ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಗುರುಕುಲ ಶಾಲೆಯ ಮೊಂಟೆಸರಿ ಮಕ್ಕಳಿಗಾಗಿ ಬಣ್ಣಗಳ ದಿನ ಎಂಬ ವಿಶೇಷ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಾಮನ್ಯವಾಗಿ ಪುಟಾಣಿಗಳು ಮೊದಲು ಆಕರ್ಷಿತರಾಗುವುದೇ ಬಣ್ಣಗಳಿಗೆ, ಆ ನಿಟ್ಟಿನಲ್ಲಿ ಪುಟಾಣಿಗಳಿಗಾಗಿ ಪ್ರಾಥಮಿಕ, ಮಾದ್ಯಮಿಕ, ಮತ್ತು ನೈಸರ್ಗಕ ಬಣ್ಣಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತಿ ವಿಭಾಗದ ಮಕ್ಕಳಿಗೆ ನಿರ್ದಿಷ್ಟ ಬಣ್ಣದ ಉಡುಗೆ ಹಾಕುವಂತೆ ಸೂಚಿಸಲಾಗಿತ್ತು.
ಪ್ರತಿ ತರಗತಿಯ ಮಕ್ಕಳು ಮತ್ತು ಶಿಕ್ಷಕಿ ನಿರ್ದಿಷ್ಟ ಬಣ್ಣದ ಉಡುಗೆ ತೊಟ್ಟು ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ತಂದು ಜೋಡಿಸಿದ್ದರು. ಕಾರ‍್ಯಕ್ರಮದ ಮೊದಲಿಗೆ ಬಣ್ಣಗಳಲ್ಲಿ ಎಷ್ಟು ವಿಧಗಳು? ಅವುಗಳ ಮಹತ್ವವೇನು? ಯಾಕೆ ಈ ಹಂತದಲ್ಲಿ ಬಣ್ಣಗಳ ದಿನಾಚರಣೆಯನ್ನು ಆಚರಿಸಬೇಕು ? ಎನ್ನುವ ವಿಷಯದ ಕುರಿತು ಸವಿಸ್ತಾರ ಮಾಹಿತಿಯನ್ನು ಮುಖ್ಯ ಶಿಕ್ಷಕಿ, ವಿಶಾಲಾ ಶೆಟ್ಟಿ ತಿಳಿಸಿದರು. ಹಾಗು ಶಿಕ್ಷಕಿಯರು ಪುಟಾಣಿಗಳ ಜೊತೆ ಸೇರಿ ಬಣ್ಣಗಳ ಹಾಡುಗಳನ್ನು ಹಾಡಿದರು, ಮತ್ತು ಬಣ್ಣಗಳ ಕುರಿತು ವಿವರಣೆಯನ್ನು ನೀಡಿದರು ಜೊತೆಗೆ ಕಾಮನಬಿಲ್ಲಗೆ ಬಣ್ಣ ಹಾಕುವ ಕ್ರಿಯಾತ್ಮಕ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದರ ಮೂಲಕ ಬಣ್ಣಗಳ ದಿನವನ್ನು ಅರ್ಥಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಅನುಪಮ ಎಸ್. ಶೆಟ್ಟಿ ಉಪ ಪ್ರಾಂಶುಪಾಲೆ ಸುನಂದಾ ಪಾಟೀಲ್ ಮತ್ತು ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ವಿಶಾಲಾ ಶೆಟ್ಟಿ ನಿರೂಪಿಸಿದರು.