ಹುಣಸೆ: ತ್ವಚೆಯ ಸೌಂದರ್ಯವರ್ಧಕ

Call us

Call us

Call us

Hunaseನಿಮ್ಮ ತ್ವಚೆಯ ಬಣ್ಣವನ್ನು ಹುಣಸೆಹಣ್ಣು ಮತ್ತಷ್ಟು ಸುಧಾರಿಸುತ್ತದೆ. ಹುಣಸೆಹಣ್ಣು ಬಳಸುವುದರಿಂದ ತ್ವಚೆಯಲ್ಲಿರುವ ಹಲವಾರು ಲೋಪ ದೋಷಗಳು ನಿವಾರಣೆಯಾಗುತ್ತವೆ.

Call us

Click Here

ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದಲ್ಲಿ, ಇದು ನಿಮ್ಮ ತ್ವಚೆಗೆ ಉರಿಯುವಂತಹ ಅನುಭವವನ್ನು ನೀಡುತ್ತದೆ. ಆದ್ದರಿಂದ ಇದನ್ನು ನೇರವಾಗಿ ಮುಖದ ಮೇಲೆ ಬಳಸುವ ಮೊದಲು, ಕಿವಿಯ ಹಿಂದಿನ ಭಾಗದಲ್ಲಿ ಪರೀಕ್ಷಿಸಿ ನಂತರ ಪ್ರಯತ್ನಿಸಿ. ತ್ವಚೆ ಬೆಳ್ಳಗಾಗಲು ಇತರ ಕ್ರೀಮ್‌ಗಳ ಮೊರೆ ಹೋಗುವ ಬದಲು ಹುಣಸೆಹಣ್ಣು ಬಳಸುವುದು ಉತ್ತಮವಾದ ಪರಿಹಾರವಾಗಿದೆ. ಇದು ಕೇವಲ ಒಂದೆರಡು ದಿನಗಳಲ್ಲಿ ನಿಮಗೆ ಫಲಿತಾಂಶವನ್ನು ಒದಗಿಸುತ್ತದೆ.

ತ್ವಚೆಯು ಬೆಳ್ಳಗಾಗಲು ಹಾಗೂ ಕಾಂತಿಯುಕ್ತವಾಗಲು ಹುಣಸೆಹಣ್ಣಿನ ಜತೆಗೆ ಕೆಲವೊಂದು ಪದಾರ್ಥಗಳನ್ನು ಬಳಸಬೇಕಾಗುತ್ತದೆ. ಅವುಗಳಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಉದಾಹರಣೆಗೆ ಆಲೀವ್ ಎಣ್ಣೆಯನ್ನು ಹುಣಸೆ ಹಣ್ಣಿನ ಜೊತೆಗೆ ಬಳಸಿದರೆ, ನಿಮ್ಮ ತ್ವಚೆ ಮೃದು ಮತ್ತು ಕೋಮಲತೆಯಿಂದ ಕೂಡಿ ತಾಜಾ ಆಗಿ ಕಂಗೊಳಿಸುತ್ತದೆ. ಆದ್ದರಿಂದ ಹುಣಸೆಹಣ್ಣಿನ ಫೇಸ್ ಪ್ಯಾಕ್ ಬಳಸಿದ ಮೇಲೆ ಸ್ವಾಭಾವಿಕವಾದ ಎಣ್ಣೆಗಳನ್ನು ಬಳಸಲು ಮರೆಯಬೇಡಿ.

Leave a Reply