ಕುಂದಾಪ್ರ ಡಾಟ್ ಕಾಂ
ಪರಶುರಾಮ ಸೃಷ್ಟಿಯ ಸಪ್ತ ಮೊಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಕೋಟಿಲಿಂಗೇಶ್ವರ ದೇವಸ್ಥಾನವು ಪುರಾಣ ಪ್ರಸಿದ್ಧ ಶಿವಕ್ಷೇತ್ರ. ಭಕ್ತಾದಿಗಳಿಂದ ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ಶ್ರೀ ಕ್ಷೇತ್ರವು ಕೋಟಿಲಿಂಗ ಸ್ವರೂಪಿಯಾದ ಶಿವನ ದಿವ್ಯ ತಾಣ. ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿರುವ ಶ್ರೀ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನವು ಜನತೆ ಭಕ್ತಿಯಿಂದ ತಮ್ಮನ್ನು ಸಮರ್ಪಿಸಿಕೊಳ್ಳುವ ದೇವತಾ ತಾಣವಾಗಿ ಪ್ರಸಿದ್ಧಿ ಪಡೆದಿದೆ.
ಷಣ್ಮುಖನು ಕೋಟಿ ಸಂಖ್ಯಾಕ ಅವಯುವಗಳುಳ್ಳ ಕೋಟೆಶ್ವರನ ಕುರಿತು ತಪಸ್ಸು ಆಚರಿಸಿದ್ದ. ತಪೋಜ್ವಾಲೆಯು ತ್ರಿಲೋಕವನ್ನು ವ್ಯಾಪಿಸಲು ಶಿವನು ಕೋಟಿಲಿಂಗ ಸ್ವರೂಪದಲ್ಲಿ ಇಲ್ಲಿ ಪ್ರತ್ಯಕ್ಷನಾದ ಎಂಬುದನ್ನು ಶರಾನೀಕ ಮಹಾರಾಜನಿಗೆ ಶೌನಕರು ವಿವರಿಸಿರುವುದು ಪದ್ಮ ಪುರಾಣದ ಪುಷ್ಕರ ಕಾಂಡದಲ್ಲಿ ಉಲ್ಲೇಕಿತಗೊಂಡಿದೆ.
ಇನ್ನೊಂದು ಮೂಲದ ಪ್ರಕಾರ ‘ಕೋಟಿ ಋಷಿಗಳು’ ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪವನ್ನಾಚರಿಸಿ ಶಿವನನ್ನು ಒಲಿಸಿಕೊಂಡಿದ್ದರು. ಈ ಕಾರದಿಂದಾಗಿ ಇಲ್ಲಿ ಪರಶಿವನು ‘ಕೋಟಿಲಿಂಗೇಶ್ವರ’ ನಾಗಿ ನೆಲೆಯಾದನು ಎಂದೂ ಹೇಳಲಾಗುತ್ತದೆ. ಸತ್ಯಯುಗದಲ್ಲಿ ಬ್ರಹ್ಮದೇವನ ತಪಸ್ಸಿಗೆ ಒಲಿದು ಶಿವನು ಈ ಭೂಮಿಯಲ್ಲಿ ನೆಲೆಸಿದನೆಂದೂ, ಬ್ರಹ್ಮದೇವನು ಕೋಟಿಲಿಂಗೇಶ್ವರ ದೇವಾಲಯದ ಎಡಭಾಗಕ್ಕೆ ಇರುವ ಬೃಹತ್ ‘ಅಶ್ವತ್ಥ’ ವೃಕ್ಷದ ಕೆಳಗೆ ತಪಸನ್ನಾಚರಿಸಿದ್ದನೆಂದು ಸ್ಥಳಪುರಾಣಗಳು ಉಲ್ಲೇಖಿಸಿವೆ. ಅಂತೆ ಬ್ರಹ್ಮದೇವನ ಕಮಂಡಲದಿಂದ ‘ಕೋಟಿ ತೀರ್ಥ’ ಪುಷ್ಕರಣಿಯನ್ನು ನಿರ್ಮಿಸಿದನೆಂದೂ ಹೇಳಲಾಗಿದೆ. ಕುಂದಾಪ್ರ ಡಾಟ್ ಕಾಂ.
