ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ನರ್ಸರಿಯಿಂದ ಆರಂಭಗೊಂಡು ಪದವಿ ಶಿಕ್ಷಣದ ವರಗೆ ಶೈಕ್ಷಣಿಕ ಸಂಸ್ಥೆಯನ್ನು ಹುಟ್ಟುಹಾಕಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕುಂದಾಪುರ ಎಜುಕೇಶನ್ ಸೊಸೈಟಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅತ್ಯುನ್ನತ ಶಿಕ್ಷಣವನ್ನು ಪಡೆಯುವ ಕನಸನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ.
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು
ಪದವಿ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನೈಜ ಕಳಕಳಿಯೊಂದಿಗೆ ರೂಪ ತಳೆದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕಡಿಮೆ ಅವಧಿಯಲ್ಲಿಯೇ ಶಿಕ್ಷಣ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. 1,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜು ಆರಂಭದ ದಿನಗಳಲ್ಲಿ ಭೌತಿಕ ಕೊರತೆಯ ನಡುವೆಯೂ ಉತ್ಕೃಷ್ಟ ಸಾಧನೆ ಮಾಡುತ್ತಿದ್ದುದು ಸಂಸ್ಥೆಯ ಬೆಳವಣಿಗೆಯ ವೇಗವನ್ನು ಉಲ್ಲೇಕಿಸುವಂತಿದೆ. ಈ ವರ್ಷದಿಂದ ವಾರಾಹಿ ನದಿಯ ಮಗ್ಗಲಿನ ಪ್ರಾಕೃತಿಕ ಸೊಬಗಿನ ನಡುವೆ, ನಗರದ ಗದ್ದಲದಿಂದ ಸಾಕಷ್ಟು ಅಂತರವಿರುವಲ್ಲಿ ನೂತನ ಕಟ್ಟಡ ತಲೆಯೆತ್ತಿ ನಿಂತಿದೆ. ಶಿಕ್ಷಣಕ್ಕೆ ಪೂರಕವಾದ ಭೌತಿಕ ವಾತಾವರಣ ನಿರ್ಮಾಣಗೊಂಡಿದೆ.
ಮಾಲ್ಯ ಶಿಕ್ಷಣದ ಸಾಕಾರ
ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ರೂಪುಗೊಳಿಸುವುದರ ಜೊತೆ ಜೊತೆಗೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುತ್ತಾ ಅವರಲ್ಲಿ ನೈತಿಕವಾಗಿ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಳೆಸುವ ಮುಖ್ಯ ಧ್ಯೇಯದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ. ಮೌಲ್ಯ ಶಿಕ್ಷಣದ ಕನಸನ್ನು ಹೊತ್ತಿರುವ ಕಾಲೇಜಿನಲ್ಲಿ ಬಿ.ಕಾಂ, ಬಿಬಿಎಂ ಪದವಿಗಳನ್ನು ನೀಡಲಾಗುತ್ತಿದ್ದು ಹೊಸತಾಗಿ ಬಿಸಿಎ ಪದವಿ ಆರಂಭಿಸಲಾಗಿದೆ. ಬಿ.ಕಾಂ ಪದವಿಯಲ್ಲಿ ಮೂರು ವಿಭಾಗಗಳು ಮತ್ತು ಬಿ.ಬಿ.