ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಿಂದೆ ಕುಂಭ ನೆಂಬ ರಕ್ಕಸನಿದ್ದರೆ.. ಕಲಿಯುಗದಲ್ಲಿ ಸಹಸ್ರಾರು ಕುಂಭಾಸುರರು ಇದ್ದಾರೆ. ಭೀಮ ಕುಂಭ ನೆಂಬ ರಕ್ಕಸನ ವಧಿಸಿದರೆ, ಇಂದು ತಾಯಿ ಕಲಿಯುಗದ ಕುಂಭಾಸುರರ ಮರ್ಧಿಸಲು ಪವಿತ್ರ ಭೀಮ ಕ್ಷೇತ್ರ ಕುಂಭಾಶಿಯಲ್ಲಿ ದೇವಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಮಂದಿರದಲ್ಲಿ ಪ್ರತಿಷ್ಠಾಪಿತಳಾಗಿದ್ದಾಳೆ. ಪ್ರಜೆಗಳಿಗೆ ಮಾರಕ ಕುಂಭನನ್ನು ಕತ್ತಿಯಿಂದ ವಧಿಸಿದ್ದಕ್ಕಾಗಿ ಕುಂಭ ರಕ್ಕಸ, ಅಶಿ ಎಂದರೆ ಕತ್ತಿ. ಭೀಮ ಕುಂಭನ ವಧಿಸಿದ ಹಿನ್ನೆಲೆಯೇ ಕುಂಭಾಸಿ ಹೆಸರು.
..ಹೀಗೆ ಮಹಾಭಾರತದ ಭೀಮ ಹಾಗೂ ಕುಲಿಯುಗದ ಕುಂಭನಂತಾ ರಕ್ಕಸಿರಿಗೆ ತಳಕು ಹಾಕಿದವರು ಉಡುಪಿ ಅದಮಾರು ಮಠ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ.
ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸಮರ್ಪಣೆ ನಿಮಿತ್ತ ಗಂಗೊಳ್ಳಿ ಹೊಸ್ಮನೆ ದಿ.ಶ್ರೀಮತಿ ಗೌರಮ್ಮ ಮತ್ತು ದಿ.ಮಂಜುನಾಥ ಶೇರೆಗಾರ್ ವೇದಿಕೆಯಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಮಾತನಾಡುತ್ತಿದ್ದರು.
ಪ್ರಸಕ್ತ ನಾಯಕರೆನಿಸಿ ಕೊಂಡವರು ತನಗಾಗಿ ಯಜ್ಞಯಾಗಾಧಿಗಳ ಮಾಡುತ್ತಾ, ಸಮಾಜಕ್ಕೆ ಎನ್ನುವಾಗ ಮೂಢನಂಬಿಕೆ ಎನ್ನುವ ಕುಂಭುನಂತ ರಕ್ಕಸರ ವಧಿಸಲು ಭೀನಮನಂತವರು ಪದೇ ಪದೇ ಭೂಮಿಗೆ ಇಳಿದು ಬರಬೇಕಾಗುತ್ತದೆ. ಹಾಗಾಗಿ ಭೀಮ ಪದೇ ಪದೇ ಭೂಮಿಗೆ ಬರಲು ಸಾಧ್ಯವಿಲ್ಲ. ದೇವಿ ನೀನು ದೇವಸ್ಥಾನದಲ್ಲಿ ಕೂತು ರಕ್ಕಸರಂತವರ ಸನ್ಮಾರ್ಗದಲ್ಲಿ ನಡೆಸು ಎಂದು ನಾರಾಯಣ ದೇವಿಯನ್ನು ಕಳುಹಿಸಿದ್ದು, ದೇವರಾಯ ಶೇರೆಗಾರ್ ಮೂಲಕ ದೇವಿಗೆ ಕುಂಭಾಶಿಯಲ್ಲಿ ನೆಲೆ ಕಲ್ಪಿಸಿದ್ದಾನೆ ಎಂದರು.
ಚುನಾವಣೆ ಬಂದಾಗ ಗುಟ್ಟಾಗಿ ಬಂದು ಯಜ್ಞಯಾಗಾಧಿ ಮಾಡಿ, ಒಳಗೊಂದು ಹೊರಗೊಂದು ನಾಟಕವಾಡುವ ದುಷ್ಠರ ಸಂಹಾರಕ್ಕೆ ಮತ್ತೊಮ್ಮೆ ಬರಲು ಭೀಮನಲ್ಲಿ ಪ್ರಾರ್ಥಿಸಿದಾಗ, ತಾನು ಬರೋಲ್ಲ ನನ್ನ ಅಮ್ಮನನ್ನು ಕಳುಹಿಸುತ್ತೇನೆ ಎಂದು ತಾಯಿ ದುರ್ಗಾಪರಮೇಶ್ವರಿ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ ಎಂದು ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಧರ್ಮದರ್ಶಿ ಶ್ರೀಧರ ಕಾಮತ್, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ, ಕೋಡಿ ಶ್ರೀ ರಾಮಕ್ಷತ್ರಿಯ ಸಂಘ ಅಧ್ಯಕ್ಷ ಜನಾರ್ದನ ನಾಯಕ್, ವಾಸ್ತು ತಜ್ಞಾ ಕೆ.ಬಸವರಾಜ್ ಶೆಟ್ಟಿಗಾರ್, ಬಿಎಸ್‌ಎನ್‌ಎಲ್ ಆಪೀಸ್ ಸುಪರಿಂಟೆಂಡ್ ಗೋಪಾಲ, ಕುಂದಾಪುರ ಸವಿತಾ ಸಮಾಜ ಅಧ್ಯಕ್ಷ ಸುಭಾಸ್ ಬಂಡಾರಿ, ಸಾಮಾಜಿಕ ಕಾರ‍್ಯಕರ್ತ ಗಣೇಶ್ ಕೆದೂರು ಇದ್ದರು.
ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ನೇವಸ್ಥಾನ ನಿರ್ಮಾತೃ ದೇವರಾಯ ಎಂ.ಶೇರೆಗಾರ್ ಹಾಗೂ ಅನಿತಾ ಅವರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಗೌರವಿಸಿದಿರು.
ದೇವರಾಯ ಎಂ.ಶೇರೆಗಾರ್ ಸ್ವಾಗತಿಸಿದರು. ವಂದ್ಯಾ ಕಾಮತ್ ಪ್ರಾರ್ಥಿಸಿದರು. ಗೋಪಾಲ್ ಹಾಗೂ ಸುಮನಾ ರಾಮದಾಸ್ ನಿರೂಪಿಸಿದರು.