ಚಿಣ್ಣರ ಚಿಲಿಪಿಲಿಗೆ ಚಾಲನೆ: ಮಕ್ಕಳ ಪ್ರತಿಭೆಯ ವಿಕಾಸಕ್ಕೆ ಸದಾ ಅವಕಾಶ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳ ಪ್ರತಿಭೆ ಅರಳಿಸುವ ಕಾರ್ಯಕ್ರಮಗಳಿಗೆ ಸದಾ ಅವಕಾಶ ನೀಡುವ ತರಬೇತಿಗಳು ನಿರಂತರವಾಗಿ ನಡೆಯುತ್ತಿರಲಿ ಭಾಗವಹಿಸದೇ ಯಾವುದೇ ಕೌಶಲ್ಯ ಪಡೆಯಲು ಸಾಧ್ಯವಿಲ್ಲ ಎಂದು ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರಿನ ಪದವೀಧರ ಮುಖ್ಯೋಪಾಧ್ಯಾಯರಾದ ಶ್ರೀ ಜನಾರ್ಧನ ಹೇಳಿದರು.

Call us

Click Here

ಯಸ್ಕೋರ್ಡ ಟ್ರಸ್ಟ್, ಭಾರತೀಯ ಯೂನೆಸ್ಕೋ ಕ್ಲಬ್,ಸುರಬಿ (ರಿ) ,ಹಾಗೂ ಸೌಜನ್ಯ ಬೈಂದೂರು ಇವರು ಇಂಡಿಯಾ ಫೌಂಡೇಶನ್ ಪಾರ್ ಆರ್ಟ್ಸ್ ಕಲಿಕಲಿಸು ಯೋಜನೆ ಸಹಕಾರದಲ್ಲಿ ಆಯೋಜಿಸಿದ ನೇಸರ ಕ್ಷಿತಿಜಧಾಮ ವತ್ತಿನೆಣೆಯಲ್ಲಿ ನಡೆದ ಚಿಣ್ಣರ ಚಿಲಿಪಿಲಿ ಬೇಸಿಗೆ ಶಿಬಿರ ಚಾಲನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಶಿಬಿರಾರ್ಥಿಗಳಾದ ತಿಲಕ ಹೋಬಳಿದಾರ್ ಹಾಗೂ ಇಂಚರ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಲಾವಿದ ಶಿಬಿರ ನಿರ್ದೇಶಕ ಗೀರಿಶ್ ಗಾಣಿಗ ಸಾರಥ್ಯದಲ್ಲಿ ವಿಶೇಷ ಚಿತ್ರಕಲಾ ಕಮ್ಮಟ ಗಾಳಿಪಟ ಹಾರಾಟ ಹಾಗೂ ಮರಳಿನೋಂದಿಗೆ ಆಟ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಾಗಾರದಲ್ಲಿ ಇಂಡಿಯಾ ಪೌಂಡೇಶನ್ ಪಾರ್ ಆರ್ಟ್ಸ ಕಲಿಕಲಿಸು ಯೋಜನೆ ಸ್ಥಳೀಯ ಸಂಯೋಜಕ ಗಣಪತಿ ಹೋಬಳಿದಾರ್ ಶಿಬಿರ ಸಂಚಾಲಕ ಸುಧಾಕರ ಪಿ ಬೈಂದೂರು ಶಿಕ್ಷಕ ರಾಘವೇಂದ್ರ ಕೆ. ಉಪಸ್ಥಿತರಿದ್ದರು

Leave a Reply