ವಿದ್ಯಾರ್ಥಿಗಳ ಯಶಸ್ಸಿಗೆ ಬೇಕು ಇಂಟರ್ನ್‌ಶಿಪ್

Call us

Call us

Call us

ವಿದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಗಳಿಕೆಯ ಜೊತೆಗೆ ಕಲಿಕೆ ಎಂಬ ಪರಿಕಲ್ಪನೆ ಬಹಳ ಹಿಂದೆಯೇ ಚಾಲ್ತಿಗೆ ಬಂದಿತ್ತು. ಆದರೆ ಭಾರತದಲ್ಲಿ ಅದು ಇನ್ನೂ ಮುನ್ನಡೆ ಪಡೆಯಲು ಯಶಸ್ವಿಯಾಗಿಲ್ಲ. ಇಲ್ಲಿ ಕಲಿಕೆಗೆ ಮೊದಲ ಆದ್ಯತೆ. ಡಿಗ್ರಿ ಪಡೆದ ಬಳಿಕವಷ್ಟೇ ಉದ್ಯೋಗ ಎಂಬ ಸ್ಥಿತಿಯಿದೆ. ಆದರೆ ಬದಲಾದ ಕಾಲಮಾನದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ವೃತ್ತಿಪರ ಶಿಕ್ಷಣದ ಅರ್ಹತೆಯ ಜೊತೆಗೆ ಕೆಲಸದ ಅನುಭವವನ್ನೂ ಕೇಳುತ್ತಿವೆ. ಹೀಗಾಗಿ ಇಂಟರ್ನ್‌ಶಿಪ್‌ಗಳಿಗೆ ಕಾಲೇಜುಗಳು, ವಿವಿಗಳು ಮಹತ್ವ ನೀಡುತ್ತಿವೆ. ಈ ಮೂಲಕ ಥಿಯರಿಯ ಜೊತೆಗೆ ಉದ್ಯೋಗದಾತನಿಗೆ ಬೇಕಾದ ರೀತಿಯಲ್ಲಿ ವಿದ್ಯಾರ್ಥಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ಉದ್ಯೋಗ ಭವಿಷ್ಯಕ್ಕೆ ಅತ್ಯವಶ್ಯಕವಾದ ಸಮಯದ ನಿರ್ವಹಣೆ ಪಾಠ ಕಲಿಯುವುದರ ಜೊತೆಗೆ ಕೆಲಸದ ಅನುಭವವನ್ನೂ ಶಿಕ್ಷಣ ಪಡೆಯುತ್ತಿರುವ ಅವಧಿಯಲ್ಲೇ ಪಡೆಯಲು ನೆರವಾಗುತ್ತದೆ. ಹೀಗಾಗಿ ವೃತ್ತಿಪರ ಹಾಗೂ ವೈಯಕ್ತಿಕವಾಗಿಯೂ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೆರವಾಗುತ್ತದೆ.

Call us

Click Here

ಆದ್ದರಿಂದ ವಿವಿಯಿರಲಿ ಕಾಲೇಜು ಇರಲಿ ವಿದ್ಯಾರ್ಥಿಗಳು ಕ್ಲಾಸ್ ರೂಮ್‌ನಲ್ಲಿ ಕಲಿತ ಜ್ಞಾನವನ್ನು ದುಪ್ಪಟ್ಟು ಮಾಡಿಕೊಳ್ಳಲು ಇಂಟರ್ನ್‌ಶಿಪ್ ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಕೌಶಲ್ಯವನ್ನು ಬೆಳೆಸಿಕೊಂಡರೆ ಆಗ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಇದಕ್ಕೆ ಇಂಟರ್ನ್‌ಶಿಪ್ ನೆರವಾಗುತ್ತದೆ. ಇದು ವಿದ್ಯಾರ್ಥಿಗಳ ರೆಸ್ಯೂಮ್‌ನಲ್ಲಿ ಮೌಲ್ಯವರ್ಧಿತ ಅಂಶವಾಗಿ ಸೇರ್ಪಡೆಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ಭವಿಷ್ಯದ ಕುರಿತು ಒಂದು ಆಕಾಂಕ್ಷೆ, ಗುರಿ ಇರುತ್ತದೆ. ಇದನ್ನು ಪೂರೈಸಿಕೊಳ್ಳಲು ಇಂಟರ್ನ್‌ಶಿಪ್ ನೆರವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕಾರ್ಪೋರೇಟ್ ವಲಯದಲ್ಲಿ ಕೌಶಲ್ಯದ ಜೊತೆಗೆ ಅನುಭವಕ್ಕೆ ಮನ್ನಣೆ ನೀಡುವುದರಿಂದ ಕಾಲೇಜು ಹಂತದಲ್ಲೇ ಕೆಲಸದ ಅನುಭವ ಪಡೆದು ಅದಕ್ಕೆ ಸರಿಯಾಗಿ ತಮ್ಮನ್ನು ತಾವೇ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೆರವಾಗುವುದರಲ್ಲಿ ಎರಡು ಮಾತಿಲ್ಲ.

Leave a Reply