ಏಳು ಸುತ್ತುಗಳಿಂದ ಆವೃತ್ತವಾದ ಕೋಟಿಲಿಂಗೇಶ್ವರ ದೇವಳದ ವಾಸ್ತು ನಿರ್ಮಾಣ ಬಹಳ ಅಪರೂಪದ್ದಾಗಿದೆ. 60 ಅಡಿ ಎತ್ತರದ ಏಕ ಮರದ ಧ್ವಜಸ್ತಂಭ, ನಾಲ್ಕನೆ ಸುತ್ತಿನಲ್ಲಿ ತಂತ್ರ ಸಾರಾಗಮದಂತೆ ಪೂಜೆಗೊಳ್ಳತ್ತಿರುವ ಬಲಿಕಲ್ಲುಗಳು, ಸಪ್ತ ಮಾತೃಕೆಯರು, ಕರಿಕಲ್ಲಿನಿಂದ ನಿರ್ಮಾಣವಾದ ನವರಂಗ, ಪ್ರಧಾನ ದ್ವಾರದಲ್ಲಿ ಶೂಲಪಾಣಿ-ಪರಶುಪಾಣಿ ಎಂಬ ಭವ್ಯ ಹಿತ್ತಾಳೆಯ ದ್ವಾರಪಾಲಕ ಮೂರ್ತಿಗಳು ದೇವಳದ ವೈಶಿಷ್ಟ್ಯಗಳು. ಗರ್ಭಗುಡಿಯು ಅಭೇದ್ಯ ಶಿಲಾನಿರ್ಮಾಣವಾಗಿದ್ದು ಒಂದೂವರೆ ಸಾವಿರ ವರ್ಷದ ಹಿಂದೆಯೆ ಅದನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ. ಗರ್ಭಗುಡಿಯ ಒಳಗೆ ಇರುವ ಚಿಕ್ಕ ಬಾವಿಯಲ್ಲಿ ರುದ್ರಾಕ್ಷಿ ಮಣಿಯಂತಿರುವ ಅಸಂಖ್ಯ ಶಿವಲಿಂಗಗಳಿವೆ. ಚಿಕ್ಕ ಬಾವಿಯ ಮೇಲ್ಭಾಗದಲ್ಲಿರುವ ಬೆಳ್ಳಿಯ ಗೋಳಾಕಾರದ ದೇವರು 30 ಕೆ.ಜಿ ಭಾರವಿದ್ದು ಬಾವಿಯನ್ನು ಮುಚ್ಚಿಕೊಂಡಿರುವಂತೆ ವ್ಯವಸ್ಥಿತಗೋಳಿಸಲಾಗಿದೆ. ದೇವರ ತಲೆಯ ಮೇಲೆ ಸದಾ ನೀರು ತೊಟ್ಟಿಕ್ಕುವಂತೆ ತಾಮ್ರದ ಪಾತ್ರಯನ್ನು ತೂಗು ಹಾಕಲಾಗಿದೆ.
ಪರಶಿವನೊಂದಿಗೆ ಆದಿಶಕ್ತಿ ರೂಪಿಣಿಯಾದ ಸರ್ವಮಂಗಳೆಯನ್ನು ಶಿವನ ಎಡದಲ್ಲಿ ದಕ್ಷಿಣಕ್ಕೆ ಪ್ರತಿಷ್ಠಾಪಿಸಲಾಗಿದೆ. ನಂದಿ ಹಾಗೂ ‘ಮೂಲೆಗಣಪತಿ’ ಪ್ರತಿಷ್ಠಾಪಿಸಲಾಗಿದೆ. ಒಳಪ್ರಕಾರದಲ್ಲಿ ಸಪ್ತಮಾತೃಕೆಯರು, ವೀರಭದ್ರ, ಸುಬ್ರಹ್ಮಣ್ಯ ಸ್ವಾಮಿ, ಜ್ಯೇಷ್ಠ ಲಕ್ಷ್ಮಿ, ಮಹಿಷಾಸುರ ಮರ್ದಿನಿ, ವೆಂಕಟರಮಣ, ತಾಂಡವೇಶ್ವರ ದೇವರುಗಳು ನೆಲೆಸಿದ್ದರೆ, ಹೊರ ಪ್ರಕಾರದಲ್ಲಿ ಆದಿಗಣಪತಿ, ಮುಖ್ಯಪ್ರಾಣ, ಮಹಾವಿಷ್ಣು, ಗೋಪಾಲಕೃಷ್ಣ ದೇವರುಗಳು ನೆಲೆಸಿದ್ದಾರೆ. ಕೋಡಿಹಬ್ಬ, ದೀಪೋತ್ಸವ, ಶಿವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಅಪಾರ ಸಂಖ್ಯೆಯ ಭಕಾದಿಗಳು ಇಲ್ಲಿ ಸೇರುತ್ತಾರೆ.
