ಬೈಂದೂರು ಕ್ಷೇತ್ರದ ಅಭಿವೃದ್ಧಿ ನೋಡಿ ಗೆಲ್ಲಿಸಲಿದ್ದಾರೆ ಮತದಾರರು: ಕೆ. ಗೋಪಾಲ ಪೂಜಾರಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗ್ರಾಮಗಳಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಹಲವು ಸೌಕರ್ಯಗಳು ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಕಳೆದ ಐದು ವರ್ಷದಲ್ಲಿ ಶ್ರಮಿಸಿದ್ದು, ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಭಾರಿ ಮತ್ತೆ ಗೆಲ್ಲಿಸಲಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಹೇಳಿದರು.

Call us

Click Here

ಅವರು ಭಾನುವಾರ ಸಂಜೆ ಬಿಜೂರು, ಕೆರ್ಗಾಲ್, ನಂದನವನ ಮೊದಲಾದೆಡೆ ನಡೆದ ಮತದಾರರ ಭೇಟಿ ಬಳಿಕ ಮಾತನಾಡಿ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯ ಸರಕಾರ ಹಮ್ಮಿಕೊಂಡ ಹತ್ತಾರು ಜನಪ್ರಿಯ ಯೋಜನೆಗಳು, ರೈತರ ಸಾಲಮನ್ನ, ಆಶ್ರಯ ಮನೆ ಸಾಲ ಮನ್ನ ಸೇರಿದಂತೆ ಹಲವು ಸೌಲಭ್ಯಗಳು ಜನಸಾಮಾನ್ಯರಿಗೆ ಹೆಚ್ಚು ತಲುಪಿದೆ ಎಂದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ದೇಶದ ರೈತರು ಹಾಗೂ ದಮನಿತರ ಪರವಾಗಿ ಧ್ವನಿಯೆತ್ತಿದ್ದ ಪಕ್ಷ ಕಾಂಗ್ರೆಸ್. ಸರ್ವರೂ ಸಮಾನರೆಂಬ ತತ್ವದಡಿ ಬಡವರಿಗೆ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡು ಅವರ ಉನ್ನತಿಗಾಗಿ ಶ್ರಮಿಸಿದೆ. ಭಾರತದಲ್ಲಿ ಇಂದು ನಡೆದಿರುವ ಪ್ರತಿ ಆವಿಷ್ಕಾರ ಹಾಗೂ ಪ್ರಗತಿಯ ಹಿಂದೆ ಕಾಂಗ್ರೆಸ್ ಪಕ್ಷದ ಕೊಡುಗೆ ಇದ್ದೇ ಇದೆ ಎಂದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಮುಖಂಡರುಗಳಾದ ರಘುರಾಮ ಶೆಟ್ಟಿ, ಗೋಕುಲ್ ಶೆಟ್ಟಿ, ಮೋಹನ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply