ನಾಲ್ಕನೇ ಬಾರಿ ಎಂಡಿಆರ್‌ಟಿ ಪ್ರತಿನಿಧಿಯಾಗಿ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಏಕೈಕ ಗ್ಯಾಲಕ್ಸಿ ಕ್ಲಬ್ ಸದಸ್ಯರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಸತತ ೪ನೇ ಬಾರಿಗೆ ಎಂಡಿಆರ್‌ಟಿ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಶಾಖೆಯ ಗೌರವನ್ನು ವಿಭಾಗ ಮಟ್ಟದಲ್ಲಿ ಎತ್ತರಕ್ಕೇರಿಸಿದ್ದಾರೆ ಹಾಗೂ ಅಮೇರಿಕಾದ ಲಾಸ್‌ಎಂಜಲಿಸ್‌ನಲ್ಲಿ ನಡೆಯಲಿರುವ 2018ರ ಎಂಡಿಆರ್‌ಟಿ ಸಮ್ಮೇಳನದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ ಎಂದು ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೃಷ್ಣ ಕುಲಕರ್ಣಿ ಅವರು ಶಾಖೆಯಲ್ಲಿ ನಡೆದ ವಿಮಾಪ್ರತಿನಿಧಿಗಳ ಸಭೆಯಲ್ಲಿ ಅಭಿನಂದಿಸಿದ್ದಾರೆ.

Call us

Click Here

ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆ ಕೋಣಿಯ ವ್ಯವಸ್ಥಾಪಕ ನಿರ್ದೇಶಕರಾಗಿ, ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರದ ನಿಕಟಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪಶಾಖಾಧಿಕಾರಿ ಗಿರೀಶ್, ವಿಮಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply