ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಮಳೆ ನೀರಿನ ಸಂರಕ್ಷಣೆ ಬಗ್ಗೆ ಕಾರ್ಯಕ್ರಮ ಮಂಗಳವಾರ ಜರುಗಿತು.
’ಅಡಿಕೆ’ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆರವರು ’ಮಳೆ ನೀರಿನ ಸಂರಕ್ಷಣೆ ’ ಹೇಗೆ ಸಾಧ್ಯ ಅದರ ವಿಧಿ ವಿಧಾನವನ್ನು ’ಮುತ್ತಿನ ಸರದ ಪೋಣಿಕೆ’ಯಂತೆ ವಿವರಿಸಿದರು. ಪ್ರತಿಯೊಂದು ಮನೆಯ ಮೇಲೆ ಚಾವಣಿಯಿಂದ ಬಂದ ನೀರಿನ ಸಂರಕ್ಷಣೆ ಹೇಗೆ ಮಾಡಬೇಕು. ಇದರಿಂದ ಕೆಲವು ವರ್ಷಗಳ ವರೆಗೆ ಬಳಸಲು ಸಾಧ್ಯ ಎಂದು ತಿಳಿಸಿದರು.
ಸಿಮೆಂಟ್ ರೋಡ್‌ನಿಂದ ಆಗುವ ಅನಾನುಕೂಲಕೂಲಗಳೊಂದಿಗೆ ಅಲ್ಲಿಯೇ ನೀರಿನ ಇಂಗುವಿಕೆಯ ಮಾರ್ಗವನ್ನು ಕಂಡುಕೊಳ್ಳುವ ಸಲಹೆಯನ್ನು ಕೊಟ್ಟು ಪ್ರತಿಯೊಂದು ಸ್ಥಳದಲ್ಲಿ ಇಂಗು ಗುಂಡಿಯನ್ನು ಅಳವಡಿಸಿದರೆ ನೀರಿನ ಸಂರಕ್ಷಣೆ ಸಾಧ್ಯ. ಹಾಗೆಯೇ ನಿಮ್ಮ ಮನೆಗಳಲ್ಲಿಯ ನೀರಿನ ಸಂರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಕಿವಿ ಮಾತನ್ನು ಹೇಳಿದರು. ಮಕ್ಕಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ. ಮಕ್ಕಳಲ್ಲಿರುವ ಮಳೆ ನೀರಿನ ಸಂರಕ್ಷಣೆ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಳೆ ನೀರಿನ ಸಂರಕ್ಷಣೆ ಅತ್ಯಮೂಲ್ಯವಾದುದು, ಇದು ಜೀವ ಜಲವಾಗಿರುವುದರಿಂದ ಸಂರಕ್ಷಣೆ, ವಿಧಿ ವಿಧಾನದ ಅಳವಡಿಕೆ ಸೂಕ್ತ ಎನ್ನುವುದನ್ನು ಮಕ್ಕಳಿಗೆ ಮನನ ಮಾಡಿದರು.
ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಹಕರಾದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್. ಶೆಟ್ಟಿರವರು ಉಪಸ್ಥಿತರಿದ್ದರು. ಗುರುಕುಲ ಪಿ.ಯು ಪ್ರಾಂಶುಪಾಲರಾದ ಸನ್ನಿ ಪಿ. ಜಾನ್ ಮತ್ತು ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಸಾಯಿಜು ಕೆ. ಆರ್. ನಾಯರ್ ರವರು ಉಪಸ್ಥಿತರಿದ್ದರು. ಇಂಗ್ಲೀಷ್ ಭಾಷಾ ಶಿಕ್ಷಕರಾದ ರಾಮಚಂದ್ರ ಹೆಬ್ಬಾರ್ ನಿರೂಪಣೆ ಮಾಡುತ್ತಾ ಸ್ವಾಗತಿಸಿದರು. ಜೀವಶಾಸ್ತ್ರದ ಶಿಕ್ಷಕರಾದ ಜೋಸ್ ರವರು ವಂದಿಸಿದರು.