ಎಂನಲ್ಲಿ ಒಂದು ವಿಭಾಗವಿದ್ದು, ಅಂಕಗಳ ಆಧಾರದಲ್ಲಿ ಪ್ರವೇಶ ನೀಡುವುದರೊಂದಿಗೆ ಪದವಿ ಶಿಕ್ಷಣ ಬಯಸುವ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೂ ಪ್ರವೇಶಾತಿ ನೀಡಲಾಗುತ್ತಿದೆ. ಇದರ ನಡುವೆ ವಿದ್ಯಾರ್ಥಿಗಳ ಸಂಖ್ಯೆ, ಫಲಿತಾಂಶ ಮತ್ತು ಸಾಧನೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಶಿಸ್ತು ಕೇಂದ್ರಿತ ಶಿಕ್ಷಣಕ್ಕೆ ಒತ್ತು ನೀಡುತ್ತಾ, ಹೊಸ ಆಲೋಚನೆ ಮತ್ತು ಯೋಜನೆಗಳೊಂದಿಗೆ ಪ್ರೊ. ದೋಮ ಚಂದ್ರಶೇಖರರವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರೇ, ಪ್ರತಿಭಾನ್ವಿತ ಯುವ ಉಪನ್ಯಾಸಕ ವೃಂದ ಮತ್ತು ಬೋಧಕೇತರ ವೃಂದ ಇವರೊಂದಿಗೆ ಸಾಥ್ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಪಾಠ, ಪಠ್ಯೇತರದಲ್ಲೂ ಸಂಸ್ಥೆಯ ಮುನ್ನಡೆ:
ಸಂಸ್ಥೆಯ ವಿದ್ಯಾರ್ಥಿನಿ ಕಳೆದ ಸಾಲಿನಲ್ಲಿ ನೇಹಾ ಪ್ರಭು ಬಿ.ಕಾಂ ಪದವಿಯಲ್ಲಿ ಎಂಟನೇ ರ‍್ಯಾಂಕ್ ಪಡೆದಿರುವುದು ಉಲ್ಲೇಖನೀಯ. ಕ್ರೀಡೆಯಲ್ಲಿ ಕಾಲೇಜು ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಕುಂದಾಪುರ ಪರಿಸರಕ್ಕೆ ಪರಿಚಿತವಲ್ಲದ ಸಾಫ್ಟ್‌ಬಾಲ್ ಕ್ರೀಡೆಗೆ ಮಹತ್ವ ನೀಡಿದ ಹೆಗ್ಗಳಿಕೆ. ಸುಮಾರು 17 ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಮಂಗಳೂರು ವಿ.ವಿ. ತಂಡವನ್ನು ಪ್ರತಿನಿಧಿಸುವ ಮೂಲಕ ಅಖಿಲ ಭಾರತ ಮಟ್ಟದ ಅಂತರ ವಿ.ವಿ. ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಪ್ರತೀ ವರ್ಷ ಮಂಗಳೂರು ವಿ.ವಿ.ಯ ಆಶ್ರಯದಲ್ಲಿ ವಿವಿಧ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ.
ಎನ್.ಎಸ್.ಎಸ್. ಘಟಕ, ವಾಣಿಜ್ಯ ಸಂಘ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಲಲಿತಾ ಕಲಾ ಸಂಘ, ಮಹಿಳಾ ವೇದಿಕೆ, ಅರ್ಥಶಾಸ್ತ್ರ ಸಂಘ, ರೋವರ‍್ಸ್ ಮತ್ತು ರೇಂಜರ‍್ಸ್ ಘಟಕ, ರೆಡ್‌ಕ್ರಾಸ್ ಘಟಕ, ಇನ್ನೋವೇಶನ್ ಕ್ಲಬ್ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಂಸ್ಕೃತಿಕವಾಗಿ ಅನನ್ಯವಾಗಿ ಗುರುತಿಸಿಕೊಂಡಿದೆ. ಮಂಗಳೂರು ವಿ.ವಿ. ನಡೆಸುವ ಅಂತರ್ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ-1 ರಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ’ಶಿಖರ’ ಪ್ರಥಮ ಸ್ಥಾನ ಪಡೆದಿದೆ. ಎನ್.ಎಸ್.ಎಸ್. ಸ್ವಯಂಸೇವಕ ಸನತ್ ಅಡಿಗ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದು ಬ್ರೆಜಿಲ್‌ನಲ್ಲಿ ನಡೆಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ. ಅಂತಿಮ ಬಿ.