Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ವೈವಿಧ್ಯಮಯ ಕಲಾಪ್ರಕಾರಗಳ ಅನಾವರಣ, ಸಂಪ್ರದಾಯದ ವೈಭವದೊಂದಿಗೆ ಆಳ್ವಾಸ್ ದೀಪಾವಳಿ ಸಂಭ್ರಮ
    alvas nudisiri

    ವೈವಿಧ್ಯಮಯ ಕಲಾಪ್ರಕಾರಗಳ ಅನಾವರಣ, ಸಂಪ್ರದಾಯದ ವೈಭವದೊಂದಿಗೆ ಆಳ್ವಾಸ್ ದೀಪಾವಳಿ ಸಂಭ್ರಮ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಹಾಗೂ ವಿವಿಧ ರಾಜ್ಯಗಳ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಪಾವಳಿ ಸಂಭ್ರಮ ಗಮನ ಸೆಳೆಯಿತು.

    Click Here

    Click Here

    Call us

    Click Here

    ವೈವಿಧ್ಯತೆಯಲ್ಲಿ ಏಕತೆಯ ಆಶಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಮೂಡುಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪ್ರದಾಯ, ಧಾರ್ಮಿಕ ಆಚರಣೆ ಹಾಗೂ ಕಲಾಪ್ರದರ್ಶನಗಳ ಸಮ್ಮಿಲನ ಕಂಡುಬಂತು.

    ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರಿನ ಶ್ರೀ ಮೂಕಾಂಬಿಕಾ ಚೆಂಡೆ ಬಳಗದ ಚೆಂಡೆ, ವಯೋಲಿನ್ ಹಾಗೂ ಕೀಬೋರ್ಡ್ಗಳ ಸಮ್ಮಿಲನದೊಂದಿಗೆ ಮೂಡಿಬಂದ ಸಿಂಗಾರಿ ಮೇಳ ವಿಶೇಷ ಮೆರುಗು ನೀಡಿತು.

    ದಕ್ಷಿಣ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಬಿಂಬಿಸುವ ದಶಶಂಖಗಳು, ದಶಕೊಂಬುಗಳು, 30 ಶ್ವೇತಛತ್ರಗಳು, ವೇದಮಂತ್ರಗಳನ್ನು ಪಠಿಸುವ ವಿಪ್ರರ ತಂಡ ಹಾಗೂ ಪ್ರಣತಿ ಹಿಡಿದ 50 ದೇವಕನ್ನಿಕೆಯರ ಭವ್ಯ ಮೆರವಣಿಗೆ ನಡೆಯಿತು. ಸ್ಯಾಕ್ಸೋಫೋನ್ ಮತ್ತು ನಾಗಸ್ವರಗಳ ಮಂಗಳನಾದದ ನಡುವೆ ಭತ್ತದ ತೆನೆ, ಮಾವು, ಹಲಸು, ಕೆಸು ಹಾಗೂ ಬಿದಿರಿನ ಕದಿರುಗಳನ್ನು ಹಿಡಿದ 500 ಪುಟಾಣಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿವಿಧ ಮಠಗಳ ಸ್ವಾಮೀಜಿಗಳು, ಕಟೀಲು ಹರಿನಾರಾಯಣ ಆಸ್ರಣ್ಣರು, ಕೆ. ಶ್ರೀಪತಿ ಭಟ್, ಶಶಿಧರ ಶೆಟ್ಟಿ ಬರೋಡಾ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೀನಾಕ್ಷಿ ಆಳ್ವ, ವಿವೇಕ್ ಆಳ್ವ, ಡಾ ವಿನಯ ಆಳ್ವ   ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು.

    Click here

    Click here

    Click here

    Call us

    Call us

    ತುಳುನಾಡಿನ ದೀಪಾವಳಿಯ ಪ್ರಮುಖ ಆಚರಣೆಯಾದ ಬಲೀಂದ್ರ ಪೂಜೆಯನ್ನು ಡಾ. ಎಂ. ಮೋಹನ್ ಆಳ್ವರು ಕುಟುಂಬ ಸಮೇತರಾಗಿ ನೆರವೇರಿಸಿದರು. ಬಲಿ ಮಹಾರಾಜನನ್ನು ಸಂಪ್ರದಾಯದಂತೆ ಭೂಲೋಕಕ್ಕೆ ಆಹ್ವಾನಿಸುವ ಆಚರಣೆಯನ್ನು ಕದ್ರಿ ನವನೀತ್ ಶೆಟ್ಟಿ ನಡೆಸಿಕೊಟ್ಟರು.

    ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಗುರು ರಾಮಾಂಜನೇಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮಠದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಕಟೀಲು ಹರಿನಾರಾಯಣ ಅಸ್ರಣ್ಣರು ಹಾಗೂ ಪುತ್ತಿಗೆ ಮಠದ ದೇವಸ್ಥಾನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್ ಉಪಸ್ಥಿತರಿದ್ದರು.

    ಕೃಷಿ ಸಂಸ್ಕೃತಿಯಲ್ಲಿ ಗೋವುಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಗೋಪೂಜೆ ನೆರವೇರಿಸಲಾಯಿತು. ಗೋವುಗಳಿಗೆ ಧೂಪಾರತಿ, ನಾಗಾರತಿ ಹಾಗೂ ಮಂಗಳಾರತಿ ಬೆಳಗಿಸಿ ಪೂಜೆ ಸಲ್ಲಿಸಲಾಯಿತು.

    ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಹೊಂದಿರುವ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಲಾಯಿತು. ಮಿಜಾರುಗುತ್ತು ಕೃಷಿ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ಡಾ. ಮೋಹನ್ ಆಳ್ವ ಅವರು ನೇಗಿಲು, ನೊಗ ಸೇರಿದಂತೆ ಕೃಷಿ ಪರಿಕರಗಳು ಹಾಗೂ ಧನ-ಧಾನ್ಯಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಪರಂಪರೆಯ ಮಹತ್ವವನ್ನು ಸಾರಿದರು. ವಿದ್ಯೆ, ಜ್ಞಾನ ಹಾಗೂ ಕಲೆಯ ಅಧಿದೇವತೆಯಾದ ಶಾರದಾ ದೇವಿಗೆ ಸರಸ್ವತಿ ಪೂಜೆ ನೆರವೇರಿಸಲಾಯಿತು.

    ಸಕಲ ಪೂಜಾ ವಿಧಿವಿಧಾನಗಳ ಬಳಿಕ ಆಳ್ವಾಸ್ ದೀಪಾವಳಿ ಸಂದೇಶ ನೀಡಿದ ಪ್ರೊ.ಪವನ ಕಿರಣಕೆರೆ, ಜೀವಿಗಳಲ್ಲಿ ಅವಿರತವಾದ ಶಕ್ತಿಯನ್ನು ಕಲ್ಪಿಸುವ ನರಮಂಡಲಗಳಿರುತ್ತವೆ. ಆ ಶಕ್ತಿಯೇ ನಮ್ಮಲ್ಲಿನ ಜ್ಞಾನದ ದೀಪ. ನಮ್ಮೊಳಗಿನ ಅಜ್ಞಾನವನ್ನು ಕತ್ತಲೆಯಂತೆ ದೂರ ಮಾಡುವ ಹಬ್ಬವೇ ದೀಪಾವಳಿ. ಒಳಿತಿನೆಡೆಗೆ ನಮ್ಮನ್ನು ಸಾಗಿಸುವ ಈ ಸಾಂಪ್ರದಾಯಿಕ ಹಬ್ಬವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜಾಗತಿಕ ಮಟ್ಟದಲ್ಲಿ ಆಚರಿಸುತ್ತಾ ಬಂದಿದೆ ಎಂದರು.

    ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಆಳ್ವಾಸ್ ಸಾಂಸ್ಕೃತಿಕ ರಸವೈಭವದಲ್ಲಿ ಸಂಸ್ಥೆಯ ಸುಮಾರು ಒಂದು ಸಾವಿರ ವಿದ್ಯಾರ್ಥಿ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಭಾರತದ ವಿವಿಧ ರಾಜ್ಯಗಳ ಜಾನಪದ, ಶಾಸ್ತ್ರೀಯ ಹಾಗೂ ಸಮಕಾಲೀನ ಕಲಾಪ್ರಕಾರಗಳೊಂದಿಗೆ ಶ್ರೀಲಂಕಾದ ಸಾಂಪ್ರದಾಯಿಕ ನೃತ್ಯವೂ ಪ್ರೇಕ್ಷಕರಿಗೆ ರಸದೌತಣ ನೀಡಿತು.

