ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನಲ್ಲಿ ನಡೆದ ಬೈಕ್-ಕಾರು ಅಪಘಾತವೊಂದರಲ್ಲಿ ಕುಂದಾಪುರ ಮೂಲದ ಯುವತಿ ಸೇರಿದಂತೆ ಬೈಕ್ ಚಲಾಯಿಸುತ್ತಿದ್ದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಮೊಳಹಳ್ಳಿಯ ಸುರೇಶ್ ಕುಲಾಲ್ ಎಂಬುವವರ ಪುತ್ರಿ ರಶ್ಮಿತಾ ಕುಲಾಲ್ (19) ಹಾಗೂ ಆಕೆಯ ಸಂಬಂಧಿ ಹೆಬ್ರಿ ಮೂಲದ ಯುವಕ ಮೃತ ದುರ್ದೈವಿಗಳು.
ದ್ವಿತೀಯ ಪಿಯುಸಿ ಮುಗಿಸಿದ್ದ ರಶ್ಮಿತಾ ಬೆಂಗಳೂರಿನ ಸಂಬಂಧಿ ಮನೆಗೆ ತೆರಳಿದ್ದಳು. ಕೆಲಸ ನಿಮಿತ್ತ ಬೈಕ್‌ನಲ್ಲಿ ಸಂಬಂಧಿಯೊಂದಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಶ್ಮಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಯವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆನ್ನಲಾಗಿದೆ. ಬೆಂಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.