ಶ್ರೀಗೌರಿ ಎಸ್. ಜೋಶಿಗೆ ‘ಯುವ ಚೇತನಾ ಪ್ರಶಸ್ತಿ’

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ: ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ಅಂತಿಮ ಎಂಸಿಜೆ ವಿದ್ಯಾರ್ಥಿನಿ ಶ್ರೀಗೌರಿ ಎಸ್ ಜೋಶಿ ‘ಯುವ ಚೇತನಾ ಪ್ರಶಸ್ತಿ-2017’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

Call us

Click Here

ಬೆಂಗಳೂರು ಮೂಲದ ‘ಯೂತ್ ಫಾರ್ ಸೇವಾ’ ಎನ್.ಜಿ.ಓ ಸಂಘಟನೆ ‘ಬದಲಾವಣೆಯ ಸೈನಿಕರು’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸ್ಪರ್ಧೆಯನ್ನು ಏರ್ಪಡಿಸಿತ್ತು. ಧನಾತ್ಮಕ ಪತ್ರಿಕೋದ್ಯಮ, ಪರಿಣಾಮಕಾರಿ ಬರಹ, ಕ್ರಿಯಾತ್ಮಕ ಬರಹ ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ, ಧನಾತ್ಮಕ ಪತ್ರಿಕೋದ್ಯಮ ವಿಭಾಗದಿಂದ ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಹಂತದ ದೂರವಾಣಿ ಸಂದರ್ಶನದ ನಂತರ ಮುಖಾಮುಖಿ ಸಂದರ್ಶನ ಹಾಗೂ ಸ್ಕೈಪ್ ಸಂದರ್ಶನದ ಸಾಮಾರ್ಥ್ಯದ ಆಧಾರದ ಮೇಲೆ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಫ್ರಶಸ್ತಿಗೆ ದಕ್ಷಿಣ ಭಾರತದಿಂದ 30 ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗಿದ್ದು, ಕೊನೆಯ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾರ್ಚ 26ರಂದು ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಶ್ರೀಗೌರಿ ಅವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್‌ರಾಮ್ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ

Leave a Reply