ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ನವದೆಹಲಿ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಡ್ಲೂರು ಹಳ್ನಾಡು ಗ್ರಾಮಗಳ ಮನೆ ನಿವೇಶನ ರಹಿತರಿಂದ – ನಿವೇಶನ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಕಾವ್ರಾಡಿ-ಕಂಡ್ಲೂರು ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನಾ ಮುಷ್ಕರ ಹೋರಾಟ ಜರಗಿತು.
ಸಿಐಟಿಯು ತಾಲೂಕು ಅಧ್ಯಕ್ಷ ಹೆಚ್. ನರಸಿಂಹ ನಿವೇಶನ ರಹಿತರ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಮಾತನಡುತ್ತಾ ಕಳೆದ ಮೂರು ವರ್ಷಗಳಿಂದ – ಮನೆ ನಿವೇಶನ ರಹಿತರು ಭೂಮಿ ಹಕ್ಕು ಪತ್ರಕ್ಕಾಗಿ ವಿವಿಧ ಹಂತದ ಹೋರಾಟ ಚಳವಳಿಯನ್ನು ನಿರಂತರವಾಗಿ ಮಾಡುತ್ತಿದ್ದರೂ ಸರಕಾರ ನಿವೇಶನ ಸ್ಥಳ ಹಕ್ಕು ಪತ್ರ ವಿತರಣೆ ಮಾಡದಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಹಿನ್ನಲೆಯಲ್ಲಿ ಸೆಪ್ಟಂಬರ್ ೨೮ ರಂದು ಜರಗುವ ಕುಂದಾಪುರ ತಾಲೂಕು ಕಛೇರಿ ಮುತ್ತಿಗೆ ಹೋರಾಟವನ್ನು ಎಲ್ಲಾ ನಿವೇಶನ ರಹಿತ ಅರ್ಜಿದಾರರು ಬೆಂಬಲಿಸಬೇಕು ಎಂದು ಕರೆಕೊಟ್ಟರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಎಂ. ಕೃಷಿಕೂಲಿಕಾರರ ಸಂಘದ ಮುಖಂಡರಾದ ನಾಗರತ್ನ ನಾಡ, ಶೀಲಾವತಿ ಪಡುಕೋಣೆ, ಉಪಸ್ಥಿತರಿದ್ದರು. ವೆಂಕಟೇಶ ಕೋಣಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.