ಶಿರೂರು: ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು, ಶಿರೂರು ಇಲ್ಲಿ ಜರುಗಿತು.

Call us

Click Here

ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಪ್ರಾಯದ ಹುಡುಗಿ, ೨೧ ವರ್ಷಕ್ಕಿಂತ ಕಡಿಮೆ ಪ್ರಾಯದ ಹುಡುಗ ಪರಸ್ಪರ ಒಪ್ಪಿ ಮದುವೆಯಾಗುವುದು ಅಥವಾ ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡಿಸುವುದುನ್ನು ಬಾಲ್ಯ ವಿವಾಹ ಎನ್ನಲಾಗುತ್ತದೆ. ಕರಾವಳಿಯ ಈ ಭಾಗದಲ್ಲಿ ಬಾಲ್ಯ ವಿವಾಹಗಳು ನಡೆದ ಪ್ರಕರಣ ತೀರಾ ಕಡಿಮೆಯಾಗಿದ್ದು, ಉತ್ತರ ಕರ್ನಾಟಕದ ಹಾಗೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಇಂದಿಗೂ ಕೂಡಾ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೆ ಇವೆ. ಇದರಿಂದಾಗಿ ಮಕ್ಕಳ ಮಾನಸಿಕ ಮತ್ತು ಬೌದ್ದಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಇಂತಹ ಬಾಲ್ಯ ವಿವಾಹಗಳನ್ನು ತಡೆಯುವ ಅಗತ್ಯ ಇದೆ ಎಂದು ಹೇಳಿದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಪ್ರಕಾಶ್ ಅಧ್ಯಕ್ಷತೆಯನ್ನು ವಹಿಸಿ, ಬಾಲ್ಯ ವಿವಾಹದಿಂದಾಗಿ ಸಮಾಜದ ಮೇಲೆ ಹಲವಾರು ದುಷ್ಪರಿಣಾಮಗಳು ಆಗುತ್ತಿದ್ದು ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಮಕ್ಕಳ ಹಕ್ಕನ್ನು ಈ ಬಾಲ್ಯ ವಿವಾಹ ತಡೆಯುತ್ತದೆ, ಆದುದರಿಂದ ಮಕ್ಕಳ ಸಂಪೂರ್ಣ ಜವಾಬ್ದಾರಿ ತಂದೆ ತಾಯಿಗಳ ಮೇಲೆ ಇದ್ದು, ಬಾಲ್ಯ ವಿವಾಹದಂತಹ ಅನಿಷ್ಟ ಪಿಡುಗುಗಳನ್ನು ನಿವಾರಣೆ ಮಾಡಬೇಕಿದೆ ಎಂದರಲ್ಲದೆ ಈ ಬಗ್ಗೆ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ, ನ್ಯಾಯವಾದಿಗಳಾದ ಮೋಬಿ ಪಿ.ಸಿ, ಲಿಂಗಪ್ಪ ಆರ್ ಮೇಸ್ತ, ಪ್ರಶಾಂತ್ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಶಿರೂರು ಪುಷ್ಪರಾಜ್ ಶೆಟ್ಟಿ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಶಿಕಲಾ, ಶಿರೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಮ್. ಆರ್ ನಾಯಕ್, ಎಸ್.ಡಿ.ಎಮ್.ಸಿ ಸದಸ್ಯರಾದ ವಾಸು ಮೇಸ್ತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ, ಕುಂದಾಪುರದ ವಕೀಲರಾದ ರಾಘವೇಂದ್ರ ಉಪ್ಪುಂದ ಇವರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿ ಬಡತನ, ಅನಕ್ಷರತೆ, ಮೂಢನಂಬಿಕೆ ಹೆತ್ತವರು ಮತ್ತು ಪಾಲಕರು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವುದು ಮುಂತಾದ ಕಾರಣಗಳಿಂದಾಗಿ ಬಾಲ್ಯ ವಿವಾಹಗಳು ನಡೆಯುತ್ತಿದ್ದು ವಯಸ್ಸಿಗೆ ಮೀರಿದ ಜವಾಬ್ದಾರಿ ಮಕ್ಕಳ ಮೇಲೆ ಹೇರುವುದರಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ, ಬಾಲ್ಯ ವಿವಾಹ ಕಾಯಿದೆಯಡಿ ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ, ಮಗುವನ್ನು ಹೆತ್ತವರು ಅಥವಾ ಪೋಷಕರು, ಬಾಲ್ಯ ವಿವಾಹವನ್ನು ಏರ್ಪಡಿಸುವ ಅಥವಾ ಕುಮ್ಮಕ್ಕು ನೀಡುವ ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳಬಹುದಾಗಿದೆ. ಈ ಅಪರಾಧಕ್ಕೆ ೨ ವರ್ಷಗಳವರೆಗೆ ಕಠಿಣ ಜೈಲು ವಾಸ ಅಥವಾ ೧ ಲಕ್ಷದವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ ಎಂದು ಹೇಳಿದರು.

Click here

Click here

Click here

Click Here

Call us

Call us

ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಾ ಕೆ.ಹೆಚ್ ಇವರು ಸ್ವಾಗತಿಸಿ, ಉಪನ್ಯಾಸಕರಾದ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು, ಕಾಲೇಜಿನ ಉಪನ್ಯಾಸಕರಾದ ವೆಂಕಟರಮಣ ಮೊಗವೀರ ಇವರು ವಂದಿಸಿದರು.

Leave a Reply