Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಮುದಾಯ ರಂಗ ರಂಗು ಮಕ್ಕಳ ಮೇಳಕ್ಕೆ ಚಾಲನೆ
    ಕುಂದಾಪ್ರದ್ ಸುದ್ಧಿ

    ಸಮುದಾಯ ರಂಗ ರಂಗು ಮಕ್ಕಳ ಮೇಳಕ್ಕೆ ಚಾಲನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಸಮುದಾಯ ಕುಂದಾಪುರ ಸಾಂಸ್ಕೃತಿಕ ಸಂಘಟನೆ, ಜೆಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ರಂಗರಂಗು ಮಕ್ಕಳ ಉಚಿತ ರಜಾಮೇಳ ವಡೇರಹೋಬಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.

    Click Here

    Call us

    Click Here

    ????

    ಜೆ.ಸಿ.ಐ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಬಣ್ಣಬಳಿದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಮೇಳವು ನಾನು ಭಾಗವಹಿಸುತ್ತಿರುವ ಕಾರ್ಯಕ್ರಮಗಳಲ್ಲೇ ವಿನೂತನವಾದದ್ದು. ರಜಾ ಮೇಳಗಳು ವ್ಯಾಪಾರವಾಗುತ್ತಿರುವ ದಿನಗಳಲ್ಲಿ ಕುಂದಾಪುರ ಸಮುದಾಯವು ಉಚಿತ ಮೇವನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು.

    Rangu-rangina-raja-mela3

    ಉದ್ಘಾಟನಾ ಸಭೆಯಲ್ಲಿ ವ್ಯಂಗ್ಯಚಿತ್ರಕಾರ ಕೇಶವ ಸಸಿಹಿತ್ಲು, ವಡೇರಹೋಬಳಿ ಸರಕಾರಿ ಶಾಲೆಯ ಮುಖ್ಯಶಿಕ್ಷಕರಾದ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸದಾನಂದ ಬೈಂದೂರು ಸ್ವಾಗತಿಸಿ ನಿರೂಪಿಸಿದರು.

    Click here

    Click here

    Click here

    Call us

    Call us

    Rangu-rangina-raja-mela2

    ಎಂಟುದಿನಗಳ ಕಾಲ ನಡೆಯುವ ಮೇಳದಲ್ಲಿ ಮಕ್ಕಳು ರಂಗಕರ್ಮಿ ವಾಸುದೇವ ಗಂಗೇರ ನಿರ್ದೇಶನದಲ್ಲಿ ‘ನಕ್ಕಳಾ ರಾಜಕುಮಾರಿ’ ಎಂಬ ನಾಟಕವನ್ನು ಅಭಿನಯಿಸುವರು. ಮೇಳದ ಸಮಾರೋಪದಲ್ಲಿ ನಾಟಕದ ಪ್ರದರ್ಶನವಿರುತ್ತದೆ. ಕುಂಬಾರಿಕೆಯೂ ಸೇರಿದಂತೆ ಶ್ರಮಸಂಸ್ಕೃತಿಯ ಮೂಲಕ ಒಡಮೂಡುವ ಕಲಾಪ್ರಕಾರಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಲಾಗುವುದು. ಉಳಿದಂತೆ, ಬಣ್ಣದ ಆಟ, ಗೆರೆಗಳ ಆಟ, ಕತ್ತರಿ ಆಟ, ನೀರಾಟ, ಸುತ್ತಾಟ ಹೀಗೆ ಮಕ್ಕಳು ವಿವಿಧ ಆಟಗಳಲ್ಲಿ ತೊಡಗಲಿದ್ದಾರೆ. ಕಲಾವಿದ ಭೋಜು ಹಾಂಡ, ಸಮುದಾಯದ ವಾಸುದೇವ ಗಂಗೇರ, ಚಿನ್ನಾ ವಾಸುದೇವ, ಬಾಲಕೃಷ್ಣ ಕೆ.ಎಂ, ಜಿ.ವಿ. ಕಾರಂತ, ನರಸಿಂಹ ಎಚ್, ಸಂದೇಶ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    JCI kundapura city Samudaya Kundapura
    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಮೊದಲ ಆದ್ಯತೆ: ಕುಂದಾಪ್ರ ಕನ್ನಡ ಹಬ್ಬ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

    28/07/2025

    ಫೋರ್ತ್‌ಫೋಕಸ್‌ಗೆ ʼ2025ರ ಗಮನಾರ್ಹ ಸಂಸ್ಥೆʼ ಪ್ರಶಸ್ತಿ – ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌ನಲ್ಲಿ ಗೌರವ

    18/06/2025

    ಸರ್ಕಾರಿ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಮುಂದುವರಿಕೆ: ಶಾಸಕ ಕೊಡ್ಗಿ ಮನವಿಗೆ ಸ್ಪಂದನೆ

    06/05/2025
    Leave A Reply Cancel Reply

    seventeen − 17 =

    Call us

    Click Here

    Call us

    Call us

    Call us
    Highest Viewed Recently
    • ಪ್ರಾಥಮಿಕ ಚಿಕಿತ್ಸೆಯ ಅರಿವು ಚಿಕ್ಕ ಮಕ್ಕಳಿಗೂ ಅತ್ಯವಶ್ಯ: ಡಾ. ಕೀರ್ತಿ
    • ಬಾರಕೂರು ಬಂಡೀಮಠ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ನಾಗರಡಿಯಲ್ಲಿ ಮಕರ ಸಂಕ್ರಾಂತಿ ಉತ್ಸವ
    • ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ: ಬಹುಮಾನ ವಿತರಣಾ ಸಮಾರಂಭ
    • ಕರ್ನಾಟಕ ಜಾನಪದ ಅಕಾಡೆಮಿಯ ಫೆಲೋಶಿಪ್: ಅರ್ಜಿ ಆಹ್ವಾನ
    • ಬೈಂದೂರು ಉತ್ಸವ -2026ರ ಅಂಗವಾಗಿ ಗುಜ್ಜಾಡಿಯಲ್ಲಿ ಗ್ರಾಮೋತ್ಸವ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.