ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಕುಂದಾಪುರದ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ನರ್ಸರಿ ಮತ್ತು ಪ್ರಾಥಮಿಕ ಶಾಲೆ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಜಾಗತೀಕರಣದ ಭರಾಟೆ, ಶಿಕ್ಷಣದ ವ್ಯಾಪಾರೀಕರಣ, ಆಡಂಬರ ಮತ್ತು ಶೋಕಿಗಳ ಅಬ್ಬರದ ನಡುವೆ ನೈಜ ಶಿಕ್ಷಣವೆಂಬುದು ಕಳೆದು ಹೋಗುತ್ತಿರುವ ಸಂದರ್ಭದಲಿಯೂ ಸಾಮಾಜಿಕ ಬದ್ಧತೆಯಿಂದ, ಶಿಕ್ಷಣದ ನೈಜ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಶಾಲೆ.

Call us

Click Here

ಕಳೆದ ನಲವತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಶಾಲೆಯಲ್ಲಿ ಸುಮಾರು 1400 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಎಳೆಯ ಪ್ರಾಯದ ವಿದ್ಯಾರ್ಥಿಗಳ ಭಾವನಾತ್ಮಕ, ಸಾಮಾಜಿಕ ಮತ್ತು ಮನೋವೈಜ್ಞಾನಿಕ ಬೆಳವಣಿಗೆಯನ್ನು ಕೇಂದ್ರವಾಗಿರಿಸಿಕೊಂಡು ಈ ಶಾಲೆ ಕಾಲದಿಂದ ಕಾಲಕ್ಕೆ ನೂತನ ಬೋಧನ ವಿಧಾನಗಳನ್ನು ಅಳವಡಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ವಿಶಿಷ್ಟ ಕಳಕಳಿಯಿಂದ ಕಾರ್ಯ ನಿರ್ವಹಿಸುತ್ತಿದೆ.

hmm schoolಮಕ್ಕಳ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಗೆ ಬೇಕಾಗಿರುವುದು ಶಿಕ್ಷಕರ ಮತ್ತು ಪೋಷಕರ ಉತ್ತಮ ಮಾರ್ಗದರ್ಶನ ಮತ್ತು ಎಣೆಯಿಲ್ಲದ ಪ್ರೀತಿ ಮಾತ್ರವೇ ಎನ್ನುವುದನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಶಾಲೆ ಪೋಷಕರಿಗಾಗಿ ವಿಶೇಷ ಕಾರ್ಯಗಾರಗಳನ್ನು ನಡೆಸುತ್ತಿದೆ. ಕೌಶಲ್ಯ ಭರಿತ ಅನುಭವಿ ಮತ್ತು ಉತ್ಸಾಹಿ ಶಿಕ್ಷಕ ವೃಂದದವರ ಸಂಘಟಿತ ಮತ್ತು ಮಾನವೀಯ ನೆಲೆಯ ವೃತ್ತಿ ನಿರ್ವಹಣೆ ಮಕ್ಕಳಲ್ಲಿ ಹೊಸ ಜೀವನ ಚೈತನ್ಯಗಳನ್ನು ತುಂಬುತ್ತಿದೆ. ಪ್ರತೀ ಮಗುವಿನ ಕಲಿಕಾ ಸಮಸ್ಯೆಯ ಹಿನ್ನಲೆಯನ್ನು ಅಧ್ಯಯನ ಮಾಡಿ, ಅದರ ಆಸಕ್ತಿ ಮತ್ತು ಅವಶ್ಯಕತೆಗಳಿಗನುಗುಣವಾಗಿ ಕಲಿಯಲು ಸಹಕರಿಸುವ ವಾತಾವರಣವನ್ನು ಇಲ್ಲಿ ನೋಡಬಹುದು.

ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸ್ಪಷ್ಟ ಮತ್ತು ನಿರರ್ಗಳವಾದ ಮಾತು, ಓದು, ಬರಹ ಹಾಗೂ ಉಳಿದ ವಿಷಯಗಳಲ್ಲಿನ ಮೂಲಕಲ್ಪನೆಗಳ ಬುನಾದಿಯನ್ನು ಭದ್ರಪಡಿಸುವುದರ ಜೊತೆಗೆ ವಿಸೃತ ಜ್ಙಾನವನ್ನು ಗಳಿಸಲು ಅಗತ್ಯವಿರುವ ಕಲಿಕಾ ವಾತಾವರಣದ ನಿರ್ಮಾಣ ಈ ಶಾಲೆಯ ಇತರೆ ಪ್ರಮುಖ ಆದ್ಯತೆಗಳು.

