ಪುಣೆ: ಫುಡ್ ಸ್ಟೇ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಹೊಟೇಲ್‌ಗಳಿಗೆ ಕೆಲವೊಂದು ಕಾನೂನುಗಳನ್ನು ಹೇರುತ್ತಿದ್ದು,ಇವುಗಳನ್ನು ಅನುಸರಿಸುವುದರಿಂದ ಕಾರ್ಮಿ ಕರಿಗೆ ಅನಾರೋಗ್ಯದಂತಹ ಸಮಸ್ಯೆಗಳು ಎದುರಾಗಲಿವೆ. ಕುಕ್‌ಗಳು ಕೈ ಕವಚ ತೊಟ್ಟು ಕೆಲಸ ಮಾಡುವುದು, ಲಿಕ್ಕರ್ ಲೈಸನ್ಸ್ ಶೇ. 10ರಷ್ಟು ಏರಿಕೆ ಇದರೊಂದಿಗೆ ಅಬಕಾರಿ ತೆರಿಗೆ, ವ್ಯಾಟ್ ಹಾಗೂ ಸೇವಾ ತೆರಿಗೆಯೂ ಹೆಚ್ಚಾಗಿದೆ. ಪಕ್ಕದ ಗೋವಾ ಹಾಗೂ ದಮನ್‌ಗಳಲ್ಲಿ ಮಹಾರಾಷ್ಟ್ರದಿಂದ ಅರ್ಧದಷ್ಟು ದರಗಳಲ್ಲಿ ಮದ್ಯ ದೊರಕುತಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ ಇಷ್ಟೊಂದು ತೆರಿಗೆ ಹೆಚ್ಚಳ ಯಾಕೆ ಎಂದು ಗೊತ್ತಾಗುತ್ತಿಲ್ಲ. ಇದರಿಂದ ನಕಲಿ ಮದ್ಯ ಸರಬರಾಜಾಗಿ ಜನರ ಆರೋಗ್ಯದ ಮೇಲೆ ಪ್ರಭಾವ ಬೀಳಲಿದೆ. ಅನೇಕ ಕಾನೂನು ಬಾಹಿರ ಹೊಟೇಲ್‌ಗಳು ಇದರಿಂದಾಗಿ ತಲೆಯೆತ್ತಿದ್ದು, ನಕಲಿ ಮದ್ಯಗಳನ್ನು ಮಾರಾಟ ಮಾಡುತ್ತಿವೆ. ಅನೇಕ ಪರ್ಮಿಟ್ ರೂಮ್‌ಗಳು ಇಷ್ಟೊಂದು ತೆರಿಗೆ ತಾಳಲಾಗದೆ ಮುಚ್ಚುವ ಹಂತದಲ್ಲಿವೆ ಎಂದು ಪುಣೆ ರೆಸ್ಟೋರೆಂಟ್ ಹೊಟೇಲಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಪುಣೆ ರೆಸ್ಟೋರೆಂಟ್ ಹೊಟೇಲಿಯರ್ಸ್ ಅಸೋಸಿಯೇಶನ್‌ನ (ಪ್ರಾಹಾ ) ವತಿಯಿಂದ ನಗರದ ಕೊರೊನೆಟ್ ಹೊಟೇಲ್ ಸಭಾಂಗಣದಲ್ಲಿ ಎ 10ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಹೊಸ ಹೊಟೇಲ್‌ಗಳಿಗೆ ಪೊಲೀಸ್ ಲೈಸನ್ಸ್ ಎಂಬುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಸರಕಾರದ ಸ್ಪಷ್ಟ ಧೋರಣೆಗಳಿಲ್ಲದೆ ಲೈಸನ್ಸ್ ಪಡೆಯುವುದೇ ಕಷ್ಟವಾಗಿದೆ. ಇದರಿಂದಾಗಿ ಭ್ರಷ್ಟಾಚಾರ ತಲೆಯೆತ್ತಿದ್ದು ಅನಧಿಕೃತ ಹೊಟೇಲುಗಳೂ ಹೆಚ್ಚಾಗುತ್ತಿದೆ.