ರೇಖಾಗಣಿತದಲ್ಲಿ ಹೊಸ ಸೂತ್ರ ಕಂಡುಹಿಡಿದ ಹೆಮ್ಮಾಡಿಯ ಹುಡುಗ

Call us

Call us

Call us

ತಾಯಿಯ ತಮಾಷೆ ಹೊಸ ಸೂತ್ರಕ್ಕೆ ಪ್ರೇರಣೆ

Call us

Click Here

[quote bgcolor=”#ffffff” bcolor=”#dd3333″ arrow=”yes” align=”right”]ಅಮ್ಮಾ ನನ್ನ ಶಿಕ್ಷಕರು ಕೊಟ್ಟಿರುವ ರೇಖಾಗಣಿತದ ಈ ಲೆಕ್ಕದಲ್ಲಿ ಬಾಹುಗಳ ಸಂಖ್ಯೆ ಕಂಡುಹಿಡಿಯಲು 2 ಸೂತ್ರಗಳ ಬದಲು ಒಂದೇ ಸೂತ್ರ ಯಾಕೆ ಕೊಟ್ಟಿಲ್ಲ ಎಂದು ಕೇಳಿದ. ಅದಕ್ಕೆ ಅವನ ತಾಯಿ ತಮಾಷೆಗಾಗಿ ಈ ರೀತಿಯ ಸೂತ್ರ ಇದುವರೆಗೆ ಯಾರೂ ಕಂಡುಹಿಡಿದಿಲ್ಲ. ಬೇಕಾದರೆ ನೀನೇ ಹೊಸ ಸೂತ್ರ ಕಂಡುಹಿಡಿ ಎಂದು ತಮಾಷೆ ಮಾಡಿದರು.  ಹೌದು ನಾನೇಕೆ ಹೊಸ ಸೂತ್ರ ಕಂಡು ಹಿಡಿಯಬಾರದು ಎಂದು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿದ ಆತ ಸೂತ್ರ ಕಂಡುಹಿಡಿಯಲು ಮುಂದಾದ. [/quote]

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಗಣಿತ ಎಂದರೆ ಕಬ್ಬಿಣದ ಕಡಲೆ ಎಂದೇ ಭಾವಿಸುವ ವಿದ್ಯಾರ್ಥಿಗಳ ನಡುವೆ ಪಠ್ಯ ಪುಸ್ತಕದ ಲೆಕ್ಕಕ್ಕೆ ಸಡ್ಡು ಹೊಡೆದ ಬಾಲಕನೋರ್ವ ತಾನೇ ಹೊಸ ಗಣಿತ ಸೂತ್ರವೊಂದನ್ನು ಕಂಡುಹಿಡಿದು ಸೈ ಎನಿಸಿಕೊಂಡಿದ್ದಾನೆ. ಕುಂದಾಪುರ ತಾಲೂಕಿನ ಹೆಮ್ಮಾಡಿ ಮೂಲದ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೂರ್ಣಪ್ರಜ್ಞ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣ ವಿದ್ಯಾರ್ಥಿ ಅಗ್ನಿತೇಜ್ ಈ ಸಾಧನೆ ಮಾಡಿರುವ ಹುಡುಗ.

ಹೆಮ್ಮಾಡಿ ಲಕ್ಷ್ಮಿನಾರಾಯಣ್ ಹಾಗೂ ಇಂದ್ರಾಣಿ ದಂಪತಿಯ ಎರಡನೇ ಪುತ್ರನಾಗಿರುವ ಅಗ್ನಿತೇಜ್ ರೇಖಾಗಣಿತದಲ್ಲಿ ಬಹುಭುಜ ಎಂಬ ಪಠ್ಯಕ್ಕೆ ಹೊಸ ಸೂತ್ರಗಳನ್ನು ಕಂಡು ಹಿಡಿದು ಸೈ ಎನಿಸಿಕೊಂಡಿದ್ದಾನೆ. ಈತ 9ನೇ ತರಗತಿಯಲ್ಲಿದ್ದಾಗ ಶಿಕ್ಷಕರು ಗಣಿತದ 4 ಅಧ್ಯಾಯದಲ್ಲಿ ನೀಡಿದ ಬಹುಭುಜದ ಪ್ರತಿ ಒಳಕೋನ ಅನುಕ್ರಮ ಹೊರ ಕೋನದ ಎಷ್ಟಿರುತ್ತದೆ ಎಂದು ತಿಳಿದುಕೊಂಡು ಬರಲು ಹೋಂ ವರ್ಕ್ ನೀಡಿದ್ದರು. ಈ ಬಗ್ಗೆ ತಲೆಕೆಡಿಕೊಂಡ ಅಗ್ನಿತೇಜ್ ಪಠ್ಯ ಪುಸ್ತಕದ ಪ್ರಕಾರ ಈ ಸಮಸ್ಯೆಯನ್ನು ಬಿಡಿಸಲು ಎರಡು ಸೂತ್ರವನ್ನು ಅಳವಡಿಸಬೇಕಾಗಿತ್ತು.

