ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಗುರುಕುಲ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ಅಜ್ಜಿ-ಅಜ್ಜಂದಿರಿಗಾಗಿ ವಿಶೇಷ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು.
ಡಾ.ಎಚ್.ವಿ.ನರಸಿಂಹಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಲೆ ಎಂದರೆ ಕೇವಲ ಮಕ್ಕಳಿಗೆ ಅಂಕ ಪಟ್ಟಿ ನೀಡುವ ಸಂಸ್ಥೆ ಅಲ್ಲ, ಬದಲಾಗಿ ಮಕ್ಕಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಪಾಶ್ಚಾತ್ಯ ಶಿಕ್ಷಣದ ಹಾವಳಿಯಿಂದ ನಮ್ಮ ತನ ಮರೆಯಾಗುತ್ತಿರುವ ಈ ಕಾಲದಲ್ಲಿ ಅದನ್ನು ಉಳಿಸಿಕೊಳ್ಳಲು ಇಂತಹ ಕಾರ‍್ಯಕ್ರಮಗಳು ಹೆಚ್ಚಾಗಿ ಮೂಡಿ ಬರಬೇಕು. ಕೂಡು ಕುಟುಂಬದಲ್ಲಿ ಇರುವ ಆಚಾರ-ವಿಚಾರಗಳ ಮಹತ್ವದ ಕುರಿತು ತಿಳಿಸಿದರು.
ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ‍್ಯನಿರ್ವಾಹಕಿ ಅನುಪಮ ಎಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಶಾಯಿಜು ಕೆ. ಆರ್ ನಾಯರ್ ಉಪಸ್ಥಿತರಿದ್ದರು. ವಿಶಾಲ.ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾ ಸ್ವಾಗತಿಸಿದರು, ಶಿಕ್ಷಕಿ ವಿಜೇತ ವಂದಿಸಿದರು.