ಪೋಷಕರ ಆರ್ಥಿಕ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಎಂದೂ ಮುಖ್ಯವಾಗಿಸದೇ ಮೌಲ್ಯ ಬದ್ಧ ಆಂಗ್ಲ ಮಾಧ್ಯಮದ ಶಿಕ್ಷಣ ಹಕ್ಕುದಾರನಿಗೆ ಸಲ್ಲತಕ್ಕದ್ದು ಎನ್ನುವ ಮನೋಭಾವ ಶಾಲೆಯ ಆಡಳಿತ ಮಂಡಳಿಯದ್ದು. ಇನ್ನು ಕೆಲವೇ ದಿನಗಳಲ್ಲಿ ವಿಶಾಲ ಹಾಗೂ ಸುಸಜ್ಜಿತ ಕ್ಯಾಂಪಸ್‌ಗೆ ಈ ಶಾಲೆ ಸ್ಥಳಾಂತರಗೊಳ್ಳಲಿದೆ. ಶಾಲಾ ನಿರ್ವಹಣೆಯಲ್ಲಿ ಅತ್ಯಗತ್ಯವಾಗಿರುವ ಪೂರಕ ವ್ಯವಸ್ಥೆಗಳಾದ ವಾಹನ ಸೌಕರ್ಯ, ಭೋಜನ ವ್ಯವಸ್ಥೆ, ಬೋಧಕೇತರ ತಂಡದ ಕಾರ್ಯ ನಿರ್ವಹಣೆ ಹಾಗೂ ಇತರೆ ಎಲ್ಲಾ ವಿಭಾಗಗಳಲ್ಲಿ ಅತ್ಯತ್ಕೃಷ ಸೇವೆ ಲಭ್ಯಗೊಳಿಸುತ್ತಿದ್ದೇವೆಂಬ ಅದಮ್ಯ ವಿಶ್ವಾಸ ಸಂಸ್ಥೆಗಿದೆ.

Click here

Click here

Click here

Click Here

Call us

Call us

ಓದು, ಬರಹ, ಗಣಿತ ಶಾಲೆಗಳಲ್ಲಿ ಪ್ರಮುಖವಾದ ವಿಷಯಗಳು ನಿಜ. ಆದರೆ ಅವೆಲ್ಲವೂ ಒಬ್ಬ ವ್ಯಕ್ತಿಯನ್ನು ಹೆಚ್ಚೆಚ್ಚು ಮಾನವೀಯವಾಗಿ ಮಾಡಿದಾಗಲೇ ನಾವು ನೀಡಿದ ಶಿಕ್ಷಣ ಸಾರ್ಥಕವಾಗಿ ಅವರ ಹುಟ್ಟು ಧನ್ಯತೆಯ ಬಿಂದುವನ್ನು ಕಾಣುವಂತಾಗುವುದು. ಅಂತೆಯೇ ನಮ್ಮ ಶಾಲೆಯಿಂದ ವಿವೇಕವಂತರಾಗಿ ಹೊರಹೋಗುವ ಮಕ್ಕಳನ್ನು ಅತ್ಯಂತ ಸಭ್ಯ ವ್ಯಕ್ತಿಗಳಾಗಿ, ಅತ್ಯುಚ್ಛ ನಾಗರಿಕರಾಗಿ ಸಮಾಜ ಸ್ವೀಕರಿಸಿದಾಗಲೇ ನಮ್ಮ ವೃತ್ತಿ ಪವಿತ್ರವಾಗುವುದು ಮತ್ತು ಶಿಕ್ಷಣದ ಈ ಮಾನವೀಕರಣ ಪ್ರಕ್ರಿಯೆಯಲ್ಲಿ ಪೋಷಕರ ಪಾತ್ರ ಶಿಕ್ಷಕರಷ್ಟೇ ಪ್ರಭಾವಶಾಲಿಯಾದುದು ಎನ್ನುವ ದೃಢವಿಶ್ವಾಸ ಪ್ರಾಂಶುಪಾಲೆ ಚಿಂತನಾ ರಾಜೇಶ್‌ರದ್ದು. ಆ ದಿಸೆಯಲ್ಲಿಯೇ ವಿದ್ಯಾಸಂಸ್ಥೆಯ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರವನ್ನು ನೀಡುವಲ್ಲಿ ಚಿಂತನಾ ರಾಜೇಶ್ ಕಾರ್ಯೋನ್ಮಖರಾಗಿದ್ದಾರೆ.

ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಸಂಸ್ಥೆ
BM-Sukumar-Shettyಕುಂದಾಪುರ ಪರಿಸರದಲ್ಲಿ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳು ವಿಪುಲವಾಗಿ ತೆರೆದುಕೊಳ್ಳದ ಕಾಲಘಟ್ಟದಲ್ಲಿ ಅಂದರೆ ೧೯೭೫ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ. ಕುಂದಾಪುರದ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಮೊದಲು ಆರಂಭಿಸಿದ್ದು ನರ್ಸರಿ ತರಗತಿಯನ್ನು. ಇಂದು ಅದು ಪದವಿ ಶಿಕ್ಷಣದ ವರೆಗೆ ಬೆಳೆದು ನಿಂತು ರಾಜ್ಯದಾದ್ಯಂತ ತನ್ನ ಕೀರ್ತಿಯನ್ನು ಪಸರಿಸುತ್ತಿದೆ. ಕುಂದಾಪುರ ತಾಲೂಕಿನ ವಿಭಿನ್ನ ಗ್ರಾಮೀಣ ಪ್ರದೇಶಗಳ ಬಡಕುಟುಂಬಗಳನ್ನು ಪ್ರತಿನಿಧಿಸುವ ಪ್ರತಿ ಮಗುವಿಗೂ ಆಂಗ್ಲ ಮಾಧ್ಯಮ ಶಿಕ್ಷಣದ ಅವಕಾಶಗಳನ್ನು ತೆರೆದಿಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಜನ್ಮ ತಾಳಿದ ಈ ಸಂಸ್ಥೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿಯೊಂದಕ್ಕೆ ಕಾರಣವಾಗಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಂಸ್ಥೆಗಳಲ್ಲಿ ವಿಪುಲವಾದ ಅವಕಾಶಗಳಿದ್ದು, ಎಲ್ಲಾ ರಂಗದಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಸ್ಥೆಯು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

ಶಿಕ್ಷಣ ಕ್ರಾಂತಿಯ ರೂವಾರಿ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ
ಕುಂದಾಪುರ ಎಜುಕೇಶನ್ ಸೊಸೈಟಿಯ ಯಶಸ್ಸಿನ ಹಿಂದಿನ ರೂವಾರಿ ಅದರ ಅಧ್ಯಕ್ಷರು ಹಾಗೂ ಸಂಚಾಲಕರಾದ ಶ್ರೀ ಬಿ. ಎಂ ಸುಕುಮಾರ ಶೆಟ್ಟಿಯವರು. ಕುಂದಾಪುರ ಎಜುಕೇಶನ್ ಸೊಸೈಟಿಯ ವ್ಯಾಪ್ತಿಯಲ್ಲಿ ಬರುವ ನಾಲ್ಕು ಸಂಸ್ಥೆಗಳನ್ನು ನಾಡಿನ ಮಾದರಿ ಸಂಸ್ಥೆಯಾಗಿ ರೂಪಿಸಿದ ಹೆಗ್ಗಳಿಕೆ ಇವರದ್ದು. ಸಮಾಜದ ಕಟ್ಟಕಡೆಯ ಮಗುವನ್ನೂ ವಿದ್ಯಾವಂತನನ್ನಾಗಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲಿರುಳೂ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸುತ್ತಿರು ಇವರ ಇಚ್ಛಾಶಕ್ತಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ಶ್ರೀಯುತರು ತಮ್ಮ ಯೋಚನೆ, ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದ ಈ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಶ್ರೀಯುತರ ದಕ್ಷ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ಎಲ್ಲಾ ಸಂಸ್ಥೆಗಳನ್ನು ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯನ್ನಾಗಿ ರೂಪಿಸಬೇಕೆಂಬ ಉತ್ಕಟ ಹಂಬಲವನ್ನು ಅವರು ಹೊಂದಿದ್ದಾರೆ.

  • ಸಂಪರ್ಕಿಸಿ : 08254 – 231292

 

ರೆಸ್ಪಾನ್ಸ್ ಕಂಟೆಂಟ್

Leave a Reply