ಆದರೆ ಇದಕ್ಕೆ ಏಕೆ ಪ್ರತ್ಯೇಕ ಸೂತ್ರವನ್ನೇ ಅಳವಡಿಸಬಾರದು ಎಂದು ಯೋಚಿಸಿ ಗಣಿತ ಶಿಕ್ಷಕಿಯಾದ ತನ್ನ ತಾಯಿಯ ಬಳಿ ವಿಚಾರಿಸಿದಾಗ ಅವರು ಹೊಸದಾಗಿ ನೀನೆ ಏನಾದ್ರು ಕಂಡು ಹಿಡಿ ನೋಡೋಣ ಅಂತಾ ತಮಾಷೆ ಮಾಡಿದ್ದಾರೆ. ಬಳಿಕ ಪಠ್ಯ ಪುಸ್ತಕದ ಪ್ರಕಾರ ಬಿಡಿಸಿದ ಉತ್ತರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಹೋಲಿಕೆ ಇರುವುದು ಕಂಡುಬಂತು. ಕುಂದಾಪ್ರ ಡಾಟ್ ಕಾಂ ವರದಿ.

Click here

Click here

Click here

Click Here

Call us

Call us

ಅಗ್ನಿತೇಜನ ಸೂತ್ರ:
ಪ್ರತಿ 6 ನೇ ಪ್ರಶ್ನೆಯಲ್ಲಿರುವ ಸಂಖ್ಯೆಗೆ 2 ರಿಂದ ಗುಣಿಸಿ ಎರಡನ್ನು ಕೂಡಿಸಿದಾಗ ಬಾಹುಗಳ ಸಂಖ್ಯೆಯೂ ಉತ್ತರವಾಗಿ ಬಂತು. ಆಗ ಈ ವಿದ್ಯಾರ್ಥಿ n=2Xa+2 ಎಂದು ಮೊದಲು ಮಾಡಿದ ನಂತರ ಇಲ್ಲಿ 2 ಸಾಮಾನ್ಯ ಅಪವರ್ತನ ಆಗಿರುವುದರಿಮದ n=2(a+1) ಎಂಬ ಹೊಸ ಸೂತ್ರವನ್ನು ಕಂಡುಹಿಡಿದ. ನಂತರ ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾದಾಗ ಪ್ರೇರಣೆಗೊಂಡ ಅಗ್ನಿತೇಜ್ ಮತ್ತೆ ಪ್ರಶ್ನೆ ಸಂಖ್ಯೆ 5 ಕ್ಕೆ ಹೊಸ ಸೂತ್ರ ಕಂಡುಹಿಡಿದ. ಪ್ರಶ್ನೆ ಸಂಖ್ಯೆ 6 ಹಾಗೂ 5 ರಲ್ಲಿ ಬರುವ ಉತ್ತರಗಳನ್ನು ಹೋಲಿಸಿದಾಗ ಪ್ರತಿ ಅನುಕ್ರಮ ಹೊರ ಕೋನವು ಅದರ ಅನುಕ್ರಮ ಒಳ ಕೋನದ ವಿಲೋಮ ಅನುಪಾತದಲ್ಲಿರುವುದು ಕಂಡುಬಂತು.

ಆದ್ದರಿಂದ ಅವನು n=2(1/t+1) ಎಂಬ ಹೊಸ ಸೂತ್ರವನ್ನು ಕಂಡು ಹಿಡಿದಿದ್ದಾನೆ. ಈ ಮೂರು ಸೂತ್ರಗಳಿಗೆ ಅಗ್ನಿತೇಜ್ ಎಂದು ಹೆಸರು ನೀಡಿದ್ದು, ಈ ಬಾಲಕ ಎಲ್ಲೆಡೆ ಸೈ ಎನಿಸಿಕೊಂಡಿದ್ದಾನೆ. ಇನ್ನು ವಿದ್ಯಾರ್ಥಿ ಅಗ್ನಿತೇಜ್ ಒಟ್ಟು ಮೂರು ಸೂತ್ರಗಳನ್ನು ಕಂಡುಹಿಡಿದಿದ್ದಾನೆ. ಈ ಸೂತ್ರಗಳನ್ನು ಅಳವಡಿಸಿಕೊಂಡು ಲೆಕ್ಕವನ್ನು ಮಾಡಿದ್ರೆ ಈಗಿರುವ ಪಠ್ಯ ಪುಸ್ತಕದ ಸೂತ್ರಗಳನ್ನು ಅಳವಡಿಸಿಕೊಂಡ್ರೆ 15 ಹಂತದಲ್ಲಿ ಲೆಕ್ಕವನ್ನು ಬಿಡಿಸಬೇಕಾಗುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ.

