ನೀವು ಪತ್ರಿಕೆಗೆ ಬರೆಯಬೇಕೆ? – ಹಾಗಿದ್ದರೆ ಈ ಪುಸ್ತಕ ಓದಿ!

Call us

Call us

Call us

‘ಪತ್ರಿಕೆಗೆ ಬರೆಯೋದು ಹೇಗೆ?’ ಎಂಬ ಪುಸ್ತಕದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕಾರಣವಿಷ್ಟೆ, ತಮ್ಮ ಫೇಸ್ಬುಕ್, ಟ್ವಿಟರ್ ಗೋಡೆಗಳಲ್ಲಿ ಬರೆದುಕೊಳ್ಳುವವರು, ಅದೇ ಬರಹವನ್ನು ಹೇಗೆ ಪತ್ರಿಕೆಯೊಂದಕ್ಕೆ ಬರೆಯಬಹುದು ಎಂಬುದನ್ನು ಈ ಪುಸ್ತಕ ಹೇಳುತ್ತಿದ್ದೆ.

Call us

Click Here

ಯುವ ಪತ್ರಕರ್ತ ವಿನಾಯಕ ಕೋಡ್ಸರ, ತಮ್ಮದೇ ಮಿಥಿಲಾ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರಗೆ ತರುತ್ತಿದ್ದಾರೆ. “ನಮ್ಮಲ್ಲಿ ಬರೆಯಬೇಕೆಂಬುದು ಬಹಳಷ್ಟು ಜನರ ಬಯಕೆ. ಬರೆಯುತ್ತಾರೆ ಕೂಡ. ಆದರೆ ಯಾವ ಪತ್ರಿಕೆಗೆ ಹೇಗೆ ಬರೆಯಬೇಕು? ಏನು ಬರೆಯಬೇಕು ಎಂದು ಗೊತ್ತಿಲ್ಲರುವುದಿಲ್ಲ. ಇನ್ನು ಕೆಲ ಪುರವಣಿಯಲ್ಲಿ ಕುಳಿತವರಿಗೆ ಲೇಖಕನಿಗೆ ಚ್ಯುತಿಯಾಗದಂತೆ ಹೇಗೆ ಎಡಿಟ್ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಅದಕ್ಕಿಂತ ಮುಖ್ಯವಾಗಿ ಪುರವಣಿಗಳು ಗಂಭೀರತೆ ಕಳೆದುಕೊಳ್ಳುತ್ತಿವೆ. ಓರ್ವ ಲೇಖಕನ ಲೇಖನಕ್ಕೆ ಪ್ರತಿಕ್ರಿಯಿಸುವ ಸೌಜನ್ಯತೆಯನ್ನು ಕಳೆದುಕೊಂಡಿದೆ ಎಂಬ ದೂರು ಇದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದರೆ ಉದ್ದನೆಯ ಇಡೀ ಲೇಖನವನ್ನು ಪೂರ್ತಿಯಾಗಿ ನೋಡುವ ವ್ಯವದಾನ ಹಲವರಿಗಿಲ್ಲ ಎಂಬುದು ಬಹುವಾಗಿ ಕಾಡುತ್ತಿತ್ತು. ಅದಕ್ಕೆ ಉತ್ತರವಾಗಿ ಈ ಪುಸ್ತಕ’ ಎಂದು ಕೋಡ್ಸರ ಬರೆದುಕೊಂಡಿದ್ದಾರೆ. ಅಲ್ಲಿಗೆ ಪುಸ್ತಕದ ಉದ್ದೇಶ ಮತ್ತು ಅದರಲ್ಲಿರುವ ವಸ್ತು ಸ್ಪಷ್ಟವಾಗಿದೆ.

