ಅಂಪಾರು ದಿನೇಶ್ ವೈದ್ಯ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಸಾಂಸ್ಕೃತಿಕ ಸಂಘಟನೆ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಬೆಂಗಳೂರಿನ ಉದ್ಯಮಿ, ಸಮಾಜ ಸೇವಕ ದಿನೇಶ್ ವೈದ್ಯ ಅಂಪಾರು ಅವರಿಗೆ ಲಭಿಸಿದೆ. ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Click Here

Call us

Click Here

ಯಶಸ್ವಿ ಉದ್ಯಮಿ
ಕುಂದಾಪುರ ತಾಲೂಕಿನ ಅಂಪಾರಿನ ದಿನೇಶ್ ವೈದ್ಯ ಅವರು ಬೆಂಗಳೂರಿನಲ್ಲಿ ನೆಲೆನಿಂತು ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಇಂದು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರಲ್ಲದೇ, ಸಾಮಾಜಿಕ ಕಾರ್ಯಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಸಾಮಾಜಿಕ ಬದುಕಿನಲ್ಲಿ ಹಲವರಿಗೆ ಬೆಳಕಾದವರು. ಕಳೆದ ಒಂದೂವರೆ ದಶಕಗಳ ಹಿಂದೆ ಹೊಟ್ಟೆಪಾಡಿಗಾಗಿ ಬೆಂಗಳೂರು ನಗರಿಗೆ ತೆರಳಿದ್ದ ದಿನೇಶ್ ವೈದ್ಯ ಅವರು ಹೋಟೆಲ್ ಮುಂತಾದೆಡೆ ಕಾರ್ಯನಿರ್ವಹಿಸಿ ಮುಂದೆ 2002ರಲ್ಲಿ ಇನ್ನಿಬ್ಬರು ಸಹವರ್ತಿಗಳೊಂದಿಗೆ ‘ಬರಕೆ ಶೋಕೇಸ್ ಇಂಕ್’ ಸಂಸ್ಥೆಯನ್ನು ಹುಟ್ಟುಹಾಕಿ ಸ್ವಂತ ಉದ್ಯಮವನ್ನು ಆರಂಭಿಸಿದರು. ಮುಂದೆ ಅದು ಏನ್’ಸೈನ್ ಇಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡ ಬಳಿಕ 2012ರಲ್ಲಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದರು. ಕುಂದಾಪುರದಲ್ಲಿ ಫ್ಯಾಶನ್ ಲೋಕ, ಬೆಂಗಳೂರಿನಲ್ಲಿ ಕಾಫಿಪಾಯಿಂಟ್ ಇಂಡಿಯಾ ಎಂಬೆರಡು ಸಂಸ್ಥೆಯನ್ನು ಹುಟ್ಟುಹಾಕಿ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆದವರು.
ಕುಂದಾಪ್ರ ಡಾಟ್ ಕಾಂ ವರದಿ.

ಸಮಾಜ ಸೇವೆಯಲ್ಲಿ ನಿರಂತರ
ಉದ್ಯಮ ಕ್ಷೇತ್ರದ ಬಿಡುವಿರದ ಕೆಲಸಕಾರ್ಯಗಳ ನಡುವೆಯೂ ಸಮಾಜ ಸೇವೆಯಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ತನ್ನ ಕೊಡುಗೆಯಿತ್ತವರು ಈ ವೈದ್ದರು. ಅಂಗವಿಕಲರಿಗೆ ಕೃತಕ ಕಾಲಿನ ಜೋಡಣೆ ಶಿಬಿರ, ಅಂಪಾರಿನ ಸರಕಾರಿ ಶಾಲೆಗೆ ಶೈಕ್ಷಣಿಕ ಸಾಮಗ್ರಿಗಳನ್ನು ಪೂರೈಕೆ, ಬಡ ಯಕ್ಷಗಾನ ಕಲಾವಿದರಿಗೆ ಹಣಕಾಸಿನ ನೆರವು, ಗ್ರಾಮೀಣ ಶಾಲೆಗಳಿಗೆ ಗಣಕ ಯಂತ್ರ ಕೊಡುಗೆ, ಶಾಲೆಗಳಿಗೆ ಕುಡಿಯುವ ನೀರು ಹಾಗು ಸಮವಸ್ತ್ರ ಪೂರೈಗೆ ನೆರವು, ಅಂಪಾರಿನ ಶಾಲೆಯ ಭೋಜನ ಗೃಹದ ನಿರ್ಮಾಣಕ್ಕೆ ನೆರವು, ಗಂಗೊಳ್ಳಿಯ ಸರಕಾರಿ ಶಾಲೆಗೆ ಅಡುಗೆ ತಯಾರಿಯ ಪರಿಕರ, ನೆಲ್ಲಿಕಟ್ಟೆಯ ಸರಕಾರಿ ಶಾಲೆಯ ಆಟದ ಮೈದಾನದ ನಿರ್ಮಾಣಕ್ಕೆ ಹಣಕಾಸು ನೆರವು, ಸ್ವಚ್ಚ ಭಾರತ ಆಂದೋಲನದಲ್ಲಿ ಸಕ್ರಿಯ ಭಾಗವಹಿಸುವಿಕೆ ಸೇರಿದಂತೆ ಹತ್ತಾರು ಕಾರ್ಯಗಳಲ್ಲಿ ತೊಡಗಿಸಿಕೊಂಡವರು. /ಕುಂದಾಪ್ರ ಡಾಟ್ ಕಾಂ/ ಭವಿಷ್ಯದಲ್ಲಿ ಅವರ ಅಜ್ಜ ಅಜ್ಜಿಯ ಹೆಸರಿನಲ್ಲಿ ಸಾಂಸ್ಕೃತಿಕ ಟ್ರಸ್ಟ್ ಕಟ್ಟಿ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುಬೇಕೆಂಬ ಬಯಕೆ ಅವರದ್ದು. ಕುಂದಾಪ್ರ ಡಾಟ್ ಕಾಂ ವರದಿ.

