ಕುಂದಾಪ್ರ ಡಾಟ್ ಕಾಂ ಲೇಖನ| ಫೆ. 5, 2016
ಬೈಂದೂರು: ಎಸ್ ರಾಜು ಪೂಜಾರಿ. ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ಕಳೆದ 27 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡ ಅನುಭವಿ ರಾಜಕಾರಣಿ, ಸಹಕಾಾರಿ ಧುರೀಣ.
ರಾಜಕೀಯ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ತನ್ನದೇ ಆದ ಹೆಸರು ಗಳಿಸಿರುವ ರಾಜು ಪೂಜಾರಿ ಅವರು ಬೈಂದೂರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ದೂರಗಾಮಿ ಯೋಚನೆಯ ನಾಯಕ. ನೇರ-ನಿಷ್ಠುರ ವ್ಯಕ್ತಿತ್ವ, ಹಗಲಿರುಳೆನ್ನದೇ ಜನಸೇವೆ ಹಾಗೂ ಸಂಘಟನಾ ಚಾತುರ್ಯದಿಂದ ಬೈಂದೂರಿನ ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು.
ತಂದೆ ದಿ. ರಾಮ ಪೂಜಾರಿ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಸೇವೆಸಲ್ಲಿಸುತ್ತಾ ಬಂದಿದ್ದರಿಂದ ಪ್ರಭಾವಿತರಾಗಿದ್ದ ರಾಜು ಪೂಜಾರಿ ಅವರ, ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ತುಡಿತಕ್ಕೆ ಅಂದಿನ ಶಾಸಕ ದಿ. ಜಿ. ಎಸ್. ಆಚಾರ್ಯ ಅವರೊಂದಿಗಿನ ಒಡನಾಟದಿಂದ ಪ್ರೇರಣೆಯಾಯಿತು. ಬಿಕಾಂ ಪದವಿ ಪಡೆದ ಬಳಿಕ ಸಾಮಾಜಿಕ ರಂಗದಲ್ಲಿ ನೇರವಾಗಿ ಧುಮುಕಿ ಜನಸೇವೆಗಿಳಿದಿದ್ದರು. ತನ್ನ ನಾಯಕತ್ವ ಗುಣ ಹಾಗೂ ಸಂಘಟನಾ ಚಾತುರ್ಯದಿಂದಲೇ ಬೈಂದೂರಿನ ರಾಜಕೀಯ ರಂಗದ ಒಂದೊಂದೆ ಮೆಟ್ಟಿಲುಗಳನ್ನೇರಿ ಇಂದು ಒಬ್ಬ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ಲೇಖನ
1990ರಲ್ಲಿ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, 1994-95ರಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾಗಿ, 1998ರಿಂದ ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿ, ಕಾರ್ಯದರ್ಶಿಯಗಿ, ಪ್ರಸ್ತುತ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿ ಮುನ್ನಡೆಸಿದವರು. ಇದು ಕುಂದಾಪ್ರ ಡಾಟ್ ಕಾಂ ಲೇಖನ
ರಾಜಕೀಯದ ವಿವಿಧ ಸ್ತರದೊಂದಿಗಿನ ನಾಯಕರೊಂದಿಗಿನ ಒಡನಾಟದೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ತನ್ನ ವರ್ಚಸ್ಸು ಬೆಳೆಸಿಕೊಂಡು ಮುನ್ನಡೆದಿದ್ದ ರಾಜು ಪೂಜಾರಿ ಅವರು, 1995ರಲ್ಲಿ ಖಂಬದಕೋಣೆ ಜಿಪಂ ಕ್ಷೇತ್ರದಿಂದ ಸ್ವರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದರು. ಬಳಿಕ 1995ರಲ್ಲಿ ಮೊದಲ ಭಾರಿಗೆ ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮುಂದೆ 2000ನೇ ಇಸವಿಯಲ್ಲಿ ಶಿರೂರು ಕ್ಷೇತ್ರದಿಂದ ಉಡುಪಿ ಜಿಲ್ಲಾ ಪಂಚಾಯತ್‌ಗೆ ಆಯ್ಕೆಗೊಂಡು ಇದೇ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೇ, 2005ರಲ್ಲಿ ಬೈಂದೂರು ಕ್ಷೇತ್ರದಿಂದ ಮತ್ತೆ ಆಯ್ಕೆಗೊಂಡ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ನೂರಾರು ಜನಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂದೆ 2010ರಲ್ಲಿ ಮೀಸಲಾತಿ ದೊರಕದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ ತನ್ನ ಜನಪರ ಕಾರ್ಯ ಹಾಗೂ ತನ್ನೂರಿನ ಅಭಿವೃದ್ಧಿಯ ಚಿಂತನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಲೇ ಬಂದವರು. ಪ್ರಸ್ತುತ ಜಿಲ್ಲಾ ಕೆಡಿಪಿ ಸದಸ್ಯರಾಗಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ಲೇಖನ
ಸಹಕಾರಿ ಧುರಿಣ
ರಾಜಕೀಯದಷ್ಟೇ ಸಹಕಾರಿ ರಂಗದಲ್ಲಿಯೂ ರಾಜು ಪೂಜಾರಿ ಅವರು ಛಾಪು ಮೂಡಿಸಿದವರು. ಸಹಕಾರಿಗಳ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ತೊಡಗಿಸಿಕೊಂಡು ಜನಸಾಮಾನ್ಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.
ಕಳೆದ 21ವರ್ಷಗಳಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ; ಮರವಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕರಾಗಿ, ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಸ್ಕ್ಯಾಡ್ಸ್, ಟಿಎಪಿಸಿಎಂಎಸ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಯಡ್ತರೆ ಹಾಲು ಉತ್ಪಾದರ ಸಹಕಾರಿ ಸಂಘದ ನಿರ್ದೇಶಕರಾಗಿ; ಸಾಗರ್ ಕ್ರೆಡಿಟ್ ಕೋ-ಆಪರೇಟಿವ್‌ನ ಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ಲೇಖನ
ಎಲ್ಲಾ ರಂಗದಲ್ಲೂ ಸೈ
ಬೈಂದೂರಿನ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನಲ್ಲಿ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಉತ್ಕಷ್ಟವಾದ ಶೈಕ್ಷಣಿಕ ವಾತಾವರಣ ನಿರ್ಮಿಸುವುವಲ್ಲಿ, ಬೈಂದೂರಿನ ಶಾರದೋತ್ಸವ ಸಮಿತಿ, ಒತ್ತಿನಣೆ ಶ್ರೀ ರಾಘವೇಂದ್ರ ಸ್ವಾಮಿ ಮಠ, ಒತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ಸೇರಿದಂತೆ ಮುಂತಾಡೆದೆ ಅಧ್ಯಕ್ಷರಾಗಿ, ಧರ್ಮದರ್ಶಿಯಾಗಿ, ಸದಸ್ಯರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಧಾರ್ಮಿಕ ಪ್ರಜ್ಞೆಯನ್ನು ಗಟ್ಟಿಗೊಳಿಸುವಲ್ಲಿ, ಬೈಂದೂರು ತಾಲೂಕು ಹೋರಾಟದಲ್ಲಿ ರಾಜು ಪೂಜಾರಿ ಅವರ ಪಾತ್ರ ಎಂದಿಗೂ ಸ್ಮರಣೀಯ. ಇದು ಕುಂದಾಪ್ರ ಡಾಟ್ ಕಾಂ ಲೇಖನ
ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ರಾಜು ಪೂಜಾರಿ ಅವರು ಊರಿನ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುವಲ್ಲಿ ನಿರತರಾಗಿದ್ದಾರೆ.