ಹೊಸಾಡು: ಗ್ರಾಮ ವಿಕಾಸ ಯೋಜನೆ ಗುದ್ದಲಿ ಪೂಜೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊಸಾಡು ಗ್ರಾಮದಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಶಾಸಕ ಕೆ, ಗೋಪಾಲ ಪೂಜಾರಿ ಬುಧವಾರ ಕುಂಜನಬೈಲು ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆಗೈದರು.

Call us

Click Here

ಆ ಬಳಿಕ ಮಾತನಾಡಿದ ಅವರು ಈ ಯೋಜನೆಯಡಿ ಗ್ರಾಮದ ೬ ರಸ್ತೆಗಳ ಕಾಂಕ್ರೀಟೀಕರಣ, ಗ್ರಾಮ ಪಂಚಾಯತ್ ಸಭಾ ಭವನ, ಹೊಸಾಡು ಗರಡಿಮನೆ, ನಾಲ್ಕು ಮಾರ್ಗಗಳಗೆ ಸೋಲಾರ್ ಬೀದಿದೀಪ ಅಳವಡಿಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ, ಗ್ರಾ.ಪಂ ನಡವಳಿ ಪ್ರಸಾರ, ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳು ನಡೆಯುವುವು. ಆ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಹೊಸದಾಗಿ ಆರಂಭವಾದ ಗ್ರಾಮ ಪಂಚಾಯತ್‌ಗೆ ಹಲವು ಅಗತ್ಯಗಳಿವೆ. ಅವುಗಳನ್ನು ಕ್ರಮಶ: ಈಡೇರಿಸಲಾಗುವುದು ಎಂದರು.

ಗ್ರಾ,ಪಂ, ಅಧ್ಯಕ್ಷ ಚಂದ್ರಶೇಖರ ಪೂಜಾರಿ ಸ್ವಾಗತಿಸಿದರು. ಶಾಸಕರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಊರಿನ ಪ್ರಮುಖರಾದ ಎಂ. ಎಂ. ಸುವರ್ಣ, ವಕೀಲ ಮಂಜುನಾಥ ಅರಾಟೆ, ವಿಜಯ ಪುತ್ರನ್, ಗ್ರಾ.ಪಂ. ಸದಸ್ಯರು, ಮಾಜಿ ಸದಸ್ಯ ಹರ್ಬರ್ಟ್ ಕ್ರಾಸ್ತಾ, ದೀಕ್ಷಾ ಯೂತ್ ಪ್ರೆಂಡ್ಸ್ ಮತ್ತು ರಿಂಗ್ ಫ್ರೆಂಡ್ಸ್ ಸಂಘಟನೆಯ ಸದಸ್ಯರು, ಗುತ್ತಿಗೆದಾರ ಧೀರಜ್, ಇತರರು ಇದ್ದರು.

Leave a Reply