ಬೈಂದೂರು: ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಸಮುದಾಯ ಭವನದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಜರುಗಿತು. ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕೆ. ಗೋಪಾಲ ಪೂಜಾರಿ, ದೇಶದ ಯುವಶಕ್ತಿಗೆ ತಮ್ಮದೇ ಆದ ಗುರುತರ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ಸದಸ್ಯತ್ವವನ್ನು ಇಂದೇ ನೋಂದಣಿ ಮಾಡಿಕೊಂಡು ರಾಜ್ಯ ಹಾಗೂ ದೇಶದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವುದರ ಮೂಲಕ ಅಧಿಕಾರಕ್ಕೆ ತರುವಲ್ಲಿ ಸತತ ಪ್ರಯತ್ನ ನಡೆಸಬೇಕು ಎಂದರು.

Call us

Click Here

ಕಾಂಗ್ರೆಸ್ ತನ್ನ ವಿರೋಧಿಗಳಿಗೆ ಸಂಘಟನಾತ್ಮಕ ಹೋರಾಟದ ಮೂಲಕ ಈಗ ಉತ್ತರ ನೀಡಬೇಕಾಗಿದೆ. ಆ ನೆಲೆಯಲ್ಲಿ ಪಕ್ಷದ ಹಿರಿಯರು ಯುವ ನೊಂದಣಿ ಅಭಿಯನದಡಿ ಪ್ರತಿಯೊಂದು ಬೂತ್ ಮಟ್ಟದಲ್ಲಿ ಭೇಟಿ ನೀಡಿ ಆ ಭಾಗದ ಹೆಚ್ಚು ಯುವಕರನ್ನು ಪಕ್ಷದ ಸದಸ್ಯರಾಗುವಲ್ಲಿ ಪ್ರಯತ್ನಿಸಬೇಕು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳುದ್ದಕ್ಕೆ ಮಾಡಿದ ಉತ್ತಮ ಕೆಲಸ, ಮೂಲ ಸೌಲಭ್ಯ ಹೆಚ್ಚಿಸಿ ಹಲವು ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತುನೀಡಿದ ಕುರಿತಾಗಿ ಯುವಜನತೆಗೆ ಮನವರಿಕೆ ಮಾಡಬೇಕು ಎಂದರು.

ಅಕ್ರಮ-ಸಕ್ರಮ ವಿಚಾರವಾಗಿ ಬಿಜೆಪಿಯವರು ನನ್ನ ಮೇಲೆ ನ್ಯಾಯಾಲಯಕ್ಕೆ ದೂರು ನೀಡಿದ್ದು, ಈಗ ತನಿಖೆಗೆ ಆದೇಶಿಸಿದ ಕುರಿತು ಆಕ್ರೋಶಗೊಂಡ ಶಾಸಕರು, ತಹಶೀಲ್ದಾರ್, ಗ್ರಾಮ ಕರಣಿಕ ಹಾಗೂ ಕಂದಾಯ ಅಧಿಕಾರಿಗಳು ಪರಿಶೀಲಿಸಿದ ನಂತರದ ಸಿಟ್ಟಿಂಗ್‌ನಲ್ಲಿ ಫೈಲ್ ವಿಲೇವಾರಿ ಮಾಡುವುದಷ್ಟೇ ನನ್ನ ಕೆಲಸ. ಇದರಲ್ಲಿ ನನ್ನ ಕೈವಾಡವಾಗಲೀ ಅಥವಾ ಉದ್ದೇಶ ಪೂರ್ವಕವಗಿ ಯಾರಿಗೂ ಸ್ಥಳ ಮಂಜೂರು ಮಾಡಲಿಲ್ಲ. ಇನ್ನು ಬಿಜೆಪಿ ಆಡಳಿತವಿದ್ದಾಗ ಮಂಜೂರು ಮಾಡಿದ ಸ್ಥಳದ ಬಗ್ಗೆಯೂ ತನಿಖೆಯಾಗಲಿ ಎಂದು ಕಿಡಿಕಾರಿದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯೆ ಗ್ರೀಷ್ಮಾ ಭಿಡೆ, ಕಾಲ್ತೋಡು ಗ್ರಾಪಂ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ, ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ ದೇವಾಡಿಗ, ಯುವ ಕಾಂಗ್ರೆಸ್ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಿ. ಎಂ. ನಾಗರಾಜ ಗಾಣಿಗ ಉಪಸ್ಥಿತರಿದ್ದರು.

news-youth-congres3

Click here

Click here

Click here

Click Here

Call us

Call us

Leave a Reply