ಜಾದೂಗಾರ ನಟ ಓಂಗಣೇಶ್ ಉಪ್ಪುಂದ ಅವರ ‘ಗಿರಿಗಿಟ್ಲಿ ಹುಡುಗ’ ಕೃತಿ ಬಿಡುಗಡೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ : ಅಂತರ್ರಾಷ್ಟ್ರೀಯ ಜಾದೂಗಾರ ನಟ ಓಂಗಣೇಶ್ ಉಪ್ಪುಂದ ಇವರು ಬರೆದ 35 ಸಣ್ಣ ಸಣ್ಣ ಘಟನೆಯಾಧರಿತ ಜನಮನ ಕಥನಗಳ ಸಂಕಲನ ’ಗಿರಿಗಿಟ್ಲಿ ಹುಡುಗ’ ಕೃತಿಯನ್ನು ಪದ್ಮವಿಭೂಷಣ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.

Call us

Click Here

ವಿಶ್ವ ಸಂಚಾರದ ಹಿನ್ನೆಲೆಯಿಂದ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಕೃತಿಯಿಂದ ತಮಗೆ ಇನ್ನಷ್ಟು ಶಾರದೆಯ ಅನುಗ್ರಹ ಹಾಗೂ ಮಂಜುನಾಥನ ಅನುಗ್ರಹ ಒದಗುವಂತಾಗಲಿ ಎಂದು ಅಭಿನಂದಿಸಿದ ಹೆಗ್ಗಡೆಯವರು ಶ್ರೀ ಮಂಜುನಾಥನ ಬೆಳ್ಳಿ ಪದಕವನ್ನು ಕೃತಿಕಾರ ಓಂಗಣೇಶರಿಗೆ ನೀಡಿ ಶುಭಹಾರೈಸಿದರು.

ಓಂಗಣೇಶ್ ಅವರ ಪ್ರಪ್ರಥಮ ಕೃತಿ ಕೂಡಾ ಈ ಕ್ಷೇತ್ರದಲ್ಲೇ ಲೋಕಾರ್ಪಣೆ ಹೊಂದಿದ್ದು ಬಳಿಕ ದುಬೈ ಬಹರೈನ್ ಮಸ್ಕತ್‌ಗಳಲ್ಲಿ ಪುನಃ ಬಿಡುಗಡೆಯಾಗಿತ್ತು. ಇದೀಗ ಖ್ಯಾತ ಲೇಖಕಿ ವೈದೇಹಿಯವರ ಮುನ್ನುಡಿ ಹಾಗೂ ಸುಧಾಕರ ದರ್ಬೆಯವರ ಮುಖಪುಟ ಹೊಂದಿದ ಇದು ನನ್ನ 6 ನೇ ಕೃತಿಯಾಗಿದ್ದು ಇಲ್ಲಿಂದು ಬಿಡುಗಡೆ ಕಾಣುತ್ತಿರುವುದು ನನ್ನ ಯೋಗ ಎಂದು ಕೃತಿಕಾರ ತಮ್ಮ ಪುಸ್ತಕದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗದ ಖ್ಯಾತ ಉದ್ಯಮಿ ಭಾಸ್ಕರ್ ಜಿ ಕಾಮತ್, ಬಿಜೂರು ಕಂಚಿಕಾನ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ರವೀಂದ್ರ ಕಿಣಿ, ಬೆಂಗಳೂರು ಅನಂತನಗರ ವೆಂಕಟ್ರಮಣ ದೇವಾಲಯದ ಸದಸ್ಯ ಕಿರಣ್ ನಾಯಕ್, ಪುಸ್ತಕ ಪ್ರಕಾಶಕಿ ವಿಜಯಾ ಗಣೇಶ್ ಕಾಮತ್, ಶೃದ್ಧಾ ಗಣೇಶ್ ಕಾಮತ್ ಉಪಸ್ಥಿತರಿದ್ದರು.

Jpeg

 

Click here

Click here

Click here

Click Here

Call us

Call us

Leave a Reply