ಪವಿತ್ರ ಕೋಟಿತೀರ್ಥ ಸರೋವರ:
ಭಾರತದ ಪವಿತ್ರ ತೀರ್ಥಗಳಲ್ಲೊಂದಾಗಿರುವ ಪುರಾಣ ಪ್ರಸಿದ್ದ ಕೋಟಿತೀರ್ಥ ಸರೋವರ ದೇವಸ್ಥಾನದ ಸಮೀಪ ಸುಮಾರು 4.5 ಎಕರೆ ವಿಸ್ತೀರ್ಣದಷ್ಟು ಚಾಚಿಕೊಂಡಿದೆ. ಕೋಟಿ ತೀರ್ಥ ಪುಷ್ಕರಣಿ ಬ್ರಹ್ಮ ದೇವ ತನ್ನ ಕಮಂಡಲದಿಂದ ನಿರ್ಮಿಸಿದ್ದು ಇದರಲ್ಲಿ ಸ್ನಾನಗೈಯುವುದರಿಂದ ಪಾಪ ಕರ್ಮಾದಿಗಳು ನಾಶವಾಗುತ್ತದೆ ಎಂಬ ಪ್ರತೀತಿ ಇದೆ. ಕೋಡಿಹಬ್ಬದಂದು ಕೆರೆಯ ಸುತ್ತಲೂ ಬೇರೆ ಬೇರೆ ಪಂಗಡದವರು ಹಾಸುವ ಬಟ್ಟೆ ಮೇಲೆ ಅಕ್ಕಿಯನ್ನು ಹಾಕುವುದು ನಡೆಯುತ್ತದೆ ಇದಕ್ಕೆ ‘ಸುತ್ತಕ್ಕಿ’ ಸೇವೆ ಎನ್ನಲಾಗುತ್ತದೆ.
ಕೋಡಿಹಬ್ಬ ಅರ್ಥಾತ್ ಬ್ರಹ್ಮರಥೋತ್ಸವ:
ರಾಜ್ದಲ್ಲಿನ ಅಂತ್ಯಂತ ದೊಡ್ಡ ರಥಗಳ ಪೈಕಿ ಕೋಟೆಶ್ವರದ ಬ್ರಹ್ಮರಥ ಅಗ್ರಗಣ್ಯ ಸ್ಥಾನ ಪಡೆದಿದೆ. ವೈಶ್ಷಿಕ ಮಾಸದಂದು ಜರುಗುವ ಬ್ರಹ್ಮರಥೋತ್ಸವ ಕೊಡಿಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಏಳು ದಿವಸಗಳ ಕಾಲ ನಡೆಯುವ ಉತ್ಸಕ್ಕೆ 60 ಅಡಿ ಎತ್ತರದ ಧ್ವಜಸ್ತಂಬದಲ್ಲಿ ಗರ್ನಪಠಾರೋಹಣ ಮಾಡುವುದರ ಮೂಲಕ ಚಾಲನೆ ನಿಡಲಾಗುತ್ತದೆ. ಈ ಸಂದಂರ್ಭದಲ್ಲಿ ಜರುಗುವ ಧಾರ್ಮಿಕ ಕಾರ್ಯಗಳು, ಕಟ್ಟೆಪೂಜೆ, ರಥೋತ್ಸವದ ಮರುದಿನ ನಡೆಯುವ ಓಕುಳಿ ವಿಶೇಷವಾಗಿರುತ್ತದೆ. ಕೋಡಿಹಬ್ಬವು ಕರಾವಳಿಯ ಅತ್ಯಂತ ದೊಡ್ಡ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿದೆ. ಹಬ್ಬದ ವಿಷೇಶತೆಗಳಲ್ಲಿ ಹಲವಾರು ನಂಬಿಕೆ, ನಡಾವಳಿಗಳು ಸೇರಿಕೊಂಡಿವೆ. ಕೋಡಿ ಹಬ್ಬದಂದು ನವದಂಪತಿಗಳು ದೇವರಿಗೆ ಕಬ್ಬಿನ ಕೊಡಿ ಅರ್ಪಿಸಿ ಮನೆಗೆ ಕೊಂಡೊಯ್ದರೆ ಶ್ರೇಯಸ್ಸು ಎಂಬ ವಾಡಿಕೆ ಇದೆ. ಹಬ್ಬದ ಸಂದರ್ಭದಲ್ಲಿ ಇಡಿ ಉರೇ ಸಿಂಗಾರಗೊಂಡಿರುತ್ತದೆ. ಹಲವೆಡೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗುತ್ತವೆ. ಕುಂದಾಪ್ರ ಡಾಟ್ ಕಾಂ.
