ವಕ್ವಾಡಿ ಗುರುಕುಲದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಚೆಸ್ ಪಂದ್ಯಾವಳಿ ಸಂಪನ್ನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಬೌದ್ಧಿಕ ಶಕ್ತಿ ಮತ್ತು ಭಾವನಾತ್ಮಕ ಮನೋಧರ್ಮ ಒಬ್ಬ ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಪ್ರಮುಖ ಅಂಶಗಳಾಗಿದೆ. ಚದುರಂಗ ಆಟವಾಡುವುದರಿಂದ ಬೌದ್ಧಿಕ ವಿಕಾಸ, ಸಂಯಮ, ತಾಳ್ಮೆ ಮತ್ತು ತಾರ್ಕಿಕ ಯೋಚನೆಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಬೆಳೆಯುವ ವಿದ್ಯಾರ್ಥಿಗಳಲ್ಲಿ ಚದುರಂಗ ಕ್ರೀಡೆ ಆಡುವುದರ ಕುರಿತು ಪ್ರೋತ್ಸಾಹ ನೀಡಬೇಕು ಎಂದು ಅಂತರಾಷ್ಟ್ರೀಯ ಚೆಸ್ ತರಬೇತುದಾರರಾದ ಡೆರಿಕ್ ಪಿಂಟೋ ರವರರು ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿಯಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಹೊನಲು ಬೆಳಕಿನ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ .ಬಸ್ರೂರು ಅಪ್ಪಣ್ಣ ಹೆಗ್ಡೆರವರು ವಹಿಸಿದ್ದರು.

Call us

Click Here

ಕರ್ನಾಟಕದ ಪ್ರಪ್ರಥಮ ಹಾಗೂ ಅಂತರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ತೇಜ್‌ಕುಮಾರ್ ಎಮ್.ಎಸ್ ಸಾಂಪ್ರದಾಯಿಕ ರಾಟೆ ಎಳೆಯುವುದರ ಮೂಲಕ ಆಕರ್ಷಕ ಬಹುಮಾನಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಉದ್ಘಾಟನೆ ಮಾಡಿದರಲ್ಲದೇ ತಮ್ಮ ಚದುರಂಗ ಆಟದ ಅನುಭವಗಳನ್ನು ವಿವರಿಸಿದರು. ಈ ಬಹುಮಾನ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿನ್ಮಯಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಉಮೇಶ್ ಪುತ್ರನ್ ರವರು ಚದುರಂಗ ಮತ್ತು ವೈಜ್ಞಾನಿಕತೆ ಎಂಬ ವಿಷಯದ ಕುರಿತು ಮಾತನಾಡಿದರಲ್ಲದೇ ಗುರುಕುಲ ವಿದ್ಯಾಸಂಸ್ಥೆಯ ಈ ಕಾರ್ಯಕ್ರಮವನ್ನು ಶ್ಲಾಘೀಸಿದರು.

ಈ ಪಂದ್ಯಾಟವು ಕ್ರಮವಾಗಿ ಅಂಡರ್ 8,10,12,15 ಹಾಗೂ ಒಪನ್ ಎನ್ನುವ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ನಾನಾಭಾಗಗಳಿಂದ ೩೦೦ ಕ್ಕಿಂತಲೂ ಹೆಚ್ಚು ಸ್ಪರ್ಧಾಳುಗಳು ಆಗಮಿಸಿದ್ದರು. ಮುಖ್ಯ ನಿರ್ಣಾಯಕರಾಗಿ ವಸಂತ್ ಬಿ.ಎಚ್ ರವರು ಪಂದ್ಯಾವಳಿಯನ್ನು ಯಾವುದೇ ಗೊಂದಲಗಳಿಲ್ಲದೇ ನಡೆಸಿದರು ಹಾಗೂ ವಿಜೇತರ ಹೆಸರುಗಳನ್ನು ಘೋಷಿಸಿದರು. ಈ ಬಹುಮಾನ ವಿತರಣಾ ಸಮಾರಂಭದ ಅತಿಥಿಯಾಗಿ ಕರ್ನಾಟಕ ಚೆಸ್ ಅಸೋಸಿಯೆಶನ್‌ದ ಕಾರ್ಯದರ್ಶಿಗಳಾದ ಅರವಿಂದ್ ಶಾಸ್ತ್ರಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಕೆ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ.ಎಸ್.ಶೆಟ್ಟಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಲ್ಲಿ ಚದುರಂಗದ ಬಗ್ಗೆ ಇರುವ ಆಸಕ್ತಿಯ ಬಗ್ಗೆ ಪ್ರಶಂಸಿಸಿದರು ಹಾಗೂ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಿದರು. ಖ್ಯಾತ ಆರ್‌ಜೆ ನಯನ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳು ಈ ಕಾರ್ಯಕ್ರಮದ ಯಶಸ್ಸಿಗೆ ವಿಶೇಷವಾಗಿ ಸಹಕರಿಸಿದ ಕಶ್ವಿ ಚೆಸ್ ಕುಂದಾಪುರ ಹಾಗೂ ಪ್ರೋತ್ಸಾಹಿಸಿದ ಯು.ಕೆ.ಸಿ.ಎ ಮತ್ತು ಉಡುಪಿ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಶನ್‌ರವರನ್ನು ಸ್ಮರಿಸಿದರು.

 

Click here

Click here

Click here

Click Here

Call us

Call us

Leave a Reply