ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯುತ್ ತಂತಿ ಅಳವಡಿಸುವ ಸಲುವಾಗಿ ವಿದ್ಯುತ್ ಕಡಿತಗೊಳಿಸುವ ಟ್ರಾನ್‌ಫಾರ್ಮ್‌ರ್ ಕಂಬ ಏರಿದ್ದ ವ್ಯಕ್ತಿಗೆ ವಿದ್ಯುತ್ ತಗಲಿ ಮೃತಪಟ್ಟ ಘಟನೆ ಕೋಡಿ ರಾಮಮಂದಿರದ ಬಳಿ ನಡೆದಿದೆ. ತಮಿಳುನಾಡು ಧರ್ಮಪುರಿಯ ಮೂಲದ ನರಸಿಂಹ(22) ಮೃತ ದುರ್ದೈವಿ.
ಉಡುಪಿಯಲ್ಲಿ ತಂದೆ ಸಂಪತ್ ಹಾಗೂ ಸಹೋದರ ಸರ್ವಣ್ ಅವರೊಂದಿಗೆ ಗುತ್ತಿಗೆ ಆಧಾರದಲ್ಲಿ ಮೆಸ್ಕಾಂ ಇಲಾಖೆಯ ಕೆಲಸಗಳನ್ನು ಮಾಡಿಕೊಂಡಿದ್ದ ನರಸಿಂಹ, ಕೆಲವು ದಿನಗಳಿಂದ ಕೋಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಕೋಡಿಯಲ್ಲಿ ವಿದ್ಯುತ್ ಲೈನ್ ಬದಲಿಸಲು ಸಹೋದನೊಂದಿಗೆ ತೆರಳಿದ್ದಾಗ. ಅಲ್ಲಿ ಟ್ರಾನ್‌ಫಾರ್ಮ್‌ರ್‌ನಿಂದ ವಿದ್ಯುತ್ ಕಡಿತಗೊಳಿಸುವ ಸಲುವಾಗಿ ನರಸಿಂಹ ಮೇಲೆರಿದಾಗ ವಿದ್ಯುತ್ ತಗಲಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










