್ ಬಂಗೇರ ಪದಾಧಿಕಾರಿಗಳಾದ ಲಕ್ಷ್ಮಣ ಖಾರ್ವಿ, ಅನೀಶ್ ಖಾರ್ವಿ, ಅನಿಲ ಖಾರ್ವಿ, ಪ್ರವೀಣ ಖಾರ್ವಿ, ಕಿರಣ್ ಪುತ್ರನ್, ಆಕಾಶ್ ಕೋಡಿ, ಕಾರ್ಯದರ್ಶಿ ಸಂದೀಪ ಎಸ್. ಖಾರ್ವಿ, ಜೊತೆ ಕಾರ್ಯದರ್ಶಿ ಸಂದೇಶ ಖಾರ್ವಿ ಹಾಗೂ ಕೋಶಾಧಿಕಾರಿ ಸಂದೀಪ ಬಿ. ಖಾರ್ವಿ ಉಪಸ್ಥಿತರಿದ್ದರು.

















