ಕನ್ನಡ ಪತ್ರಕರ್ತರಿಂದ ರಾಜಭವನದಲ್ಲಿ ರಾಜ್ಯಪಾಲರಿಗೆ ಗೌರವಾರ್ಪಣೆ
ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಮೂರು ದಿನಗಳ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ ಸಮಾಪನ ಗೊಂಡಿತು.
ಮುಂಬಯಿ ಉಪನಗರದ ಥಾಣೆ ಪಶ್ಚಿಮದ ಹೊಟೇಲ್ ಧೀರಜ್‌ನಲ್ಲಿ ನೆರೆದ ಪತ್ರಕರ್ತರುಗಳೊಂದಿಗೆ ಭಾರತ ರಾಷ್ಟ್ರದ ಸಂವಿಧಾನಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಶುಭಾವಸರದಲ್ಲಿ ಡಾ| ಅಂಬೇಡ್ಕರ್ ಸ್ಮರಿಸಿ ಗೌರವಾರ್ಪಣೆ ಗೈಯಲಾಯಿತು. ಬಳಿಕ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ನೇತೃತ್ವದಲ್ಲಿ, ಸಮಾವೇಶದ ಅಂಗವಾಗಿದ್ದ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರ ಭೇಟಿ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಜರುಗಿಸಲಾಗಿದ್ದು ಪೂರ್ವಾಹ್ನ ಮಹಾನಗರದ ಮಲಬಾರ್‌ಹಿಲ್ ಅಲ್ಲಿನ ರಾಜಭವನಕ್ಕೆ ಪದಾಧಿಕಾರಿಗಳೊಂದಿಗೆ ತೆರಳಿದ ಪತ್ರಕರ್ತರ ಸಂಘದ ನಿಯೋಗವು ರಾಜ್ಯಪಾಲ ಸಿಹೆಚ್ ವಿದ್ಯಾಸಾಗರ್ ರಾವ್ ಅವರನ್ನು ರಾಜಭವನದ ಜಲ್ ಭೂಷಣ್ ರಾಜ್ಯಪಾಲರ ಅಧಿಕೃತ ಕಾರ್ಯಾಲಯದಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಮತ್ತು ರೋನ್ಸ್ ಬಂಟ್ವಾಳ್ ಅವರು ರಾಜ್ಯಪಾಲರಿಗೆ ಸಮಾವೇಶದ ಸ್ಮರಣಿಕೆಯನ್ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ದಯಾ ಸಾಗರ್ ಚೌಟ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಬು ಕೆ.ಬೆಳ್ಚಡ, ಪೋಷಕ ಸದಸ್ಯ ಶಿವ ಮೂಡಿಗೆರೆ, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ತಾರಾ ಆರ್.ಬಂಟ್ವಾಳ್, ಸಂದೇಶ್ ಎಸ್.ಶೆಟ್ಟಿ, ಸಮಾವೇಶದ ಪ್ರಾಯೋಜಕರುಗಳಾ ದ ಶಿವರಾಮ ಎಸ್.ಭಂಡಾರಿ, ಎನ್.ಕೆ ಬಿಲ್ಲವ, ಪಂ| ನವೀನ್‌ಚಂದ್ರ ಆರ್.ಸನೀಲ್, ನಾಗೇಶ್ ಪೊಳಲಿ, ಸೋಮಶೇಖರ್ ಆರ್.ಭಂಡಾರಿ ಬೆಂಗಳೂರು ಉಪಸ್ಥಿತರಿದ್ದರು.