ಕಾರ್ಯನಿರತ ಪತ್ರಕರ್ತರು, ಫ್ರೀಲಾನ್ಸ್ ಬರಹಗಾರರು ಇದರಲ್ಲಿ ಬರೆದಿರುವುದು ವಿಶೇಷ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್ ಚಕ್ರತೀರ್ಥ, ನವೀನ್ ಸಾಗರ್, ಶ್ರೀನಿಧಿ ಡಿ.ಎಸ್, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್, ಜಯದೇವ್ಪ್ರಸಾದ್ ಮೊಳೆಯಾರ್, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಿಕಾ ಬರವಣಿಗೆ ಕುರಿತು ಬರೆದಿದ್ದಾರೆ. ನಿರಂಜನ ವಾನಳ್ಳಿ ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ. ಫೆ.೨೦ರ ಶನಿವಾರ ಸಂಜೆ 4:30ಕ್ಕೆ ಕೆ.ಆರ್.ಸರ್ಕಲ್ಲಿನ ಯುವಿಸಿಇ ಆವರಣದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. ಆಕರ್ಷಕ ವಿನ್ಯಾಸದೊಂದಿಗೆ ಬಂದಿರುವ ಪುಸ್ತಕ, ಮುನ್ನುಡಿಯಲ್ಲಿ ನಿರಂಜನ ವಾನಳ್ಳಿಯವರು ಹೇಳಿದಂತೆ ಪತ್ರಿಕಾ ಬರವಣಿಗೆಗೆ ಮಾರ್ಗದರ್ಶಿಯಾಗಬಲ್ಲ ಕೃತಿ. ಮಿಸ್ ಮಾಡದೆ ಓದಿ.

***

ಬರಹಗಾರ ಶ್ರೀವತ್ಸ ಜೋಶಿ ಏನಂತಾರೆ??

Click here

Click here

Click here

Click Here

Call us

Call us

ಪತ್ರಿಕೆಗಳಿಗೆ ಬರೆಯುವುದು ಹೇಗೆ ಎಂಬ ವಿಚಾರದಲ್ಲಿ ಇನ್ನೂ ಮುಸುಕಿದ ಮಬ್ಬಿನಲ್ಲಿ ಇರುವವರನ್ನು ಕೈಹಿಡಿದು ನಡೆಸಬಲ್ಲ ಕರುಣಾಳು ಬೆಳಕು ಇದು! like emoticon ‘How to…’ ಪುಸ್ತಕವಾದ್ದರಿಂದ ಒಂಥರದಲ್ಲಿ self-help ರೀತಿಯದೂ ಹೌದು. ಕಳೆದ ಕೆಲವು ವರ್ಷಗಳಿಂದ ಮಾಧ್ಯಮಕ್ಷೇತ್ರದಲ್ಲಿ (ಪತ್ರಿಕೆಗಳಲ್ಲೂ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲೂ) ಕೆಲಸ ಮಾಡಿ ಅನುಭವವಿರುವ ಉತ್ಸಾಹಿ ತರುಣ, ಮುಖ್ಯವಾಗಿ ಅಹಂಕಾರ ಮತ್ತು ಪೊಳ್ಳು ಮದವನ್ನು ತಲೆಗೇರಿಸಿಕೊಳ್ಳದೇ ಪ್ರಾಕ್ಟಿಕಲ್ ಆಗಿ ಯೋಚಿಸುವ, ಸ್ನೇಹಿತ Vinayaka Kodsara ತನ್ನ ಸಮಾನಮನಸ್ಕ ಮಿತ್ರರನ್ನು ಸೇರಿಸಿಕೊಂಡು ರೂಪಿಸಿರುವ ಪುಸ್ತಕ “ಪತ್ರಿಕೆಗೆ ಬರೆಯೋದು ಹೇಗೆ?” ಈ ಶನಿವಾರ ಫೆಬ್ರವರಿ 20ರಂದು ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಆಗಬಲ್ಲ ಸಕಲ ಅರ್ಹತೆಗಳೂ ಈ ಪುಸ್ತಕಕ್ಕಿವೆ. ಅಲ್ಲದೇ, ಫ್ರೀಲಾನ್ಸ್ ಪತ್ರಕರ್ತರಾಗಬಯಸುವವರಿಗೆ, ಆಗಾಗ ಪತ್ರಿಕೆಗಳಿಗೆ ಲೇಖನ, ಪ್ರಬಂಧ, ಹರಟೆ, ನುಡಿಚಿತ್ರ ಮುಂತಾದುವನ್ನು ಬರೆದುಕಳಿಸುವ ಹವ್ಯಾಸವಿರುವವರಿಗೂ ಇದೊಂದು ಉತ್ತಮ ಮಾರ್ಗದರ್ಶಿ ಕೈಪಿಡಿ. ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿರುವವರ, ಪುರವಣಿಗಳ ಇನ್‌ಚಾರ್ಜ್ ಆಗಿರುವವರ ಲೇಖನಗಳು ಇದರಲ್ಲಿವೆ. ಜತೆಗೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಮುಖವಾಗಿ ಕಾಣುವ ಬರಹಗಾರರು ಮತ್ತು ಅಂಕಣಕಾರರು ಬರೆದ ಲೇಖನಗಳೂ ಇವೆ. ಒಟ್ಟಾರೆಯಾಗಿ ಈ ಪುಸ್ತಕದ ಉದ್ದೇಶ, ಅರ್ಥಪೂರ್ಣತೆ ಮತ್ತು ಅದಕ್ಕೆ ತಕ್ಕಂತಿರುವ ಹೂರಣ ನನಗೆ ಬಹಳ ಇಷ್ಟವಾಗಿವೆ. “ತಿಳಿಸು ಕಲಿಸು ಮನರಂಜಿಸು” ಎಂಬ ಶೀರ್ಷಿಕೆಯ ಲೇಖನವೊಂದನ್ನು ಈ ಪುಸ್ತಕದಲ್ಲಿ ನಾನೂ ಬರೆದಿದ್ದೇನೆ. ಅದಕ್ಕಿಂತ ಹೆಚ್ಚು ಒಳ್ಳೆಯ ಲೇಖನಗಳು, ಇತರರು ಬರೆದಂಥವು ಇವೆ.