    ಯೋಗ ಪ್ರದರ್ಶನದೊಂದಿಗೆ ಆರಂಭವಾದ ಕಲಾಪ್ರದರ್ಶನದಲ್ಲಿ ಲಕ್ಷ್ಮಿ ರೂಪಕದ ಭರತನಾಟ್ಯ ಹಾಗೂ ಯಕ್ಷಗಾನದ ತೆಂಕುತಿಟ್ಟಿನಲ್ಲಿ ಮೂಡಿಬಂದ ‘ಹರಿವರಾಸನಂ’ ಯಕ್ಷಪ್ರಸಂಗ   ಮಂತ್ರ ಮುಗ್ಧರನ್ನಾಗಿಸಿತು. ಗುಜರಾತಿನ ದಾಂಡಿಯಾ ರಾಸ್, ಮಣಿಪುರದ ಸ್ಟಿಕ್ ಡ್ಯಾನ್ಸ್, ದೇಹದಾರ್ಢ್ಯ ಪ್ರದರ್ಶನ, ಮಲ್ಲಕಂಬ ಹಾಗೂ ರೋಪ್ ಪ್ರದರ್ಶನಗಳು ಗಮನ ಸೆಳೆದವು. ಉತ್ತರ ಪ್ರದೇಶದ ಕಥಕ್ ನೃತ್ಯದ ಮೂಲಕ ನವರಸಗಳ ಅಭಿವ್ಯಕ್ತಿ ಮನಮೋಹಕವಾಗಿ ಮೂಡಿಬಂತು.

    ಶ್ರೀಲಂಕಾ ತಂಡದ ಕ್ಯಾಂಡಿಯನ್ ನೃತ್ಯದ ವಿಭಿನ್ನ ಅನುಭವ ನೀಡಿದರೆ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು. ಸೃಜನಾತ್ಮಕ ನೃತ್ಯ ರೂಪಕದ ಬಳಿಕ ಬಡಗುತಿಟ್ಟಿನ ಯಕ್ಷಗಾನ ಶೈಲಿಯಲ್ಲಿ ಮೂಡಿಬಂದ ‘ಶ್ರೀರಾಮ ರಾಮಾಚಾರಿತಮಾನಸಂ’ ಗಮನ ಸೆಳೆಯಿತು. ವಿವಿಧ ಹಾಡುಗಳ ಹಿನ್ನೆಲೆಯೊಂದಿಗೆ ಪ್ರದರ್ಶಿಸಿದ ಬೊಂಬೆಯ ವಿನೋದಾವಳಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ವಿವಿಧ ಕಲಾಪ್ರಕಾರಗಳ ಸಮ್ಮಿಲನದೊಂದಿಗೆ ನಡೆದ ಸಾಂಸ್ಕೃತಿಕ ರಸವೈಭವಕ್ಕೆ ಕೊನೆಯಲ್ಲಿ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ವರ್ಣರಂಜಿತ ತೆರೆ ಎಳೆಯಿತು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಹಾಗೂ ನಿತೀಶ್ ಮಾರ್ನಾಡ್ ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

    17/11/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಯಕ್ಷಗಾನ ಕಲಾವಿದರ ಕುರಿತ ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟನೆ

    17/11/2026

    ಭಂಡಾರ್ಕಾರ್ಸ್ ಕಾಲೇಜು: ಕುಂದಥಾನ್ ಮ್ಯಾರಥಾನ್‌ನ ವೆಬ್ ಸೈಟ್ ಮತ್ತು ಪೋಸ್ಟರ್ ಬಿಡುಗಡೆ

    17/11/2026
    Leave A Reply Cancel Reply

    12 + 12 =

    Call us

    Click Here

    Call us

    Call us

    Call us
    Highest Viewed Recently
    • ಸಹಕಾರಿ ಸಂಸ್ಥೆಗಳು ರೈತರು ಹಾಗೂ ಜನಸಾಮಾನ್ಯರ ಸೇವೆಗೆ ಆದ್ಯತೆ ನೀಡಬೇಕು: ಪ್ರಕಾಶ್ಚಂದ್ರ ಶೆಟ್ಟಿ
    • ವೈವಿಧ್ಯಮಯ ಕಲಾಪ್ರಕಾರಗಳ ಅನಾವರಣ, ಸಂಪ್ರದಾಯದ ವೈಭವದೊಂದಿಗೆ ಆಳ್ವಾಸ್ ದೀಪಾವಳಿ ಸಂಭ್ರಮ
    • ತೆಕ್ಕಟ್ಟೆ ರೋಟರಿ ಕ್ಲಬ್‌ನಿಂದ ಉಚಿತ ಚರ್ಮರೋಗ ತಪಾಸಣಾ ಶಿಬಿರ
    • ಕಾರಂತರಂತಹ ಸಾಹಿತಿಯನ್ನು ಪಡೆದಿರುವುದು ನಾಡಿಗೆ ಹೆಮ್ಮೆ ತರುವಂತಹ ವಿಚಾರ: ಕನರಾಡಿ ವಾದಿರಾಜ ಭಟ್
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.