ಸಾಧಕನಿಗೆ ಪ್ರಶಸ್ತಿಯ ಮುಕುಟ
ಸಮಾಜಸೇವೆಯಲ್ಲಿ ನಿರಂತವಾಗಿ ತೊಡಗಿಸಿಕೊಂಡಿರುವ ದಿನೇಶ್ ವೈದ್ಯ ಅವರಿಗೆ 2012ರಲ್ಲಿ ಯುವ ವಿಪ್ರ ವೇದಿಕೆಯಿಂದ “ವಿಪ್ರ ಮಣಿ” ಪುರಸ್ಕಾರ, 2014ರಲ್ಲಿ ಶೃಂಗೇರಿ ಭಾರತೀತೀರ್ಥ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ “ಕಲಾಪೋಷಕ” ಪ್ರಶಸ್ತಿ, 2015ರಲ್ಲಿ ‘ಸಾಧಕ ರತ್ನ’, ಯಕ್ಷಕಲಾ ಸಂಘಟಕರು ಬೆಂಗಳೂರು ವತಿಯಿಂದ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಸೇರಿದಂತೆ ಹಲವಾರು ಶೈಕ್ಷಣಿಕ ಸಂಸ್ಥೆಗಳು ಹಾಗು ಸಾಂಸ್ಕೃತಿಕ ಸಂಘಗಳು ಗೌರವಿಸಿವೆ. ಮೇ.18ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಅಂಪಾರಿನ ಕುವರ
ಅಂಪಾರಿನ ಸುಕುಮಾರ ವೈದ್ಯ ಮತ್ತು ಶೈಲಜಾ ವೈದ್ಯ ಅವರ ಪುತ್ರರಾದ ದಿನೇಶ್ ವೈದ್ಯ ಅವರು ಅಂಪಾರು, ನೆಲ್ಲಿಕಟ್ಟೆಯಲ್ಲಿ ಪ್ರೌಢಶಾಲೆವರೆಗಿನ ಶಿಕ್ಷಣವನ್ನು, ಭಂಡಾರ‍್ಸ್‌ಕಾರ‍್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು, ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೋಮೊಬೈಲ್ ಡಿಪ್ಲೋಮಾ ಹಾಗೂ ಬೆಂಗಳೂರು ಕ್ಯಾಡ್ ಶಿಕ್ಷಣ ಕೇಂದ್ರ ಅಟೋ ಕ್ಯಾಡ್ ಮತ್ತು ಎಮ್ ಡಿಟಿ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಮಡದಿ ಪ್ರಾಂಜಲಿ ವೈದ್ಯ ಹಾಗೂ ಮಕ್ಕಳಾದ ಅಮೋಘ್ ವೈದ್ಯ ಅನುಷ್ಕಾ ವೈದ್ಯ ಸುಖಿ ಸಂಸಾರ ನಡೆಸುತ್ತಿದ್ದಾರೆ. / ಕುಂದಾಪ್ರ ಡಾಟ್ ಕಾಂ ವರದಿ./

Click here

Click here

Click here

Call us

Call us

Leave a Reply