ಸೇವೆಗಳ ವಿವರ:
ಶ್ರೀ ಕೋಟಿಲಿಂಗೇಶ್ವರ ದೇವರಿಗೆ
1. ರುದ್ರಾಭಿಷೇಕ – ರೂ 10.00
2. ಕ್ಷೀರಾಭಿಷೇಕ – ರೂ 10.00
3. ಜಲಾಭಿಷೇಕ – ರೂ 10.00
4. ಏಕಾದಶಿ ರುದ್ರ – ರೂ 25.00
5. ಸಹಸ್ರ ಬಿಲ್ವಾರ್ಚನೆ – ರೂ 25.00
6. ನವವಗ್ರಹ ಪೂಜೆ – ರೂ 25.00
7. ಶರರುದ್ರ – ರೂ 100.00
8. ಸಣ್ಣ ರಂಗಪೂಜೆ – ರೂ 500.00
9. ದೊಡ್ಡರಂಗಪೂಜೆ – ರೂ 1000.00
10. ನಂದಾದೀಪ 12 ದಿನಗಳ ಮೃತ್ಯುಂಜಯ ಜಪ – ರೂ 120.00
ವಿಷೇಷ ಪೂಜೆಗಳು:-ಮಹಾರುದ್ರ ಹೋಮ, ಏಕವಾರ ರುದ್ರಹೋಮ.
ಶ್ರೀ ಮೂಲೆ ಗಣಪತಿ ದೇವರಿಗೆ
1. ರಂಗಪೂಜೆ – ರೂ 25.00
2. 6 ಕಾಯಿ ಗಣಹೋಮ – ರೂ 25.00
3. ಉಪನಿಷತ್ ಹೋಮ – ರೂ 30.00
4. 125 ಕಾಯಿ ಮೂಡುಗಣಪತಿ – ರೂ 25.00
5. 25 ಕಾಯಿ ಮೂಡುಗಣಪತಿ – ರೂ 10.00
6. 12 ಕಾಯಿ ಗಣಹೋಮ – ರೂ 50.00
7. ಸಂಕಷ್ಟಹರ ಸಾಮೂಹಿಕ ಗಣಹೋಮ – ರೂ 15.00
ಶ್ರೀ ಪಾರ್ವತಿ ಅಮ್ಮನವರಿಗೆ
1. ಚಂಡಿಕಾ ಪಾರಾಯಣ – ರೂ 25.00
2. ದುರ್ಗಾಹೋಮ – ರೂ 25.00
3. ಪುಷ್ಪಾಲಂಕಾರ ಪೂಜೆ – ರೂ 10.00
4. ಶ್ರೀ ಸೂಕ್ತ ಅಭಿಷೇಕ – ರೂ 10.00
5. ಕುಂಕುಮಾರ್ಚನೆ – ರೂ 5.00
6. ಚಂಡಿಕಾಹೋಮ – ರೂ 50.00
7. ಒಂದು ದಿನದ ನವರಾತ್ರಿ ಪೂಜೆ – ರೂ 30.00
ಶ್ರೀ ಮುಖ್ಯಪ್ರಾಣ ದೇವರಿಗೆ
1. ರಂಗಪೂಜೆ – ರೂ 195.00
2. ಸುಂದರಕಾಂಡ ಪಾರಾಯಣ – ರೂ 75.00
3. ನಂದಾದೀಪ ಒಂದು ತಿಂಗಳು – ರೂ 150.00
4. ಪಂಚಾಮೃತ ಅಭಿಷೇಕ – ರೂ 30.00
5. ಪವಮಾನ ಅಭಿಷೇಕ – ರೂ 60.00
ಸೂಚನೆಗಳು :
1. ವರ್ಷದಲ್ಲಿ ಒಂದು ದಿನದ ತ್ರಿಕಾಲ ಶಾಶ್ವತ ಪೂಜೆಗೆ, ಹೆಸರು, ಪೂಜೆ ದಿನಾಂಕದ ವಿವರಗಳೊಂದಿಗೆ ರೂ : 501ನ್ನು ನಿಖರ ಠೇವಣಿಯಲ್ಲಿರಿಸಲಾಗುವುದು.
