ಕುಂದಾಪುರ: ವಿಶ್ವ ರೆಡ್‌ಕ್ರಾಸ್ ದಿನಾಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ರಕ್ತ ಅಗತ್ಯತೆಯನ್ನು ಪೂರೈಸಿ ಮಾದರಿಯಾಗಿರುವ ಕುಂದಾಪುರದ ಬ್ಲಡ್ ಬ್ಯಾಂಕ್‌ಗೆ ಮತ್ತಷ್ಟು ಸುಸಜ್ಜಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ ೧೨ ಲಕ್ಷ ರೂ ಅನುದಾನ ನೀಡಲಾಗುವುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದ್ದಾರೆ.
ಕುಂದಾಪುರ ರೆಡ್ ಕ್ರಾಸ್ ಸೊಸೈಟಿ ವಾರ್ಷಿಕೋತ್ಸವ ಮತ್ತು ರೆಡ್‌ಕ್ರಾಸ್ ಸಂಸ್ಥಾಪಕರ ದಿನಾಚರಣೆ ಕುಂದಾಪುರ ಪದವಿಪೂರ್ವ ಕಾಲೇಜ್ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

Call us

Click Here

ಉತ್ತಮ ಮಾನವೀಯ ಸೇವೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆಗೆ ವಿಶ್ವಾಸವುಳ್ಳ ಸಂಸ್ಥೆ ಎಂಬ ಹೆಗ್ಗಳಿಕೆಯಿದೆ. ಸೈನಿಕರ ಕಷ್ಟ ನೋಡಿ ಮಾನವೀಯತೆ ನೆಲೆಯಲ್ಲಿ ಸ್ಥಾಪನೆಯಾದ ಸೊಸೈಟಿ ಮೂಲಕ ಹೆನ್ರಿ ಮಾನವೀಯ ನೆಲೆಯಲ್ಲಿ ವಿಶ್ವಮಟ್ಟಕ್ಕೆ ಏರಿದ್ದಾರೆ ಎಂದು ಹೇಳಿದರು.

ಕುಂದಾಪುರ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಎಸ್.ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಔಷಧ ನಿಯಂತ್ರಕ ಸಹಾಯಕಾಧಿಕಾರಿ ಷಾ, ಕಾರ‍್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸೋಸೈಟಿ ಉಡುಪಿ ಜಿಲ್ಲಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕುಂದಾಪುರ ರೆಡ್‌ಕ್ರಾಸ್ ಸೊಟೈಟಿ ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು. ರಂಜಿತ್ ಶೆಟ್ಟಿ ಮತ್ತು ಪ್ರಭಾಕರ್ ನಿರೂಪಿಸಿದರು.

Leave a Reply