ರಾಜ್ಯ ಪಠ್ಯಕ್ರಮ ಪರಿಷ್ಕರಣ ಮಂಡಳಿಗೆ ಮಂಡನೆ:
ಆದರೆ ಈ ಸೂತ್ರಗಳನ್ನು ಅಳವಡಿಸಿಕೊಂಡ್ರೆ ಕೇವಲ ನಾಲ್ಕು ಹಂತದಲ್ಲಿ ಲೆಕ್ಕವನ್ನು ಸಂಪೂರ್ಣಗೊಳಿಸಬಹುದು. ಹೀಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇನ್ನು ಅಗ್ನಿತೇಜ್ ಈ ಸೂತ್ರಗಳನ್ನು ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಹಾಗೂ ಕೇಂದ್ರ ಪಠ್ಯ ಪುಸ್ತಕ ಪರಿಷ್ಕರಣಾ ಮಂಡಳಿಯ ಮುಂದೆ ಮಂಡನೆ ಮಾಡಿದ್ದು, ಅಲ್ಲಿಯೂ ಸೈ ಎನಿಸಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಈ ಸೂತ್ರಗಳನ್ನು ೯ನೇ ತರಗತಿಯ ಕೆಲ ಅಭ್ಯಾಸಗಳ ಲೆಕ್ಕಗಳನ್ನು ಬಿಡಿಸಲು ಪಠ್ಯ ಪುಸ್ತಕಕ್ಕೆ ಅಳವಡಿಸಿಕೊಳ್ಳುವ ಭರವಸೆ ನೀಡಿದ್ದಾರೆ.

ಅಗ್ನಿತೇಜ್ ಕಂಡುಹಿಡಿದ ಸೂತ್ರಗಳ ಅಳವಡಿಕೆಯ ಒಂದು ಉದಾಹರಣೆ:

ಗಣಿತ: 9ನೇ ತರಗತಿ
ರೇಖಾಗಣಿತ ಅಧ್ಯಾಯ-4
ಬಹುಭುಜಾಕೃತಿಗಳು
ಪ್ರಶ್ನೆ ಸಂಖ್ಯೆ 5
1. ಒಂದು ನಿಯಮಿತ ಬಹುಭುಜಾಕೃತಿಯ ಹೊರಕೋನದ ಅಳತೆಯು ಅದರ ಅನುಕ್ರಮ ಒಳಕೋನದ ಎರಡರಷ್ಟಕ್ಕೆ ಸಮನಾಗಿದ್ದರೆ ಅದರ ಸಂಖ್ಯೆಯನ್ನು ಕಂಡು ಹಿಡಿಯುವುದು.
ಪಠ್ಯಪುಸ್ತಕದ ಪ್ರಕಾರ
e= ನಿಯಮಿತ ಬಹುಭುಜಾಕೃತಿಯ ಹೊರಕೋನ
i= ನಿಯಮಿತ ಬಹುಭುಜಾಕೃತಿಯ ಒಳಕೋನ
ಪ್ರಶ್ನೆ ಪ್ರಕಾರ
e=2i
ನಮಗೆ ತಿಳಿದಿರುವಂತೆ e+i=1800
2i+i=1800
3i=1800
i=1800/3
i=600
ನಮಗೆ ತಿಳಿದಿರುವಂತೆ e+i=1800
e+600 = 1800
e=1800 – 600
e=1200
ನಮಗೆ ತಿಳಿದಿರುವಂತೆ ne=3600
n= 3600/e
n=3600/1200
n=3

ಅಗ್ನಿತೇಜನ ಸೂತ್ರದ ಪ್ರಕಾರ: ಕುಂದಾಪ್ರ ಡಾಟ್ ಕಾಂ ವರದಿ.
n=ಬಾಹುಗಳ ಸಂಖ್ಯೆ
t= ಪ್ರತಿ ಹೊರಕೋನವು ಅನುಕ್ರಮ ಒಳಕೋನದ ಎಷ್ಟರಷ್ಟು ಎಂದು ಸೂಚಿಸುತ್ತದೆ ಪ್ರಶ್ನೆ ಪ್ರಕಾರ
t=2
n=2(1/t+1) (ಹೊಸ ಸೂತ್ರ)
n=2(1/2+1)
n=2X1½
n=2X3/2
n=3

Leave a Reply