ಉಳಿದಂತೆ ಇತರ ವ್ಯಾಪಾರಕ್ಕೆ ಅನ್ವಯಿಸದ ಪಾರ್ಕಿಂಗ್ ವ್ಯವಸ್ಥೆ, ಕಾನೂನು ಕಾಯಿದೆಗಳು ಕೇವಲ ಹೊಟೇಲಿಗರಿಗೆ ಮಾತ್ರ ಯಾಕೆ. ಈ ಬಗ್ಗೆ ಸೀನಿಯರ್ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹವಾನಿಯಂತ್ರಿತ ಹೊಟೇಲ್‌ಗಳಿಗೆ ವಿಧಿಸುವ ಸರ್ವಿಸ್ ತೆರಿಗೆ ಬಗ್ಗೆಯೂ ಮುಂಬಯಿ ಹಾಗೂ ಕೇರಳಗಳಲ್ಲಿ ಕಾನೂನು ಹೋರಾಟ ನಡೆಸಲಾಗಿದೆ. ಇಂತಹ ಅನಗತ್ಯ ತೆರಿಗೆಗಳಿಗೆ ಸರಕಾರ ಕಡಿವಾಣ ಹಾಕಬೇಕಾಗಿದೆ. ಒಟ್ಟಾರೆಯಾಗಿ ಹೊಟೇಲ್ ವ್ಯವಸಾಯವು ಇಂದು ಅನೇಕ ಸಂಕಷ್ಟದ ಸರಮಾಲೆಗಳನ್ನು ಎದುರಿಸುತ್ತಿದೆ. ಆದುದರಿಂದ ಸರಕಾರ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳುವಲ್ಲಿ ಚಿಂತಿಸಬೇಕಾಗಿದೆ. ಹೊಟೇಲ್ ಅಸೋಸಿಯೇಷನ್ ಈ ಬಗ್ಗೆ ನಿರಂತರ ಹೋರಾಟ ನಡೆಸಲಿದೆ ಎಂದರು.
ಪುಣೆಯಲ್ಲಿ ಪ್ರಸ್ತುತ ಹೊಟೇಲ್ ಗಳಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ವಿವರಿಸಲಾಯಿತು. ಸೇವಾ ತೆರಿಗೆ ರದ್ಧತಿ, ಪರ್ಮಿಟ್ ರೂಮ್ ನವೀಕರಣ ಹೆಚ್ಚಳ ಶುಲ್ಕವನ್ನು ರದ್ದುಗೊಳಿಸಲು, ಹೊಟೇಲ್‌ಗಳಿಗೆ ಪೊಲೀಸ್ ಪರವಾನಿಗೆ ಪಡೆಯಲು ನಿರ್ದಿಷ್ಟ ಧೋರಣೆ ರೂಪಿಸುವಂತೆ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಅಸೋಸಿಯೇಶನ್‌ನ ನಿಲುವನ್ನು ಸಭೆಯಲ್ಲಿ ತಿಳಿಸಲಾಯಿತು. ಅಂತೆಯೇ ಹೊಟೇಲ್ ತೆರೆದಿಡಲು ರಾತ್ರಿ ಒಂದೂವರೆ ಗಂಟೆಯವರೆಗೆ ಅನುಮತಿ ನೀಡುವಲ್ಲಿಯೂ ಮನವಿ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ಕಿಶೋರ್ ಸರ್ಪೋತಾªರ್, ಉಪಾಧ್ಯಕ್ಷ ಸದಾಶಿವ ಸಾಲ್ಯಾನ್, ಜಯ ನೇಮು ಶೆಟ್ಟಿ, ಸಂಜೀತ್ ಲಾಂಬಾ, ಜವಾಹರ್ ಚೋರ್ಗೆ ಉಪಸ್ಥಿತರಿದ್ದರು. ಈ ಸಂದರ್ಭ ಹೊಟೇಲ ಉದ್ಯಮಿ, ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಹೋಟೆಲ… ಉದ್ಯಮಿಗಳಾದ ವಿಶ್ವನಾಥ ಪೂಜಾರಿ ಹಾಗೂ ಮೋಹನ್ ಶೆಟ್ಟಿ ಹಾಜರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು