ರತ್ತು ಬಾಯಿ ಜನತಾ ಪ್ರೌಢಶಾಲೆಯಲ್ಲಿ ವಿದಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಜೀವನದಲ್ಲಿ ದೊರೆತ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ವಿದ್ಯಾರ್ಥಿ ಸಂಸತ್ತಿನಲ್ಲಿ ತೊಡಗಿಸಿಕೊಂಡರೆ, ಭವಿಷ್ಯದಲ್ಲಿಯೂ ಉತ್ತಮ ನಾಯಕರಾಗಲು ಸಾಧ್ಯವಿದೆ ಎಂದು ರಂಗತಜ್ಞ ಡಾ ಶ್ರೀಪಾದ ಭಟ್ ಶಿರಸಿ ಹೇಳಿದರು. ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಇತ್ತಿಚಿಗೆ ಜರುಗಿದ ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತು ಹಾಗೂ ರಂಗಸ್ಪರ್ಶ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Call us

Click Here

ಮುಖ್ಯ ಅತಿಥಿ ಯುಸ್ಕೋರ್ಡ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ಪಿ. ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಹಾಗೂ ವಿದ್ಯಾರ್ಥಿ ಸಂಸತ್ತಿನ ರಾಷ್ಟ್ರಪತಿ ಜಿ. ಎಸ್. ಭಟ್‌ರವರು ಪ್ರಮಾಣ ವಚನ ಭೋದಿಸಿ ಉತ್ತಮಕಾರ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.

ಶಿಕ್ಷಕರಾದ ಪ್ರಕಾಶ್ ಎಮ್. ಸ್ವಾಗತಿಸಿ, ಮಂಜು. ಕೆ ಅವರು ಪ್ರಸ್ತಾವನೆಗೈದರು. ಚಂದ್ರ ದೇವಾಡಿಗ ಧನ್ಯವಾದಗೈದರು ಶಾಲಾ ಸಂಸತ್ತಿನ ಮಾರ್ಗದರ್ಶಕ ಶಿಕ್ಷಕ ಆನಂದ ಮದ್ದೋಡಿ ನಿರೂಪಿಸಿದರು. ಬಳಿಕ ರಂಗತಜ್ಞ ಡಾ. ಶ್ರೀಪಾದ ಭಟ್ ಶಿರಸಿ ಇವರು ಶಾಲಾ ವಿದ್ಯಾರ್ಥಿಗಳಿಗೆ ರಂಗಸ್ವರ್ಶ ತರಬೇತಿಯನ್ನು ನಡೆಸಿಕೊಟ್ಟರು.

Leave a Reply