ದೇಶದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್, ಅಂತಾರಾಷ್ಟ್ರೀಯ ರ‌್ಯಾಂಕಿಂಗ್‌ನಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.
ಗುರುವಾರ ಬಿಡುಗಡೆಯಾದ ಇತ್ತೀಚಿನ ಬಿಡಬ್ಲ್ಯೂಎಫ್ ಪಟ್ಟಿಯಲ್ಲಿ ಚೀನಾದ ಲಿ ಕ್ಸುರುಯಿ ಮೂರನೇ ಸ್ಥಾನಕ್ಕೆ ಇಳಿದ ನಂತರ ಸೈನಾ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಭಾರತದಲ್ಲಿ ನಡೆದ ಇಂಡಿಯನ್ ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ ದೇಶದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕಳೆದ ವಾರ ಸಿಂಗಾಪುರ್ ಓಪನ್ ಸೀರೀಸ್‌ನಲ್ಲಿ ಸೈನಾ ಆಡಲಿಲ್ಲವಾದರೂ, ಕ್ಸುರುಯಿ ಪಂದ್ಯಾವಳಿಯಿಂದ ಹೊರಬಿದ್ದ ಬಳಿಕ ಮಹಿಳೆಯರು ಸಿಂಗಲ್ಸ್ ಪಟ್ಟಿಯಲ್ಲಿ ಎರಡು ಸ್ಥಾನ ಕೆಳೆಗಿಳಿದಿದ್ದಾರೆ.
ಪುರುಷರ ರ‌್ಯಾಂಕಿಂಗ್‌ನಲ್ಲಿ,ಕೆ.ಶ್ರೀನಾಥ್ 4ನೇ ಸ್ಥಾನ ಉಳಿಸಿಕೊಂಡಿದ್ದರೆ, ಪಿ. ಕಶ್ಯಪ್ ಸಿಂಗಾಪುರ್ ಓಪನ್ ಸೀರಿಸ್ ಸೆಮಿಫೈನಲ್‌ನಲ್ಲಿ 14ನೇ ಸ್ಥಾನಕ್ಕೆ ಏರಿದ್ದಾರೆ.