ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಬೈಂದೂರು ಇದರ ಆಶ್ರಯದಲ್ಲಿ ೨೨ನೇ ವಾರ್ಷಿಕೋತ್ಸವ ಹಾಗೂ ೧೨೬ನೇ ಅಂಬೇಡ್ಕರ್ ಜಯಂತಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿತು.
ಹಟ್ಟಿಯಂಗಡಿ ನಳಂದಾ ವಿದ್ಯಾಪೀಠದ ಪ್ರಾಂಶುಪಾಲ ಗುರುರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಬೈಂದೂರು ವೃತ್ತ ನೀರೀಕ್ಷಕ ರಾಘವ ಡಿ. ಪಡೀಲ್, ಶಿರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಸವಿತಾ ಸಮಾಜದ ಜಿಲ್ಲಾ ಸಂಘಟಕ ಮಂಜುನಾಥ ಸಾಲಿಯಾನ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ನರಸಿಂಹ ಹಳಗೇರಿ, ಬೈಂದೂರು ಉಪವಲಯ ಅರಣ್ಯಾಧಿಕಾರಿ ಸದಾಶಿವ ಕೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಕಲಚೇತನ ಕ್ರೀಡಾಪಟುಗಳಾದ ಭುವನಾ ಹಾಗೂ ಮೇಘನಾ ಸಹೋದರಿಯರನ್ನು ಗುರುತಿಸಿ ಗೌರವಿಸಲಾಯಿತು. ಸೇವೆಯಿಂದ ನಿವೃತ್ತರಾದ ಭಾಸ್ಕರ ಪಿ ಹಾಗೂ ಪರಮೇಶ್ವರ ಹಾವಳಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಯಡ್ತರೆ ಸ್ವಾಗತಿಸಿದರು. ಚೈತ್ರಾ ಯಡ್ತರೆ ಕ್ರೀಡಾ ವಿಜೇತರ ಯಾದಿ ವಾಚಿಸಿದರು. ಸುರೇಶ್ ಕುಮಾರ್ ಹಾಗೂ ಗೀತಾ ಸುರೇಶ್ ಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು. ಸಂಚಾಲಕಿ ರತ್ನಾ ನಾಗೇಶ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ ಪಿ. ಕಾರ್ಯಕ್ರಮ ನಿರೂಪಿಸಿದರು.