ಈಗ ದಿನ ನಿತ್ಯದ ಜೀವನವನ್ನು ಐಟಿ ಮತ್ತು ಐಟಿ ಆಧಾರಿತ ಸೇವೆಗಳನ್ನು ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ಇದರ ಬಳಕೆ ಹೆಚ್ಚಿದಂತೆ ಸೈಬರ್ ಭದ್ರತೆ ಕೂಡ ಬಹುದೊಡ್ಡ ತಲೆನೋವಾಗಿ ಮಾರ್ಪಡುತ್ತಿದೆ. ಖಾಸಗಿ ಡೇಟಾವನ್ನು ಅಪರಿಚತರಿಗೆ ಸಿಗದಂತೆ ಕಾಪಾಡುವುದು ಅತ್ಯಗತ್ಯ. ಇದಕ್ಕಾಗಿ ಕಲಾಸಾಲಿಂಗಂ ವಿಶ್ವವಿದ್ಯಾಲಯ ರಾಷ್ಟ್ರೀಯ ಸೈಬರ್ ರಕ್ಷಣಾ ಸಂಶೋಧನಾ ಕೇಂದ್ರ (ಎನ್‌ಸಿಡಿಆರ್‌ಸಿ)ಯನ್ನು ಸ್ಥಾಪಿಸಿದೆ. ಈ ಮೂಲಕ ಸೈಬರ್ ಅಪರಾಧ ತಡೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ.
ರಾಷ್ಟ್ರೀಯ ಸೈಬರ್ ಸುರಕ್ಷತೆ ಮತ್ತು ಭದ್ರತಾ ಗುಣಮಟ್ಟ ಇದರ ನಿರ್ವಹಣೆ ಮಾಡುತ್ತಿದೆ. ಇದರಲ್ಲಿರುವ ಸದಸ್ಯರು ಸೈಬರ್ ಫೋರೆನ್ಸಿಕ್‌ನ ಮೇಲೆ ಕೆಲಸ ಮಾಡುತ್ತಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಿಸ್ಟಂ, ನೆಟ್‌ವರ್ಕ್ ಅಪರೇಶನ್, ಮಾಹಿತಿಯ ಸಂರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಕ್ಟಿಕಲ್ ಅನುಭವ ಒದಗಿಸುತ್ತದೆ. ಬೋಧಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಕ್ರೈಪ್ಟೋಗ್ರಫಿ ಮತ್ತು ನೆಟ್‌ವರ್ಕ್ ಸೆಕ್ಯೂರಿಟಿ ರಿಸರ್ಚ್ ಅಭಿವೃದ್ಧಿ ಚಟುವಟಿಕೆಗಳಿಗೂ ಈ ಕೇಂದ್ರ ಅವಕಾಶ ನೀಡುತ್ತಿದೆ. ಅಂಡರ್ ಗ್ರಾಜುವೇಟ್ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಟೂಲ್ಸ್‌ಗಳಾದ ಹೆಕ್ಸ್, ಎನ್‌ಕೇಸ್, ಅಲ್ಟಿಮೇಟ್ ಫೋರೆನ್ಸಿಕ್ ಟೂಲ್ಸ್ ಮೊದಲಾದ ಸಾಫ್ಟ್‌ವೇರ್‌ಗಳ ನಿರ್ವಹಣೆ ಕುರಿತು ತರಬೇತಿಯನ್ನೂ ನೀಡುತ್ತಿದೆ.
ಪ್ರಸಕ್ತ ಈ ಲ್ಯಾಬ್‌ನ್ನು ವಿದ್ಯಾರ್ಥಿಗಳು ಪ್ರಾಜೆಕ್ಟ್ ಮತ್ತು ಇಂಟರ್ನ್‌ಶಿಪ್‌ಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪೂರ್ಣಾವಧಿ ಇಂಟರ್ನಿಗಳು ಇಲ್ಲಿರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನು ಭದ್ರತಾ ತಂತ್ರಜ್ಞಾನ ಕುರಿತು ಸಂಶೋಧನೆಗೆ ಬಳಸಿಕೊಳ್ಳಬಹುದಾಗಿದೆ. 2016ರಲ್ಲಿ ಎಂಟೆಕ್ ಇನ್ ಸೈಬರ್ ಸೆಕ್ಯೂರಿಟಿ ಪ್ರೊಗ್ರಾಮ್ ಕೋರ್ಸ್‌ನ್ನು ಕೇಂದ್ರ ಆರಂಭಿಸಲಿದ್ದು, ಟೆಕ್ನಾಲಜಿ ಸೆಕ್ಯುರಿಟಿ, ಪ್ರೊಟೆಕ್ಟಿಂಗ್ ಕಂಪ್ಯೂಟರ್ಸ್, ನೆಟ್‌ವರ್ಕ್, ಸೆಕ್ಯೂರ್ ಪ್ರೋಗ್ರಾಮ್ಸ್ ಆಂಡ್ ಡೇಟಾ ಫ್ರಂ ಅನ್‌ಅಥರೈಸ್ಡ್ ಯೂಸರ್ಸ್ ಮೊದಲಾದ ಅಂಶಗಳತ್ತ ಅದು ಗಮನ ಹರಿಸಲಿದೆ.