2. ಮೇಲೆ ಕಾಣಿಸಿದ ಪೂಜಾದಿಗಳಿಗೆ ಕೇವಲ ಕಾಣಿಕೆಗಳನ್ನು ಮಾತ್ರ ನಮೂದಿಸಲಾಗಿದೆ, ಪೂಜೆಗಳಿಗೆ ಅವಶ್ಯವೆನಿಸಿದ ಪೂಜಾ ಸಾಮಾಗ್ರಿಗಳನ್ನಯ ಭಕ್ತಾದಿಗಳು ಒದಗಿಸಬೇಕು.
3. ಪರವೂರಿನಲ್ಲರುವ ಭಕ್ತಾದಿಗಳು ಸೇವೆಯನ್ನು ನೆರವೇರಿಸುವುದಕ್ಕೆ ಅಂಚೆ ಮೂಲಕವಾಗಿ ಹಣ ಕಳುಹಿಸುವುದಾದಲ್ಲಿ ಪ್ರಸಾದ ಕಳುಹಿಸಲು ಅವಶ್ಯವೆನಿಸಿದ ಅಂಚೆ ಶುಲ್ಕವನ್ನು ಕಳುಹಿಸಬೇಕು. (ಒಂದು ಟಪ್ಪಾಲಿಗೆ ರೂ : 5.00ರಂತೆ)
4. ವಿಶೇಷ ಪೂಜೆಗಳಿಗೆ ವಿವರಗಳನ್ನು ಪಡೆಯಬೇಕಾದ ಕಾರಣ ಆಡಳಿತ ಮಂಡಳಿಯ ಪೂರ್ವ ನಿರ್ದೇಶನವನ್ನು ಪಡೆದುಕೊಳ್ಳಬೇಕು.
5. ದೇವರಿಗೆ ಕಾಣಿಕೆ ಅಥವಾ ಪೂಜಾ ಶುಲ್ಕವನ್ನು ಕಳುಹಿಸುವವರು ಮನಿಯಾರ್ಡರ್ ಅಥವಾ ಸಿಂಡಿಕೇಟ್ ಬ್ಯಾಂಕ್ ಕೋಟೇಶ್ವರ ಶಾಖೆಯ ಉಳಿಯಾಯ ಖಾತೆ ಸಂಖ್ಯೆ 444ಕ್ಕೆ ಅಥವಾ ವಿಜಯಾ ಬ್ಯಾಂಕ್ ಕುಂಭಾಶಿ ಶಾಖೆಯ ಉಳಿತಾಯ ಖಾತೆ ನಂ. 342 ಡಿಡಿ ಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ ಕ್ಷೇತ್ರದ ದೂರವಾಣಿಯ ಮೂಲಕ ಕ್ಷೇತ್ರವನ್ನು ಸಂಪರ್ಕಿಸಿ.
ಸಂಪರ್ಕ:
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ
ಕುಂದಾಪುರ-ತಾ| ಉಡುಪಿ-576 222
ಕರ್ನಾಟಕ.
ಪೋನ್: 08254-262230
ಮಾರ್ಗ:
ಉಡುಪಿ-ಕುಂದಾಪುರದ ನಡುವೆ ಸಂಚರಿಸುವ ಎಲ್ಲಾ ಬಸ್ಸುಗಳ ನಿಲುಗಡೆ ಇದೆ. ಸಮೀಪದಲ್ಲಿ ಕುಂದಾಪುರ ರೈಲ್ವೆ ನಿಲ್ದಾಣವಿದೆ.