ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ತಿರುಮಲ ಯುವ ಕ್ರೀಡಾ ಮತ್ತು ಕಲಾ ಸಂಘ ರಿ. ತಗ್ಗರ್ಸೆ ಇದರ ದಶಮ ಸಂಭ್ರಮ ಕಾರ್ಯಕ್ರಮದ ಪೋಸ್ಟರ್ ಅನಾವರಣವು ಆದಿತ್ಯವಾರದಂದು ತಗ್ಗರ್ಸೆ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನೆರವೇರಿಸಲಾಯಿತು.

ಪೋಸ್ಟರನ್ನು ಹಿರಿಯ ರಂಗ ಕಲಾವಿದರಾದ ಗಣೇಶ್ ಕಾರಂತ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸಮಿತಿಯ ಸರ್ವ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.











