ಗೋ ಸೇವೆಯಿಂದ ಬದುಕಿನಲ್ಲಿ ಆನಂದ: ಶ್ರೀ ನೃಸಿಂಹಾಶ್ರಮ ಸ್ವಾಮೀಜಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋಗ್ರಾಸ ನೀಡುವುದರಿಂದ ಕರ್ಮ ಕ್ಷಯಿಸಿ ಬದುಕಿನಲ್ಲಿ ಆನಂದ ನೆಲೆಸುವುದು ಆದುದರಿಂದ ಗೋವಿನ ಸೇವೆ ಆತ್ಮೋನ್ನತಿಗೆ ಪರಮ ಪವಿತ್ರ ಕಾರ್ಯವಾಗಿದೆ ಎಂದು ಹಂಗಾರಕಟ್ಟೆಯ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.

Call us

Click Here

ಅವರು ಯುಗಾದಿಯ ಶುಭ ಸಂದರ್ಭದಲ್ಲಿ ಕೋಟೇಶ್ವರದ ಹರಿಹರ ಸೇವಾ ಬಳಗದವರು ಹೊರ ತಂದ ಗಾವೋ ವಿಶ್ವಸ್ಯ ಮಾತರಃ ಎನ್ನುವ ಜ್ಞಾನಪ್ರದ ಗೋಡೆ ಫಲಕವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜಗತ್ತಿನಲ್ಲಿ ಕಾಮಧೇನುವಿಗೆ ಮಹತ್ವದ ಸ್ಥಾನವಿದೆ. ಗೋವಿನ ಪಾಲನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆ, ನೆಮ್ಮದಿ, ನೆಲಸಲು ಸಹಕಾರಿಯಾಗಿದೆ. ಗೋ ಉತ್ಪನ್ನಗಳು ಪೂಜೆಯ ಶ್ರೇಷ್ಠತೆಯನ್ನು ಹೆಚ್ಚಿಸುವ ಜೊತೆಗೆ ಸಮಗ್ರ ಕುಟುಂಬದ ಆರೋಗ್ಯವಂತ ಜೀವನಕ್ಕೆ ಭದ್ರ ತಳಹದಿಯನ್ನು ನೀಡುತ್ತದೆ. ಹಾಗಾಗಿ ಮನೆಮನೆಯಲ್ಲಿ ಗೋವಿನ ಪಾಲನೆಯಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಹರಿಹರ ಸೇವಾ ಬಳಗದ ಅಧ್ಯಕ್ಷರಾದ ಕೆ. ಮೋಹನ ಆಚಾರ್ಯ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ಪುಷ್ಪರಾಜ್, ಹರೀಶ್ ಜೆ. ಉಪಸ್ಥಿತರಿದ್ದರು.

Leave a Reply