ಹೆಮ್ಮಾಡಿ ಕಾಲೇಜು ಪ್ರಾಂಶುಪಾಲರಾಗಿ ಸುಧಾಕರ ವಕ್ವಾಡಿ

Call us

Call us

Call us

Call us

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸುಧಾಕರ ವಕ್ವಾಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಾಂಶುಪಾಲ ಸಿ.ಸೀತಾರಾಮ ಮಧ್ಯಸ್ಥ ಅವರಿಂದ ತೆರವಾದ ಸ್ಥಾನಕ್ಕೆ ನಿಯುಕ್ತರಾದ ಅವರು ಹೆಮ್ಮಾಡಿ ಶ್ರೀ.ವಿ.ವಿ.ವಿ. ಮಂಡಳಿಯ ಅಧ್ಯಕ್ಷ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರಿಂದ ನೇಮಕಗೊಂಡಿದ್ದಾರೆ.

Call us

Click Here

ಸುಧಾಕರ ವಕ್ವಾಡಿ ಅವರು ಹೆಮ್ಮಾಡಿ ಕಾಲೇಜಿನ ಸ್ಥಾಪಕ ಉಪನ್ಯಾಸಕರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ೧೯ ವರ್ಷಗಳ ಸೇವಾ ಅನುಭವ ಪಡೆದಿದ್ದಾರೆ. ರಂಗ ನಿರ್ದೇಶಕ, ನಟನಾಗಿ ರಾಷ್ಟ್ರಮಟ್ಟದವರೆಗೂ ಕನ್ನಡ ಸೇರಿದಂತೆ ಹಿಂದಿ, ಆಂಗ್ಲ ಭಾಷೆಯ ನಾಟಕ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.೧೯೯೬ ರಲ್ಲಿ ತೆರೆಕಂಡ ಕುಂದಾಪುರದ ದಲಿತ ಕವಿ ಕೆ.ಕೆ.ಕಾಳಾವರ‍್ಕರ್ ಅವರ ತುಳು ಚಲನಚಿತ್ರ ‘ಕಾಲ’ ದಲ್ಲಿ ಕಲಾತ್ಮಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಪತಂಜಲಿ ಹಾಗೂ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿದ್ಧ ಯೋಗ ಸಾಧಕರಾಗಿರುತ್ತಾರೆ.

Leave a Reply

Your email address will not be published. Required fields are marked *

14 − fourteen =