ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಬೈಂದೂರು: ಕರಾವಳಿ ಹಾಗೂ ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿರುವ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರ ಬೈಂದೂರು ವಿಧಾನಸಭಾ ವ್ಯಾಪ್ತಿಯ ಪ್ರಮುಖ ಕ್ಷೇತ್ರಗಳಲ್ಲೊಂದು. ಈ ಸಾಲಿನಲ್ಲಿ ಕ್ಷೇತ್ರ ಪುನರ್‌ವಿಂಗಡೆಯಾದ್ದರಿಂದ ವಿಭಿನ್ನತೆಯಿಂದ ಗುರುತಿಸಿಕೊಂಡಿದೆ. ಕ್ಷೇತ್ರದಲ್ಲಿ ಮೀನುಗಾರಿಕೆ, ಕೃಷಿ ಪ್ರಮುಖ ಉದ್ಯೋಗವಾಗಿದ್ದು ಇಲ್ಲಿನ ರೈತರಿಗೆ ವ್ಯಾಪಕ ಕೃಷಿಯಾಧಾರಿತ ಸಮಸ್ಯೆಯಾದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿದ್ದಲ್ಲ.
ಈ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಿಜೂರು, ಕೆರ್ಗಾಲ್, ಕಂಬದಕೋಣೆ, ಕಿಮಂಜೇಶ್ವರ ಹಾಗೂ ನಾವುಂದ ಗ್ರಾಮಗಳು ಕರಾವಳಿ ಪ್ರದೇಶವನ್ನು ಹೊಂದಿದ್ದರೇ, ಹೇರೂರು ಗ್ರಾಮ ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿದೆ. ಈ ಬಾರಿ ಇಲ್ಲಿ ಮಹಿಳಾ ಮೀಸಲು ಸ್ಥಾನ ಬಂದಿದ್ದು, ಕಾಂಗ್ರೆಸ್ ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯಲಿದೆ, ಜೆಡಿಎಸ್ ಸ್ವರ್ಧಿಯ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಜಿಪಂ ಸದಸ್ಯೆ ಗೌರಿ ದೇವಾಡಿಗ ಸ್ಪರ್ಧಿಸುತ್ತಿದ್ದರೇ, ಬಿಜೆಪಿಯಿಂದ ಪ್ರಿಯಾದರ್ಶಿನಿ ದೇವಾಡಿಗ ಕಣಕ್ಕೀಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕೆರ್ಗಾಲ್ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷೆ ರೇವತಿ ಪೂಜಾರಿ ಸ್ವಧಾಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯಲಿದೆ. ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಕಾಂಗ್ರೆಸ್ ಅಭ್ಯರ್ಥಿಯಾದ ಗೌರಿ ದೇವಾಡಿಗ ಕಳೆಯ ಭಾರಿ ಚುನಾವಣೆಯಲ್ಲಿ ಶಿರೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸರ್ಧಿಸಿ ಜಯಗಳಿಸಿರುವುದಲ್ಲದೇ, ಜಿಲ್ಲಾ ಪಂಚಾಯಿತಿನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಈ ಬಾರಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕಂಬದಕೋಣೆ ಕ್ಷೇತ್ರದಿಂದ ಕಣಕ್ಕಿಳಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಿಯಾದರ್ಶಿನಿ ದೇವಾಡಿಗ ಬಿಇ ಪದವೀಧರೆ. ರಾಜಕೀಯ ಕ್ಷೇತ್ರದಲ್ಲಿ ಹೊಸ ಮುಖ. ಆಕೆಯ ತಾಯಿ ಶಾರದಾ ಬಿಜೂರು ೨೦೦೫ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ರ್ಸ್ಪಸಿ, ಜಯಗಳಿಸಿದಲ್ಲದೇ, ಜಿ.ಪಂ. ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಈ ಬಾರಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ತನ್ನ ಪುತ್ರಿ ಪ್ರಿಯಾದರ್ಶಿನಿ ದೇವಾಡಿಗರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೀಳಿಸಿದ್ದಾರೆ. ಇಲ್ಲಿ ಬಿಜೂರು ಹಾಗೂ ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿನಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ನಡೆಸುತ್ತಿದ್ದರೇ, ಕೆರ್ಗಾಲ್, ಕಂಬದಕೋಣೆ, ಹೇರೂರು, ನಾವುಂದದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಇಲ್ಲಿ 1995ರ ಚುನಾವಣೆಯಲ್ಲಿ ಬಿಜೆಪಿ ರವೀಂದ್ರ ಖಾರ್ವಿ, 2000ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಆಲಾನ್ಸ್ ಲೋಬೋ, 2005ರಲ್ಲಿ ಕಾಂಗ್ರೆಸ್ಸಿನ ಶಾರದಾ ಬಿಜೂರು, 2010ರಲ್ಲಿ ಬಿಜೆಪಿ ಬಾಬು ಶೆಟ್ಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಎರಡು ಪಕ್ಷಗಳು ಪ್ರಬಲ ಹೋರಾಟ ನಡೆಸುತ್ತಿದೆ.
ಕ್ಷೇತ್ರದ ಸಮಸ್ಯೆಗಳು:
* ಈ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಬಹುತೇಕ ಎಲ್ಲಾ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ.
* ಕೊಡೇರಿ ಕಿರು ಬಂದರು ಕಾಮಗಾರಿ ಪೂರ್ಣಗೊಂಡಿಲ್ಲ,
* ನೂರಾರು ಕುಟುಂಬಗಳಿಗೆ ಸಿಆರ್‌ಜಡ್ ಗೋಳು ತಪ್ಪಿಲ್ಲ.
* ಕಿರಿಮಂಜೇಶ್ವರ ಹಾಗೂ ನಾವುಂದ ಗ್ರಾಮದ ಬಹುತೇಕ ಮೀನುಗಾರಿಕಾ ರಸ್ತೆ ನೆಲಕಚ್ಚಿದೆ.
* ಹಲವು ‘ಗದಲ್ಲಿ ಸಮರ್ಪಕ ರಸ್ತೆ ಇಲ್ಲ, ದಾರಿದೀಪದ ಸಮಸ್ಯೆಯಿದೆ.