ಕುಡಿಯುವ ನೀರಿನ ಕೊರತೆ ನೀಗಿಸಲು ಬದ್ಧ: ಶಾಸಕ ಗೋಪಾಲ ಪೂಜಾರಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನಲ್ಲಿ ಕುಡಿಯುವ ನೀರು ಅಗತ್ಯವಿರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

Call us

Click Here

ಅವರು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ತಾಲೂಕು ಜಾಗೃತಿ ಸಮಿತಿ ಅಭೆಯಲ್ಲಿ ಕುಡಿಯುವ ನೀರು, ೯೪ಸಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತ ಅಹವಾಲು ಆಲಿಸಿ ಬಳಿಕ ಮಾತನಾಡಿದರು. ಕೆಲವು ಕಡೆಗಳಲ್ಲಿ ಗ್ರಾಮ ಪಂಚಾಯತ್‌ನವರು ಕುಡಿಯುವ ನೀರಿನ ಪೂರೈಕೆಗೆ ಸರಕಾರದಿಂದ ಅನುದಾನ ಪಡೆಯುತ್ತಿದ್ದರೂ ತಮ್ಮದೇ ಅನುದಾನ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ಭಾರಿ ನೀರು ಪೂರೈಕೆ ಮಾಡುವ ಎಲ್ಲಾ ಟ್ಯಾಂಕರ್‌ಗಳ ಮೇಲೆಯೂ ಸರಕಾರದಿಂದ ಕೊಡಲ್ಪಟ್ಟ ನೀರು ಎಂಬ ಬ್ಯಾನರ್ ಹಾಕಿಸಿ ಎಂದು ಸೂಚಿಸಿದರು.

ಕಳೆದ ವರ್ಷವೂ ನೀರು ಪೂರೈಕೆ ಮಾಡುತ್ತಿದ್ದ ಗ್ರಾಮ ಪಂಚಾಯತ್‌ನ ಅಧಿಕಾರಿಗಳು ಈ ಭಾರಿ ಹೆಚ್ಚಿನ ಅನುದಾನಕ್ಕೆ ಬೇಡಿಕೆಯಿಟ್ಟರು.

Leave a Reply