ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ಕಾರ್ಯಗಾರ ಜರುಗಿತು. ಆದರ್ಶ ವಿದ್ಯಾಕೇಂದ್ರದ ಪ್ರಾಂಶುಪಾಲ ಬಿನಿಮೋನ್ ವಿ.ಆರ್ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಗುರುತಿಸುವ ಬಗೆ ಹೇಗೆ, ತರತಗತಿಯಲ್ಲಿ ಶಿಕ್ಷಕನ ವರ್ತನೆ ಎಷ್ಟು ಮಹತ್ವಪೂರ್ಣವಾಗಿರುತ್ತದೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ದಿನದಿಂದ ದಿನಕ್ಕೆ ಅಭಿವೃದ್ಧಿಗೊಳಿಸುವುದು ಹೇಗೆ ಎಂಬುದನ್ನು ವಿವರಿಸಿದರು.
ಮಕ್ಕಳ ಮಾನಸಿಕ ಸ್ಥಿತಿ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಅವರ ಸೂಕ್ಷ್ಮತೆಯನ್ನು ಅರಿತು, ಅರ್ಥೈಸಿಕೊಂಡು ಚಟುವಟಿಕೆಗಳ ಮೂಲಕ ಪ್ರೋತ್ಸಾಹಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ಮಕ್ಕಳನ್ನು ಹೆದರಿಸುವುದರಿಂದ, ಉತ್ಸಾಹ ಮೊಟಕುಗೊಳಿಸುವುದರಿಂದ ಅವರ ಬೆಳವಣಿಗೆಯ ವ್ಯಕ್ತಿತ್ವಕ್ಕೆ ಧಕ್ಕೆಯುಂಟುಮಾಡಿದಂತಾಗುತ್ತದೆ. ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಉತ್ಸಾಹವನ್ನು ಪ್ರೋತ್ಸಾಹಿಸುವ ಬಗೆ ಹೇಗೆ, ಗುಣಮಟ್ಟ ಅಂಶಗಳನ್ನು ಸಂಗ್ರಹಿಸಿ ಬೋಧಿಸುವ ಬಗೆ ಏಷ್ಟು ಉಪಯುಕ್ತ ಎಂದರು.
ಕಾರ್ಯಗಾರದಲ್ಲಿ ಶಾಲಾ ಪ್ರಿನ್ಸಿಪಾಲರಾದ ಸಾಯಿಜು.ಕೆ.ಆರ್. ನಾಯರ್ ಮತ್ತು ಉಪ ಪ್ರಾಂಶುಪಾಲರಾದ ಶ್ರೀ. ಸುನಂದಾ ಪಾಟೀಲ್ ರವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಶಿಕ್ಷಕರಾದ ಶ್ರೀ. ರಾಮಚಂದ್ರ ಹೆಬ್ಬಾರ್ ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ. ಸುಷ್ಮಾ ರವರು ವಂದಿಸಿದರು.