ಕನ್ನಡ ಮಾಧ್ಯಮದ ಬಗ್ಗೆ ಪೋಷಕರಲ್ಲಿ ಭರವಸೆ ಮೂಡಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರಿ ಪ್ರಾಥಮಿಕ ಶಾಲೆಗಳ ಹಿಂದಿನ ಸ್ಥಿತಿಗೆ ಪ್ರಸಕ್ತ ಸ್ಥಿತಿಯನ್ನು ಹೋಲಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ಅಲ್ಲೀಗ ಪೋಷಕರ ಹೊಣೆ ಮಕ್ಕಳನ್ನು ಕಳುಹಿಸುವುದಕ್ಕಷ್ಟೆ ಸೀಮಿತವಾಗಿ. ಆ ಬಳಿಕದ ಅವರ ಮಕ್ಕಳ ಎಲ್ಲ ಅಗತ್ಯಗಳನ್ನು ಸರಕಾರ ಪೂರೈಸುತ್ತಿದೆ. ಅಲ್ಲಿ ಆಂಗ್ಲ ಮಾಧ್ಯಮ ತರಗತಿಗಳೂ ನಡೆಯುತ್ತಿವೆ. ಅಷ್ಟಾದರೂ ಪೋಷಕರು ಅದರಿಂದ ಪ್ರಭಾವಿತರಾಗುತ್ತಿಲ್ಲ. ಅದರ ನಡುವೆ ಕೆಲವು ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೈಪೋಟಿ ನಡೆಯುತ್ತಿರುವ ವಿದ್ಯಮಾನವೂ ಇದೆ. ಅದಕ್ಕೆ ಆ ಶಾಲೆಗಳು ಪೋಷಕರಲ್ಲಿ ಮೂಡಿಸಿರುವ ಭರವಸೆ ಕಾರಣ. ಇದನ್ನು ಎಲ್ಲ ಶಾಲೆಗಳು ಗಮನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Call us

Click Here

ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಪ್ರಾಕ್ತನ ವಿದ್ಯಾರ್ಥಿ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಸ್ತಿ ಭಾಷಣ ಮಾಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಶುಭಾ ಮರವಂತೆ ಮೊದಲ ಬಾರಿಗೆ ಶಾಲೆಗೆ ಸೇರುವ ಕ್ಷಣ ವಿದ್ಯಾರ್ಥಿಯ ಬದುಕಿನ ಅಮೃತ ಘಳಿಗೆ. ಆ ಶಾಲೆ ವಿದ್ಯಾರ್ಥಿಯಲ್ಲಿ ಅಕ್ಷರದ ಬೀಜ ಬಿತ್ತುವ ಕೆಲಸ ಮಾಡುತ್ತದೆ; ಅವರಿಗೆ ಆತ್ಮವಿಶ್ವಾಸದ ಉಸಿರು ತುಂಬುತ್ತದೆ ಎಂದು ಹೇಳಿ ತಮ್ಮ ಆರಂಭಿಕ ಶಾಲಾ ಜೀವನದ ಮೆಲುಕು ಹಾಕಿದರು. ಮುಖ್ಯ ಅತಿಥಿಯಾಗಿದ್ದ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಮರವಂತೆ ರಾಜಶೇಖರ ಹೆಬ್ಬಾರ್ ವ್ಯಕ್ತಿಗೆ ಇರುವ ಹಲವು ಋಣಗಳಲ್ಲಿ ಶಾಲಾ ಋಣವೂ ಒಂದು. ಶಾಲೆಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯ, ಉತ್ಸವ ಅವರಿಗೆ ಆ ಋಣ ತೀರಿಸಲು ದೊರೆಯುವ ಅವಕಾಶ ಎಂದರು.

ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೀತಾರಾಮ ಕೊಠಾರಿ ವಂದಿಸಿದರು. ಸುಂದರ ಶೆಟ್ಟಿ ನಿರೂಪಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಸದಸ್ಯ ನಾಗರಾಜ ಪಟಗಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಎಂ. ಜಗದೀಶ ಅವಭೃತ, ದಯಾನಂದ ಬಳೆಗಾರ್, ಕಾರ್ಯದರ್ಶಿ ಎಂ. ಅಣ್ಣಪ್ಪ ಬಿಲ್ಲವ, ಶಾಲಾಭಿವೃದ್ಧಿಸಮಿತಿ ಅಧ್ಯಕ್ಷ ಗಣೇಶ ಪೂಜಾರಿ ವೇದಿಕೆಯಲ್ಲಿದ್ದರು.

ದಾನಿಗಳಿಗೆ, ಅಮೃತ ಮಹೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ, ಶಿಕ್ಷಕರಿಗೆ, ಅಕ್ಷರ ದಾಸೋಹ ಸಿಬಂದಿಗೆ ಗೌರವ ಸಲ್ಲಿಸಲಾಯಿತು. ಹಿಂದಿನ ವಿದ್ಯಾರ್ಥಿಗಳಿಗೆ ನಡೆಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಪ್ರಹಸನ, ಹಿಂದಿನ ಮಹಿಳಾ ವಿದ್ಯಾರ್ಥಿಗಳಿಂದ ಯಕ್ಷಗಾನ, ಪುರುಷರಿಂದ ನಾಟಕ ಪ್ರದರ್ಶಿಸಲ್ಪಟ್ಟುವು./

Click here

Click here

Click here

Click Here

Call us

Call us

Leave a Reply