ಈ ಪುಸ್ತಕದ ಬಗ್ಗೆ ,ಮತ್ತು ಇದರ ಬಿಡುಗಡೆ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದು ನನಗೆ ತುಂಬ ಹೆಮ್ಮೆ ಇದೆ. ಸಾಧ್ಯವಾದರೆ ನೀವೂ ಈ ಸಮಾರಂಭಕ್ಕೆ ಬನ್ನಿ. ಪುಸ್ತಕವನ್ನು ಕೊಂಡು ಓದಿ, ಇದರ ಪ್ರಯೋಜನ ಪಡೆದುಕೊಳ್ಳಿ. “ಶೋ-ಕೇಸ್ ಐಟಮ್‌ಗಿಂತ ಯುಟಿಲಿಟಿ ಐಟಮ್‌ಅನ್ನೇ ಉಡುಗೊರೆಯಾಗಿ ಕೊಡುವುದು” ನಿಮ್ಮ ಸತ್ಸಂಪ್ರದಾಯವೂ ಆಗಿದ್ದರೆ, ಈ ಪುಸ್ತಕವು ನಿಮ್ಮ ಆಪ್ತರಿಗೆ ಉಡುಗೊರೆ ಕೊಡುವುದಕ್ಕೂ ಹೇಳಿಮಾಡಿಸಿದ ಕೃತಿ ಎಂದು ನನ್ನ ಅಭಿಪ್ರಾಯ. ಆರೋಗ್ಯಕರ ಅಕ್ಷರಕೃಷಿಗೆ ಬೀಜ ಬಿತ್ತಿದ, ನೀರುಣಿಸಿದ ಒಳ್ಳೆಯ ಕೆಲಸವನ್ನು ನಾವೆಲ್ಲರೂ ಮಾಡಿದಂತಾಗುವುದು ಇಂತಹ ಪುಸ್ತಕಗಳನ್ನು ಹೆಚ್ಚುಹೆಚ್ಚು ಜನರಿಗೆ ಪರಿಚಯಿಸುವುದರ ಮೂಲಕವೇ.

Leave a Reply