ಕಾಂ. ’ಎ’ ವಿಭಾಗದ ವಿದ್ಯಾರ್ಥಿ ಕುಶ ರಾಷ್ಟ್ರಮಟ್ಟದ ಯೋಗ ಪಟುವಾಗಿದ್ದು ಮಂಗಳೂರು ವಿ.ವಿ. ತಂಡವನ್ನು ಸತತ ಮೂರು ವರ್ಷಗಳಿಂದ ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯಗಳನ್ನು ಬೆಳೆಸಿ ಉದ್ಯೋಗಗಳ ಕುರಿತ ಮಾಹಿತಿಯನ್ನು ಮತ್ತು ಬ್ಯಾಂಕಿಂಗ್ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ. ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶಕ ಕೇಂದ್ರದ ಆಶ್ರಯದಲ್ಲಿ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗವಕಾಶಗಳನ್ನು ಪಡೆದಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಸಂಸ್ಥೆಯ ಮುಂದಿದೆ ನೂರಾರು ಯೋಜನೆ:
ಸಮುದಾಯಗಳ ಜೊತೆ ವಿದ್ಯಾರ್ಥಿಗಳಿಗೆ ಸಂಪರ್ಕ ಕಲ್ಪಿಸುವ ಹಿನ್ನಲೆಯಿಂದ ಸುಸಜ್ಜಿತ ಮೈದಾನ, ಒಳಾಂಗಣ ಕ್ರೀಡಾಂಗಣ, ಸುಸಜ್ಜಿತ ಸೆಮಿನಾರ್ ಹಾಲ್, ಕಾಮರ್ಸ್‌ಲ್ಯಾಬ್, ವಿನೂತನ ಮಾದರಿಯ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ಆಯೋಜಿಸುವ ಕನಸನ್ನು ಕಾಲೇಜು ಹೊತ್ತಿದೆ. ಆಧುನಿಕ ಯುಗದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಾ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅಗತ್ಯವಿರುವ ಶಿಕ್ಷಣವನ್ನು ನೀಡುತ್ತಾ ಅವರಲ್ಲಿ ಸಾಮಾಜಿಕ ಕಾಳಜಿ, ಪರಿಸರ ಪ್ರೇಮ ಮತ್ತು ಮಾನವೀಯತೆಯನ್ನು ಮೂಡಿಸುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ.
ಶಿಸ್ತಿನ ಹೆಸರಾದ ಪ್ರಾಂಶುಪಾಲರು ಪ್ರೊ. ದೋಮ ಚಂದ್ರಶೇಖರ್
ಡಾ. ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾಗಿ ಚುಕ್ಕಾಣಿ ಹಿಡಿದಿರುವ ಪ್ರೋ. ದೋಮ ಚಂದ್ರಶೇಖರ ತಾವು ಕಾರ್ಯನಿರ್ವಹಿಸಿದ ಪ್ರಾಕ್ತನ ಸಂಸ್ಥೆಗಳಲ್ಲಿ ಶಿಸ್ತಿಗೆ ಹೊಸ ಮುನ್ನುಡಿ ಬರೆದವರು. ತಮ್ಮ ೩೦ ವರ್ಷಗಳ ಅಧ್ಯಾಪನಾ ವೃತ್ತಿಯಲ್ಲಿ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ವಿದ್ಯಾರ್ಥಿಗಳು ಶಿಕ್ಷಣ ಪಡೆದರೇ ಸಾಲದು ಮೌಲ್ಯ ಶಿಕ್ಷಣವನ್ನು ಪಡೆಯುವಂತಾಗಬೇಕು, ವೃತ್ತಿ ಕೌಶಲ್ಯಗಳು ಶಿಕ್ಷಣದೊಂದಿಗೆ ದೊರೆಯುವಂತಾಗಬೇಕು ಎಂಬ ಅವರ ಚಿಂತನಾ ಲಹರಿ, ಮತ್ತು ಅದರ ಯಶಸ್ವಿ ಅನುಷ್ಠಾನದ ಚಾಕಚಕ್ಯತೆ ಅವರನ್ನೊಬ್ಬ ಸಮರ್ಥ ಆಡಳಿತಗಾರನನ್ನಾಗಿಸಿದೆ.
ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಕಾಲೇಜು
ಕುಂದಾಪುರ ಪರಿಸರದಲ್ಲಿ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳು ವಿಪುಲವಾಗಿ ತೆರೆದುಕೊಳ್ಳದ ಕಾಲಘಟ್ಟದಲ್ಲಿ ಅಂದರೆ ೧೯೭೫ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ. ಕುಂದಾಪುರದ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಮೊದಲು ಆರಂಭಿಸಿದ್ದು ನರ್ಸರಿ ತರಗತಿಯನ್ನು. ಇಂದು ಅದು ಪದವಿ ಶಿಕ್ಷಣದ ವರೆಗೆ ಬೆಳೆದು ನಿಂತು ರಾಜ್ಯದಾದ್ಯಂತ ತನ್ನ ಕೀರ್ತಿಯನ್ನು ಪಸರಿಸುತ್ತಿದೆ. ಕುಂದಾಪುರ ತಾಲೂಕಿನ ವಿಭಿನ್ನ ಗ್ರಾಮೀಣ ಪ್ರದೇಶಗಳ ಬಡಕುಟುಂಬಗಳನ್ನು ಪ್ರತಿನಿಧಿಸುವ ಪ್ರತಿ ಮಗುವಿಗೂ ಆಂಗ್ಲ ಮಾಧ್ಯಮ ಶಿಕ್ಷಣದ ಅವಕಾಶಗಳನ್ನು ತೆರೆದಿಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಜನ್ಮ ತಾಳಿದ ಈ ಸಂಸ್ಥೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿಯೊಂದಕ್ಕೆ ಕಾರಣವಾಗಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಂಸ್ಥೆಗಳಲ್ಲಿ ವಿಪುಲವಾದ ಅವಕಾಶಗಳಿದ್ದು, ಎಲ್ಲಾ ರಂಗದಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಸ್ಥೆಯು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ.
ಶಿಕ್ಷಣ ಕ್ರಾಂತಿಯ ರೂವಾರಿ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ
ಕುಂದಾಪುರ ಎಜುಕೇಶನ್ ಸೊಸೈಟಿಯ ಯಶಸ್ಸಿನ ಹಿಂದಿನ ರೂವಾರಿ ಅದರ ಅಧ್ಯಕ್ಷರು ಹಾಗೂ ಸಂಚಾಲಕರಾದ ಶ್ರೀ ಬಿ. ಎಂ ಸುಕುಮಾರ ಶೆಟ್ಟಿಯವರು. ಕುಂದಾಪುರ ಎಜುಕೇಶನ್ ಸೊಸೈಟಿಯ ವ್ಯಾಪ್ತಿಯಲ್ಲಿ ಬರುವ ನಾಲ್ಕು ಸಂಸ್ಥೆಗಳನ್ನು ನಾಡಿನ ಮಾದರಿ ಸಂಸ್ಥೆಯಾಗಿ ರೂಪಿಸಿದ ಹೆಗ್ಗಳಿಕೆ ಇವರದ್ದು. ಸಮಾಜದ ಕಟ್ಟಕಡೆಯ ಮಗುವನ್ನೂ ವಿದ್ಯಾವಂತನನ್ನಾಗಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲಿರುಳೂ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸುತ್ತಿರು ಇವರ ಇಚ್ಛಾಶಕ್ತಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ಶ್ರೀಯುತರು ತಮ್ಮ ಯೋಚನೆ, ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದ ಈ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಶ್ರೀಯುತರ ದಕ್ಷ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ಎಲ್ಲಾ ಸಂಸ್ಥೆಗಳನ್ನು ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯನ್ನಾಗಿ ರೂಪಿಸಬೇಕೆಂಬ ಉತ್ಕಟ ಹಂಬಲವನ್ನು ಅವರು ಹೊಂದಿದ್ದಾರೆ. /ಕುಂದಾಪ್ರ ಡಾಟ್ ಕಾಂ/
- ಸಂಪರ್ಕಿಸಿ: 08254 – 235588
ರೆಸ್ಪಾನ್ಸ್ ಕಂಟೆಂಟ್